Breaking News

ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ, ಆಲಾಪ ನರಸಿಪುರ ಶವವಾಗಿ ಇತಾಕ ಬಳಿ ಪತ್ತೆ

ಇದೇ ೧೭ರಂದು ನಾಪತ್ತೆಯಾಗಿದ್ದ ಭಾರತದ ವಿದ್ಯಾರ್ಥಿ ಆಲಾಪ ನರಸಿಪುರ ಅವರ ಶವ ಪತ್ತೆಯಾಗಿದೆ. ಆಲಾಪ ಅವರು ಕಾರ್ನೆಲ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ವಿಭಾಗದ ವಿದ್ಯಾರ್ಥಿ.
ಆಲಾಪ ಅವರ ಗುರುತನ್ನು ಪೊಲೀಸರು ಖಚಿತಪಡಿಸಿದ್ದಾರೆ. ಪ್ರಕರಣ ತನಿಖೆಯ ಹಂತದಲ್ಲಿದ್ದು, ಸಾವಿನ ಕಾರಣ ಇನ್ನೂ?ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಕಾರ್ನೆಲ್ ವಿಶ್ವವಿದ್ಯಾಲಯದ ಪೊಲೀಸರು, ನ್ಯೂಯಾರ್ಕ್ ಹಾಗೂ ಇಥಾಕ ಪೊಲೀಸರ ಜತೆಗೂಡಿ ಇಥಾಕ ಜಲಪಾತ ಸಮೀಪದ ಕೊರಕಲು ಹಾಗೂ?ಹತ್ತಿರದ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದರು ಮತ್ತು ವಿದ್ಯಾರ್ಥಿ ನಾಪತ್ತೆಯಾಗಿರುವ ಪ್ರಕಟಣೆಯನ್ನೂ?ಹೊರಡಿಸಿದ್ದರು.
ಕಾಲೇಜು ಆವರಣದಲ್ಲಿ ಇದೇ ೧೭ರ ಬೆಳಗ್ಗೆ ಕೊನೆಯ ಬಾರಿಗೆ ಆಲಾಪ ಅವರು ಕಾಣಿಸಿಕೊಂಡಿದ್ದರು. ಮಹತ್ವಾಕಾಂಕ್ಷಿಯಾಗಿದ್ದ ಅವರ ವಿದ್ಯಾಭ್ಯಾಸವು ಇದೇ ಡಿಸೆಂಬರ್ನಲ್ಲಿ ಮುಕ್ತಾಯವಾಗುತ್ತಿತ್ತು. ಆಲಾಪ ಅವರು ಫ್ರಿಸ್ಬೀ ತಂಡದ ಚತುರ ಆಟಗಾರನಾಗಿದ್ದ. ಫೋಟೊ ತೆಗೆದುಕೊಳ್ಳುವುದು ಆತನ ಹವ್ಯಾಸವಾಗಿತ್ತು. ಆತನ ಸಾವು ಬೇಸರ ತರಿಸಿದೆ ಎಂದು ಕಾಲೇಜಿನ ಉಪಾಧ್ಯಕ್ಷ ರಿಯಾನ್ ಲೊಂಬಾರ್ಡಿ ಅವರು ತಿಳಿಸಿದ್ದಾರೆ.

Related posts

Leave a Reply