Header Ads
Header Ads
Header Ads
Breaking News

ಅಮ್ಮನ 64 ನೇ ಅವತರಣೋತ್ಸವ ಉಡುಪಿಯ ನಾರಾಯಣಗುರು ಸಭಾಂಗಣದಲ್ಲಿ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಬ್ಯಾಗ್, ಮಹಿಳೆಯರಿಗೆ ಸೀರೆ ವಿತರಣೆ ಸೇವಾಕಾರ್ಯಕ್ರಮದಡಿ ವಿವಿಧ ವಸ್ತುಗಳ ವಿತರಣೆ

ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಉಡುಪಿ ಇದರ ವತಿಯಿಂದ ಅಮ್ಮನ 64 ನೇ ಅವತರಣೋತ್ಸವ ಕಾರ್ಯಕ್ರಮ ಉಡುಪಿಯ ಬನ್ನಂಜೆ ನಾರಾಯಣಗುರು ಸಭಾಂಗಣದಲ್ಲಿ ನಡೆಯಿತು. ಸಮಾರಂಭವನ್ನು ಮಂಗಳೂರು ಅಮೃತಾನಂದಮಯಿ ಮಠದ ಮಠಾದಿಪತಿ ಬ್ರಹ್ಮಚಾರಣಿ ಮಂಗಳಾಮೃತ ಚೈತನ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.

ಮಾನವೀಯ ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ, ಮಹಿಳೆಯರಿಗೆ ಸೀರೆ ವಿತರಣೆ, ಎರಡು ಶಲೆಗೆ ಅಕ್ಕಿ ವಿತರಣೆ, ಗಿಡಗಳ ವಿತರಣೆ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಮಾತನಾಡಿದ ಉದ್ಯಮಿ ಎ.ಸಿ.ಕುಂದರ್ ಮಾನವೀಯ ಕಾರ್ಯದ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸುವುದು ಅಮ್ಮನವರ ಸಂಕಪ್ಲವಾಗಿದೆ. ಇಲ್ಲಿ ಅನೇಕರಿಗೆ ಸಹಾಯ ಮಾಡುವ ಮೂಲಕ ಅವರ ಸಂಕಲ್ಪ ಸಾಕಾರಗೊಂಡಿದೆ ಎಂದರು. ಸಮಾರಂಭದಲ್ಲಿ ಆದ್ಯಾತ್ಮಿಕ ಚಿಂತಕ ಶಿವಕುಮಾರ್, ನಾಗರಾಜ್ ಎನ್, ಶಿವಪ್ರಕಾಶ್ ಶೆಟ್ಟಿ, ಶಶಿಧರ್ ಮುಂತಾದವರು ಉಪಸ್ಥಿತರಿದ್ದರು.

ವರದಿ:ಪಲ್ಲವಿ ಸಂತೋಷ್

Related posts

Leave a Reply