Breaking News

ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ಭಾರತೀಯ ಸೇರಿ ಹನ್ನೆರಡು ಗಗನಯಾತ್ರಿಗಳ ಆಯ್ಕೆ

ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಮುಂದಿನ ಬಾಹ್ಯಾಕಾಶ ಯಾತ್ರೆಗಳಿಗಾಗಿ ಹೊಸದಾಗಿ ೧೨ ಗಗನಯಾನಿಗಳು ಆಯ್ಕೆಯಾಗಿದ್ದಾರೆ. ಇವರಲ್ಲಿ ಭಾರತ ಮೂಲದ ೩೯ರ ರಾಜಾಚಾರಿ ಅವರೂ?ಒಬ್ಬರು.
ಇವರು ಅಮೆರಿಕ ವಾಯುಪಡೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಗಗನಯಾತ್ರಿ ಆಗಲು ಇಚ್ಛಿಸಿ ೧೮,೩೦೦ ಮಂದಿ ಅರ್ಜಿ ಸಲ್ಲಿಸಿದ್ದರು. ಅಮೆರಿಕದ ಲೊವಾ ರಾಜ್ಯದ ರಾಜಾಚಾರಿ ಅವರು, ಅಮೆರಿಕ ಏರ್ ಫೋರ್ಸ್ ಅಕಾಡೆಮಿಯಿಂದ ಬಾಹ್ಯಾಕಾಶ ಎಂಜಿನಿಯರಿಂಗ್ ಹಾಗೂ?ಎಂಜಿನಿಯರಿಂಗ್ ವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ಬಳಿಕ ಮೆಸಾಚ್ಯುಸೆಟ್ಸ್ ತಾಂತ್ರಿಕ ವಿಶ್ವವಿದ್ಯಾಲಯದಿಂದ ವಾಯುಯಾನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಮೆರಿಕದ ನೇವಲ್ ಪೈಲಟ್ ಸ್ಕೂಲ್ನಿಂದಲೂ?ಪದವಿ ಪಡೆದಿದ್ದಾರೆ.
೧೯೮೯ರಿಂದ ಆರಂಭಿಸಿ, ನಾಸಾ ಈವರೆಗೆ ೩೫೦ ಗಗನಯಾನಿಗಳನ್ನು ಆಯ್ಕೆ ಮಾಡಿಕೊಂಡಿದೆ. ಈ ಗಗನಯಾತ್ರಿಗಳು ಆಗಸ್ಟ್ನಿಂದ ೨ ವರ್ಷಗಳವರೆಗೆ ತರಬೇತಿ ಪಡೆಯಲಿದ್ದಾರೆ.

Related posts

Leave a Reply