Header Ads
Breaking News

ಅಮೃತ ಪ್ರಕಾಶ ಪತ್ರಿಕೆಯ 22ನೇ ಸರಣಿ ಕಾರ್ಯಕ್ರಮ

ಅಮೃತಾ ಪ್ರಕಾಶ ಪತ್ರಿಕೆಯ 22ನೇ ಸರಣಿ ಕಾರ್ಯಕ್ರಮದ ಅಂಗವಾಗಿ ಉದ್ಯಮಿ ಹಾಗೂ ಲೇಖಕಿ ವೀಣಾ ರಾವ್ ವಿಟ್ಲರವರ ಮರೀಚಿಕೆಯ ಬೆನ್ನಟ್ಟಿ ಕಥಾ ಸಂಕಲನದ ಬಿಡುಗಡೆ ಸಮಾರಂಭ ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆಯಿತು.ಮಂಗಳೂರಿನ ಪತ್ರಿಕಾಭವನದಲ್ಲಿ ಗಣ್ಯರು ಪುಸ್ತಕ ಬಿಡುಗಡೆಗೊಳಿಸಿದರು. ಇದೇ ವೇಳೆ ಮಾತನಾಡಿದ ಡಾ. ಅಣ್ಣಯ್ಯ ಕುಲಾಲ್ ಅವರು, ಪುಸ್ತಕ ಬಿಡುಗಡೆ ಸಾಹಿತ್ಯ ಲೋಕದ ನಿರಂತರ ಚಲನೆ. ಮರೀಚಿಕೆ ಬೆನ್ನಟ್ಟಿ ಪುಸ್ತಕದಲ್ಲಿ ವಿಶೇಷತೆ ಇದೆ. ಈ ಕಥಾ ಸಂಕಲನ ನೈಜ ಸ್ಪುಟ ಭಾವನೆಗಳು ಇದರಲ್ಲಿ ಇದೆ ಎಂದು ಹೇಳಿದರು.
ಆನಂತರ ಸಮಾಜ ಸೇವಕರಾದ ಭಾರತಿ ರಾವ್ ಅವರು, ಲೇಖಕಿ ವೀಣಾ ರಾವ್ ಅವರ ಮೊದಲ ಕಥಾ ಸಂಕಲನ ಬಿಡುಗಡೆಗೊಂಡಿದೆ. ವೀಣಾ ರಾವ್ ಅವರು ಇನ್ನು ಹೆಚ್ಚಿನ ಕೃತಿಗಳನ್ನು ಜಾರಿಗೆ ತರಲಿ ಎಂದು ಹಾರೈಸಿದರು.ಈ ಸಂದರ್ಭ ಲೇಖಕಿ ವೀಣಾರಾವ್ ವಿಟ್ಲ, ಡಾ, ಮಾಲತಿ ಶೆಟ್ಟಿ ಮಾಣೂರು, ವಿಜಯಲಕ್ಷ್ಮೀ ಭಟ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *