Header Ads
Header Ads
Breaking News

ಅಮ್ಮನಡೆಗೆ ನಮ್ಮ ನಡೆ ಕಟೀಲಿಗೆ 5ನೇ ವರ್ಷದ ಪಾದಯಾತ್ರೆ

ಲೋಕ ಕಲ್ಯಾಣಾರ್ಥ, ಸಕಲ ಕಷ್ಠ ನಿವಾರಣೆಗೆ ಹಾಗೂ ಗ್ರಹಚಾರ ದೋಷ ನಿವಾರಣೆಗಾಗಿ ಅಮ್ಮನಡೆಗೆ ನಮ್ಮ ನಡೆ ೫ನೇ ವರ್ಷದ ಪಾದಯಾತ್ರೆಯು ವಿಜೃಂಭಣೆಯಿಂದ ನಡೆಯಿತು.


ಸಂದೀಪ್ ಶೆಟ್ಟಿ ಮರವೂರು ನೇತೃತ್ವದಲ್ಲಿ ವರ್ಷಂಪ್ರತಿ ನಡೆಯುವ ಅಮ್ಮನಡೆಗೆ ನಮ್ಮ ನಡೆ ಮರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಹೊರಟು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡರು.
ಮಂಗಳೂರಿನ ಕದ್ರಿ ಮಠದ ಶ್ರೀ ೧೦೦೮ ರಾಜಯೋಗಿ ನಿರ್ಮಲ್‌ನಾಥಜೀ ಮಹಾರಾಜ್ ಅವರು ಪಾದಯಾತ್ರೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಅಮ್ಮನಡೆಗೆ ನಮ್ಮ ನಡೆ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.
ಪಾದಯಾತ್ರೆಯ ಸಮಿತಿ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಮರವೂರು ಮಾತನಾಡಿ, ಈ ಧಾರ್ಮಿಕ ಕಾರ್ಯಕ್ರಮಕ್ಕೆ ಪ್ರತಿವರುಷ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಿರುವುದು ವಿಶೇಷ ಎಂದು ಹೇಳಿದರು.
ದಾರಿಯುದ್ದಕ್ಕೂ ನಿರಂತರ ಭಜನೆ, ಚೆಂಡೆಯೊಂದಿಗೆ ಆಕರ್ಷಕ ನಡಿಗೆ ನಡೆಯಿತು.
ಈ ಸಂದರ್ಭ ಸಂಸದ ನಳಿನ್‌ಕುಮಾರ್ ಕಟೀಲ್, ಮಂಗಳೂರು ಪಾಲಿಕೆ ಮೇಯರ್ ಕವಿತಾ ಸನಿಲ್, ಕಟೀಲು ಕ್ಷೇತ್ರದ ಆಡಳಿತ ಮೊಕ್ತೇಸರರಾದ ಸನತ್ ಕುಮಾರ್ ಶೆಟ್ಟಿ, ಕೆ. ವಾಸುದೇವ ಅಸ್ರಣ್ಣ, ಲಕ್ಷ್ಮೀನಾರಾಯಣ ಅಸ್ರಣ್ಣ, ಅನಂತ ಪದ್ಮನಾಭ ಅಸ್ರಣ್ಣ ಮತ್ತಿತರರು ಉಪಸ್ಥಿತರಿದ್ದರು.
ವರದಿ: ನಾಗರಾಜ್ ಮಂಗಳೂರು

Related posts

Leave a Reply