Header Ads
Header Ads
Breaking News

ಅಮೃತ ವಿದ್ಯಾಲಯಂನಲ್ಲಿ ಯತಿ ಪ್ರಧಾನ ಕಾರ್ಯಕ್ರಮ:ಭಾವುಕರಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ವಿದ್ಯಾರ್ಥಿಗಳು

ವಿದ್ಯಾರ್ಥಿಗಳ ಮುಖದಲ್ಲಿ ಒಂದು ಕಡೆ ಸಂತೋಷ. ಇನ್ನೊಂದು ಕಡೆ ಇನ್ನು ಈ ಶಾಲೆಯನ್ನು ಬಿಟ್ಟು ಹೋಗಬೇಕಲ್ಲ ಅನ್ನುವ ಬೇಸರ. ಇಂತಹ ಸನ್ನಿವೇಶ ಕಂಡುಬಂದಿದ್ದು ಮಂಗಳೂರಿನ ಅಮೃತ ವಿದ್ಯಾಲಯಂನಲ್ಲಿ. ಹೌದು, ಸಂಸ್ಥೆಯ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಯತಿ ಪ್ರಧಾನ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವು ಭಾವುಕ ಸನ್ನಿವೇಶಗಳಿಗೆ ಸಾಕ್ಷಿಯಾಯಿತು.ಅಮೃತ ವಿದ್ಯಾಲಯಂನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ದ.ಕ ಜಿಲ್ಲಾ ಪ್ರಾಂಶುಪಾಲ ಸಂಘದ ಅಧ್ಯಕ್ಷ ಹಾಗೂ ಮಧುಸೂದನ್ ಕುಶೆ ಪಿ.ಯು ಕಾಲೇಜ್‌ನ ಪ್ರಾಂಶುಪಾಲರಾದ ಕೆ. ಕೃಷ್ಣ ಉಪಾಧ್ಯಾಯ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಒಬ್ಬ ವಿದ್ಯಾರ್ಥಿ ದೊಡ್ಡವನಾಗಬೇಕಾದರೆ ಅವನಿಗೆ ಉತ್ತಮವಾದ ಸಂಸ್ಕಾರ ಹಾಗೂ ವಿದ್ಯಾಭ್ಯಾಸ ಬೇಕು. ಇದು ಈ ಶಾಲೆಯಲ್ಲಿ ದೊರೆಯುತ್ತಿದೆ ಎಂದರು.ಬಳಿಕ ಮಾತನಾಡಿದ ಅತಿಥಿ ಡಾ.ವಸಂತ್ ಕುಮಾರ್ ಪೆರ್ಲ ಅವರು, ಭಾರತೀಯ ಪರಂಪರೆಯ ಮೌಲ್ಯವನ್ನು ಪ್ರತಿನಿಧಿಸುವಂತಹ ಶಿಕ್ಷಣ ಈ ಶಾಲೆಯಲ್ಲಿ ದೊರೆಯುತ್ತಿದೆ ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಪುಸ್ತಕದ ಜ್ಞಾನವಲ್ಲದೆ ಭಾರತೀಯ ಮೌಲ್ಯವನ್ನು , ಪರಂಪರೆಯನ್ನು ಪಡೆಯುತ್ತಿದ್ದಾರೆ ಎಂದರು. 2018-2019ನೇ ಸಾಲಿನಲ್ಲಿ ನಿರ್ಗಮಿಸುತ್ತಿರುವ ವಿಧ್ಯಾರ್ಥಿಗಳು ದೀಪವನ್ನು ಬೆಳಗಿಸಿ ಭಾವುಕರಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಜೊತೆಗೆ ವಿದ್ಯಾರ್ಥಿಗಳ ಪೋಷಕರು ಮಾತನಾಡಿ ಸಂಸ್ಥೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಅಮೃತ ವಿದ್ಯಾಲಯಂ ಶಾಲೆಯ ಪ್ರಾಂಶುಪಾಲರಾದ ರಾಮಚಂದ್ರ ಭಟ್, ಉಪ ಪ್ರಾಂಶುಪಾಲರಾದ ಅನುಪಮಾ ರಾವ್, ವಿದ್ಯಾರ್ಥಿಗಳ ಪೋಷಕರು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *