Header Ads
Header Ads
Breaking News

ಅಮ್ಮ ಕಲಾವಿದರು ಬಹರೈನ್ ವತಿಯಿಂದ ಪೂಜಾ ಮಹೋತ್ಸವ:ಭಕ್ತಿ ಪರವಶರಾದ ಭಕ್ತ ಜನವೃಂದ

ಸಾಮಾಜಿಕ, ಧಾರ್ಮಿಕ ಹಾಗೂ ಕಲಾಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ದ್ವೀಪ ದೇಶ ಬಹರೈನ್‌ನ ಅಮ್ಮ ಕಲಾವಿದರು ವತಿಯಿಂದ ಶ್ರೀ ಶನೀಶ್ವರ ಪೂಜೆ , ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಿಶೇಷ ಭಜನಾ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು.

ಮನಾಮ ನಗರದ ಶ್ರೀ ಕೃಷ್ಣ ಮಂದಿರ ಸಭಾಂಗಣದಲ್ಲಿ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾದರು.
ತಾಯ್ನಾಡಿನಿಂದ ಆಗಮಿಸಿದ ಪುರೋಹಿತ ಹರ್ಷ ಭಟ್ ಪೆರುವಾಯಿಯವರು ಕಥಾ ಶ್ರವಣ, ಧಾರ್ಮಿಕ ಪ್ರವಚನ, ಪೂಜಾ ವಿಧಿವಿಧಾನಗಳನ್ನು ವಿದ್ಯುಕ್ತವಾಗಿ ನೆರವೇರಿಸಿ ಭಕ್ತಾದಿಗಳನ್ನು ಹರಸಿದರು.
ವಿಶೇಷವಾಗಿ ಮಕ್ಕಳ ತಂಡ , ಮಹಿಳೆಯರ ಹಾಗೂ ಪುರುಷರ ತಂಡಗಳಿಂದ ಕುಣಿತ ಭಜನೆಯ ಮೂಲಕ ಸಂಕೀರ್ತನ ಕಾರ್ಯಕ್ರಮ ಅಚ್ಚುಕಟ್ಟಾಗಿ ಪ್ರಸ್ತುತಿಗೊಂಡಿತು. ಹರಿಣಿ ಉತ್ಕರ್ಷ್ ಶೆಟ್ಟಿ , ನಮಿತ ಸಾಲ್ಯಾನ್, ಯಕ್ಷಿತ್ ಶೆಟ್ಟಿ , ದಿವ್ಯರಾಜ್ ರೈ,ಸಂದೀಪ್ ಮೆಂಡನ್, ಸುಧೀರ್ ಶೆಟ್ಟಿ ಯವರು ಭಜನಾ ತರಬೇತಿ ನೀಡಿ ಸಹಕರಿಸಿದ್ದರು.ಮಂಗಳಾರತಿ, ಪ್ರಸಾದ ವಿತರಣೆಯ ಬಳಿಕ ವಿಶೇಷ ಅನ್ನಪ್ರಸಾದ ಭೋಜನ ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಪುರೋಹಿತ ಹರ್ಷ ಭಟ್‌ರನ್ನು ಅಮ್ಮ ಕಲಾವಿದರು ಬಹರೈನ್ ಸದಸ್ಯರೊಡಗೂಡಿ ಶಾಲು , ಸ್ಮರಣಿಕೆ ನೀಡುವ ಮೂಲಕ ಗೌರವಿಸಲಾಯಿತು.

Related posts

Leave a Reply

Your email address will not be published. Required fields are marked *