Breaking News

ಅಮೆರಿಕಾಧ್ಯಕ್ಷ ಟ್ರಂಪ್ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿವೆ, ಹಸ್ತಕ್ಷೇಪದ ವಿಚಾರ ಹೇಳಿದ ಮಾಜೀ ಅಟಾರ್ನಿ ಭರಾರ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪದ ಕುರಿತು ನಡೆಯುತ್ತಿರುವ ವಿಚಾರಣೆಗೆ ಅಡ್ಡಿಪಡಿಸಿರುವ ಡೊನಾಲ್ಡ್ ಟ್ರಂಪ್ ವಿರುದ್ಧ ಪ್ರಕರಣ ದಾಖಲಿಸಲು ಸಾಕಷ್ಟು ಸಾಕ್ಷ್ಯಗಳಿವೆ ಎಂದು ಮಾಜಿ ಅಟಾರ್ನಿ ಭಾರತ ಸಂಜಾತ ಪ್ರೀತ್ ಭರಾರ ಹೇಳಿದ್ದಾರೆ.
ಅಟಾರ್ನಿ ಹುದ್ದೆಗೆ ರಾಜೀನಾಮೆ ನೀಡುವ ಮುನ್ನ ಟ್ರಂಪ್, ತನ್ನೊಂದಿಗೆ ಉತ್ತಮ ಸ್ನೇಹ ಬೆಳೆಸಲು ಪ್ರಯತ್ನಿಸಿದ್ದರು ಎಂದು ಅವರು ಹೇಳಿದ್ದಾರೆ.
ವಜಾಗೊಂಡ ಎಫ್ಬಿ‌ಐ ನಿರ್ದೇಶಕ ಜೇಮ್ಸ್ ಕ್ಯಾಮಿ ಅವರೊಂದಿಗೂ ಇದೇ ರೀತಿಯಲ್ಲಿ ಟ್ರಂಪ್ ನಡೆದುಕೊಂಡಿದ್ದರು ಎಂದು ತಿಳಿಸಿದ್ದಾರೆ. ಟ್ರಂಪ್ ಆಡಳಿತ ಅಸ್ತಿತ್ವಕ್ಕೆ ಬಂದನಂತರ ಅಮೆರಿಕದ ಉನ್ನತ ಹುದ್ದೆಗೆ ರಾಜೀನಾಮೆ ನೀಡಿದ ೪೬ ಅಟಾರ್ನಿಗಳಲ್ಲಿ ಭರಾರ ಕೂಡ ಒಬ್ಬರು. ‘ಟ್ರಂಪ್ ವಿರುದ್ಧ ದಾಖಲೆಗಳಿಲ್ಲ ಎನ್ನಲು ಯಾವುದೇ ರೀತಿಯ ಆಧಾರವಿಲ್ಲ’ ಎಂದು ಎಬಿಸಿ ನ್ಯೂಸ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
ಉನ್ನತ ಹುದ್ದೆಗಳಿಂದ ವಜಾಗೊಳಿಸುವ ಅಧಿಕಾರ ಟ್ರಂಪ್ ಅವರಿಗಿದೆ. ಆದರೆ ಅಂತಹ ಅಧಿಕಾರ ಬಳಕೆಯಲ್ಲಿ ಲೋಪವಾಗಿದ್ದರೆ ಅವರಿಗೆ ಯಾವುದೇ ಶಾಸನಾತ್ಮಕ ರಕ್ಷಣೆ ಸಿಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಶಿಷ್ಟಾಚಾರ ಉಲ್ಲಂಘಿಸಿ ಟ್ರಂಪ್ ತಮಗೆ ಅನೇಕ ಬಾರಿ ಕರೆ ಮಾಡಿದ್ದಾರೆ ಎಂದೂ ಅವರು ಹೇಳಿದ್ದಾರೆ. ಈ ಮೂಲಕ ಸ್ನೇಹ ಬೆಳೆಸಲು ಪ್ರಯತ್ನಿಸಿದ್ದರು ಎಂದಿದ್ದಾರೆ. ಅಧ್ಯಕ್ಷರ ಸಂಗಡಿಗರು ಭಾಗಿಯಾಗಿರುವ ಮತ್ತು ಇನ್ನಿತರ ಮಹತ್ವದ ಪ್ರಕರಣಗಳನ್ನು ತನಿಖೆ ನಡೆಸುತ್ತಿದ್ದ ವ್ಯಕ್ತಿಯೊಂದಿಗೆ ಅಮೆರಿಕ ಅಧ್ಯಕ್ಷರು ವೈಯಕ್ತಿಕ ಮಾತುಕತೆ ನಡೆಸುವುದು ವಿಚಿತ್ರವಾಗಿದೆ ಎಂದು ಸಂದರ್ಶನದಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.

Related posts

Leave a Reply