Breaking News

ಅಮೆರಿಕದ ತಯಾರಿ ಭಾರತದಲ್ಲಿ ಜೋಡಣೆ, ಆಪಲ್ ಐಫೋನ್ ಮಾರುಕಟ್ಟೆಗೆ

ಅಮೆರಿಕದ ತಂತ್ರಜ್ಞಾನ ದೈತ್ಯ ಕಂಪೆನಿ ಆ್ಯಪಲ್, ಭಾರತದಲ್ಲಿ ಪ್ರಾಯೋಗಿಕವಾಗಿ ಜೋಡಣೆ ಮಾಡಿದ ಐಫೋನ್ಗಳ ಮಾರಾಟ ಆರಂಭಿಸಿದೆ.
ಸೀಮಿತ ಸಂಖ್ಯೆಯ ಐಫೋನ್ ಎಸ್‌ಇಗಳನ್ನು ದೇಶದ ಆಯ್ದ ಮಳಿಗೆಗಳಲ್ಲಿ ಮಾತ್ರ ಮಾರಾಟ ಮಾಡಲಾಗುವುದು ಎಂದು ಉದ್ಯಮದ ಮೂಲಗಳು ತಿಳಿಸಿವೆ. ಆದರೆ, ಈ?ಬಗ್ಗೆ ಆ್ಯಪಲ್ ಯಾವುದೇ ಸ್ಪಷ್ಟನೆ ವಿವರಣೆ ನೀಡಿಲ್ಲ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಿನ್ಯಾಸ ಮಾಡಿದ ಮತ್ತು ಭಾರತದಲ್ಲಿ ಜೋಡಣೆ ಮಾಡಿದ ಫೋನ್ ಎಂದು ಬಾಕ್ಸ್ ಮೇಲೆ ಮುದ್ರಿಸಲಾಗಿದೆ. ೩೨ ಜಿ.ಬಿ ಸಂಗ್ರಹಣಾ ಸಾಮರ್ಥ್ಯದ ಐಫೋನ್ ಎಸ್‌ಇ ಬೆಲೆ ರೂ. ೨೭,೮೦೦ ಎಂದು ನಮೂದಿಸಲಾಗಿದೆ.
ಬೆಂಗಳೂರು ಘಟಕದಲ್ಲಿ ಏಪ್ರಿಲ್ನಲ್ಲಿ ಈ ಫೋನ್ಗಳ ಜೋಡಣಾ ಕಾರ್ಯ ಮುಗಿದಿದೆ ಎಂದು ಮೂಲಗಳು ತಿಳಿಸಿವೆ. ಆ್ಯಪಲ್ ತನ್ನ ಬಹು ಜನಪ್ರಿಯ ೪ ಇಂಚು ಪರದೆಯ ಐಫೋನ್ ಎಸ್‌ಇಗಳ ಪ್ರಾಯೋಗಿಕ ಜೋಡಣೆಗೆ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಘಟಕದಲ್ಲಿ ಕೆಲವು ದಿನಗಳ ಹಿಂದೆ ಚಾಲನೆ ನೀಡಿತ್ತು. ಸಣ್ಣ ಪ್ರಮಾಣದಲ್ಲಿ ಜೋಡಣೆ ಆರಂಭಿಸಿದ್ದ ಕಂಪೆನಿ, ಈ ತಿಂಗಳ ಒಳಗೆ ದೇಶಿ ಮಾರುಕಟ್ಟೆಗೆ ಮೊಬೈಲ್ ಬಿಡುಗಡೆ ಮಾಡುವುದಾಗಿಯೂ ಹೇಳಿತ್ತು. ಆ್ಯಪಲ್ ಸಂಸ್ಥೆ ಪರವಾಗಿ ತೈವಾನಿನ ವಿಸ್ಟ್ರನ್ ಈ ಫೋನ್ ತಯಾರಿಸಿದೆ.

Related posts

Leave a Reply