Header Ads
Header Ads
Breaking News

ಅಮ್ಮನೆಡೆಗೆ ನಮ್ಮ ನಡೆ ಯಶಸ್ವಿ

ಮರವೂರು ಸಂದೀಪ್ ಶೆಟ್ಟಿ ಸಾರಥ್ಯದಲ್ಲಿ ಮರವೂರುನಿಂದ ಕಟೀಲು ದೇವಸ್ಥಾನಕ್ಕೆ ಕೈಗೊಂಡ ೬ನೇವರ್ಷದ ಪಾದಯಾತ್ರೆ ಅಭಿಯಾನ ಅಮ್ಮನೆಡೆಗೆ ನಮ್ಮ ನಡೆಗೆ ಸಾವಿರಾರು ಭಕ್ತರು ಪಾಲ್ಗೊಂಡಿದ್ರು. ದಾರಿಯುದ್ದಕ್ಕೂ ನಿರಂತರ ಚೆಂಡೆ ಹಾಗೂ ಭಜನ ಮಂಡಳಿ ತಂಡದ ಮೂಲಕ ಕಟೀಲಿನೆಡೆಗೆ ಭಕ್ತರು ಹೆಜ್ಜೆ ಹಾಕಿದ್ರು.


 ಲೋಕ ಕಲ್ಯಾಣಾರ್ಥ, ಸಕಲ ಕಷ್ಟ ನಿವಾರಣೆ ಹಾಗೂ ಗ್ರಹಚಾರ ದೂಷ ನಿವಾರಣೆಗಾಗಿ ಮರವೂರು ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದವರೆಗೆ ನಡೆದ ಆರನೇ ವರ್ಷದ ಅಮ್ಮನೆಡೆಗೆ ನಮ್ಮ ನಡೆ ಪಾದಯಾತ್ರೆಯ ಅಭಿಯಾನಕ್ಕೆ ಶ್ರೀರಾಮ ವಿದ್ಯಾ ಸಂಸ್ಥೆಯ ಡಾ|ಪ್ರಭಾಕರ್ ಭಟ್ ಚಾಲನೆ ನೀಡಿದರು. ಕಟೀಲು ದುರ್ಗಾಪರಮೇಶ್ವರೀ ಚಿತ್ರವನ್ನೊಳಗೊಂಡ ಪುಷ್ಪಾಲಂಕೃತ ದೇವರರಥ, ಬ್ರಹ್ಮ ವಿಷ್ಣು, ಮಹೇಶ್ವರ ,ಯಕ್ಷಗಾನ ವೇಷಧಾರಿಗಳು, ಭಜನಾ ಮಂಡಳಿ ತಂಡದ ಮೂಲಕ ಕಟೀಲಿನೆಡೆಗೆ ಭಕ್ತರು ಹೆಜ್ಜೆ ಹಾಕಿದರು. ಭಕ್ತರ ಆಯಾಸವನ್ನು ತಣಿಸಲು, ಮರವೂರಿನಿಂದ ಕಟೀಲುವರೆಗೆ ಸುಮಾರು ೩೦ಕಡೆಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಬೆಲ್ಲದ ನೀರು, ಮಜ್ಜಿಗೆ, ಪಾನಕ ಮತ್ತಿತರ ಪಾನೀಯಗಳ ವ್ಯವಸ್ಥೆ ಮಾಡಿದ್ದರು. ದೇವಳಕ್ಕೆ ಭೇಟಿ ನೀಡಿದ ಭಕ್ತರಿಗೆ ಹಿಂದಿರುಗಲು ಉಚಿತ ವಾಹನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಜಿಲ್ಲೆಯ ವಿವಿಧ ವಿದ್ಯಾ ಸಂಸ್ಥೆ ಮತ್ತು ಖಾಸಗಿ ವಾಹನವನ್ನು ಬಳಸಲಾಗಿತ್ತು. ಜನಜಂಗುಳಿಯನ್ನು ನಿಯಂತ್ರಿಸಲು ದೇವಳದ ರಥಬೀದಿಯನ್ನು ವಾಹನದಿಂದ ಮುಕ್ತಗೊಳಿಸಲಾಗಿತ್ತು, ಭಕ್ತರಿಗೆ ದೇವಳದ ಒಳ ಪ್ರವೇಶಿಸಲು ಸರದಿಯ ವ್ಯವಸ್ಥೆ ಮಾಡಲಾಗಿತ್ತು,

ಪಾದಯಾತ್ರೆಯು ಮರವೂರಿನಲ್ಲಿ ಸುಮಾರು 7.೦೦ ಗಂಟೆಗೆ ಕ್ಕೆ ಅಧಿಕೃತವಾಗಿ ಪ್ರಾರಂಭವಾಗಿದ್ದು, ಭಕ್ತರು ೩ ಗಂಟೆಯಿಂದಲೇ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮುಂಜಾನೆ ಸುಮಾರು 6ಗಂಟೆಯಿಂದಲೇ ದೇವಳದಲ್ಲಿ ಭಕ್ತರ ಜನ ಸಾಗರವಿತ್ತು. ದಕ್ಷಿಣ ಕನ್ನಡ, ಉಡುಪಿ ಮಾತ್ರವಲ್ಲದೆ ಉತ್ತರ ಕನ್ನಡದ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಕಟೀಲು ದೇವಳದ ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳು ಮತ್ತು ನೂರಾರು ಜನರು ಸ್ವಯಂ ಸೇವಕರಾಗಿ ಪಾಲ್ಗೊಂಡರು. ಜನರ ಸಕಲ ಕಷ್ಟ ನಿವಾರಣೆಗಾಗಿ ಕಟೀಲು ದೇವಿಯ ಸನ್ನಿದಿಗೆ ಭಕ್ತರೊಂದಿಗೆ ಕಳೆದ ಆರು ವರ್ಷದಿಂದ ನಮ್ಮ ಸಮಿತಿಯು ಪಾದಯಾತ್ರೆಯನ್ನು ಹಮ್ಮಿಕೊಂಡು ಬರುತ್ತಿದೆ ಎಂದು ಅಮ್ಮನಡೆಗೆ ನಮ್ಮ ನಡೆ ಪಾದಯಾತ್ರೆ ಸಮಿತಿ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಮರವೂರು ಹೇಳಿದರು.

ಕಟೀಲು ದೇವಳದ ಆಡಳಿತ ಮುಕ್ತೇಸರ ವಾಸುದೇವ ಆಸ್ರಣ್ಣ, ಸನತ್ ಕುಮಾರ್ ಶೆಟ್ಟಿ, ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಸಂಸದ ನಳಿನ್ ಕುಮಾರ್ ಕಟೀಲ್ ಶಾಸಕರಾದ ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಶ್ರೀ ಆದಿಶಕ್ತಿಭುವನೇಶ್ವರಿ ಅಧಿನಾಥ ಸಿದ್ಧಪೀಠ ಧರ್ಮದರ್ಶಿ ಪ್ರವೀಣ್ ರಾವ್, ಎ.ಜೆ ಸಮೂಹ ಸಂಸ್ಥೆ ಅಧ್ಯಕ್ಷರಾದ ಡಾ. ಎ,ಜೆ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

30 ಸಾವಿರಕ್ಕೂ ಹೆಚ್ಚು ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡು ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರಕ್ಕೆ ಭೇಟಿ ನೀಡಿ, ಶ್ರೀದೇವಿಯ ದರ್ಶನ ಪಡೆದುರು.ಕಟೀಲು ದೇಗುಲದಬೀದಿಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಬಜಪೆ ಮತ್ತು ಪೆರ್ಮುದೆ ಚರ್ಚ್ ವತಿಯಿಂದ ಕ್ರೈಸ್ತ ಬಾಂದವರು ಭಕ್ತರಿಗಾಗಿ ಬೆಲ್ಲ ನೀರಿನ ವ್ಯವಸ್ಥೆ ಮಾಡಿದ್ದು ಶಾಘ್ಲನೀಯವಾಗಿತ್ತು.

Related posts

Leave a Reply