Header Ads
Header Ads
Breaking News

ಅಮ್ಮನೆಡೆಗೆ ನಮ್ಮ ನಡೆ ಕಟೀಲು ಕ್ಷೇತ್ರಕ್ಕೆ 5 ನೇ ವರ್ಷದ ಪಾದಯಾತ್ರೆ ಅಭಿಯಾನ ಫೆಬ್ರವರಿ 4 ರಂದು ನಡೆಯಲಿರುವ ಕಾರ್ಯಕ್ರಮ

ಅಮ್ಮನೆಡೆಗೆ ನಮ್ಮ ನಡೆ ಪಾದಯಾತ್ರೆಯು ಫೆಬ್ರವರಿ ೪ರಂದು ಮರವೂರು ಸೇತುವೆ ಬಳಿ ಇರುವ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರ ಸಮಾವೇಶ ಹಾಗೂ ಸಾಮೂಹಿಕ ಪ್ರಾರ್ಥನೆ ಜರುಗಲಿರುವುದು ಎಂದು ಕಾರ್ಯಕ್ರಮದ ಆಯೋಜಕರಾದ ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದರು.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಂದು ಬೆಳಗ್ಗೆ 7 ಗಂಟೆಗೆ ಕಟೀಲು ಕ್ಷೇತ್ರದ ಪ್ರಧಾನ ಅರ್ಚಕರಾದ ಅಸ್ರಣ್ಣರು, ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ವಿವಿಧ ಕ್ಷೇತ್ರದ ಗಣ್ಯರ ಉಪಸ್ಥಿತಿಯಲ್ಲಿ ಪಾದಯಾತ್ರೆಗೆ ಚಾಲನೆ ದೊರೆಯುವುದು. ಅಲ್ಲದೆ ಫೆಬ್ರವರಿ 11 ರಂದು ಪಂಚಮನಡೆ ರಿಕ್ಷಾದಕಡೆ ಸೇವಾ ಅಭಿಯಾನ ನಡೆಯಲಿದೆ. ಬಡ ರಿಕ್ಷಾ ಚಾಲಕರಿಗೆ ಆರ್ಥಿಕ ನೆರವು ನೀಡುವ ಬಗ್ಗೆ ಈ ಬಾರಿ ನೊಂದಾವಣೆ ಪ್ರಕ್ರಿಯೆ ಮಾಡಿದ್ದು, ಸಾವಿರಾರು ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಆಯೋಜಕರಾದ ಸುಕೇಶ್ ಶೆಟ್ಟಿ ಮುಂಡಾರು ಗುತ್ತು, ನಿವೇದಿತಾ ಎನ್. ಶೆಟ್ಟಿ, ಬೆಳ್ಳಿಪಾಡಿ, ಸಂದೀಪ್ ಶೆಟ್ಟಿ ಮರವೂರು, ವೇಣುಗೋಪಾಲ್ ಪುತ್ರನ್ ಉಪಸ್ಥಿತರಿದ್ದರು.

Related posts