Header Ads
Header Ads
Breaking News

ಅಮ್ಮ ಪಟಾಕಿ ಮೇಳದಿಂದ ಅಶಕ್ತ ಮಕ್ಕಳಿಗೆ ಸಹಾಯಹಸ್ತ : ಸಂಪಾದನೆಯ ಭಾಗವನ್ನು ದಾನ ಮಾಡುವವನೇ ಶ್ರೀಮಂತ

ಕುಂದಾಪುರ: ಯಾವುದೇ ವೃತ್ತಿಯರಲಿ ತನ್ನ ಆದಾಯದ ಲಾಭಾಂಶದಲ್ಲಿ ಒಂದು ಭಾಗವನ್ನು ಅಶಕ್ತರ ಬದುಕಿಗೆ ದಾನ ಮಾಡುವವನೇ ಜಗತ್ತಿನ ಅತೀ ದೊಡ್ಡ ಶ್ರೀಮಂತರೆನ್ನಿಸುತ್ತಾನೆ ಎಂದು ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಹೇಳಿದ್ದಾರೆ. ಅವರು ಕುಂದಾಪುರದ ನೆಹರೂ ಮೈದಾನದಲ್ಲಿ ಅಮ್ಮ ಪಟಾಕಿ ಮೇಳದ ವತಿಯಿಂದ ಹಮ್ಮಿಕೊಳ್ಳಲಾದ ಅಶಕ್ತ ಮಕ್ಕಳಿಗೆ ಸಹಾಯಹಸ್ತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಗತ್ತಿನಲ್ಲಿಯೇ ಅತೀ ದೊಡ್ಡ ಶ್ರೀಮಂತರೆನ್ನಿಸಿಕೊಂಡಿದ್ದ ಬಿಲ್ ಗೇಟ್ಸ್ ಮತ್ತು ವಾರನ್ ಬಫೆಟ್ ಅವರು ಶ್ರೀಮಂತಿಕೆಯಲ್ಲಿ ಹೇಗೆ ಪೈಪೋಟಿ ನಡೆಸುತ್ತಿದ್ದರೋ ಅದೇ ರೀತಿ ದಾನ ಮಾಡುವುದರಲ್ಲಿಯೂ ಪೈಪೋಟಿ ನಡೆಸುತ್ತಿದ್ದರು. ಅದಕ್ಕಾಗಿಯೆ ಅವರ ಹೆಸರು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಯಿತು. ಅಮ್ಮ ಪಟಾಕಿ ಮೇಳದ ಸಹೋದರರು ಕೂಡಾ ತಮ್ಮ ಒಂದು ವಾರದ ವ್ಯಾಪಾರದಲ್ಲಿ ಬಂದ ಲಾಭಾಂಶದಲ್ಲಿ ಇಬ್ಬರು ಅಶಕ್ತ, ಅನಾರೋಗ್ಯ ಪೀಡಿತ ಮಕ್ಕಳಿಗೆ ಧನಸಹಾಯ ಮಾಡುವ ಮೂಲಕ ಮಾನವೀಯತೆಯ ಶ್ರೀಮಂತಿಕೆಯನ್ನು ಮೆರೆದಿದ್ದಾರೆ ಎಂದು ಅವರು ಹೇಳಿದರು.
ಇದೇ ಸಂದರ್ಭ ಮಾತನಾಡಿದ ವಿಕಾಸ್ ಹೆಗ್ಡೆ ಕೋಳ್ಕೆರೆ ಮಳೆಯ ಭೀಬತ್ಸ ನರ್ತನದ ನಡುವೆಯೂ ನಡೆಸಿದ ವ್ಯಾಪಾರದಲ್ಲಿ ಬಂದ ಅಲ್ಪ ಲಾಭವನ್ನ್ನೂ ಮಕ್ಕಳಿಗೆ ನೀಡುವ ಮೂಲಕ ಅಮ್ಮ ಪಟಾಕಿ ಮೇಳದ ಸಂಚಾಲಕರು ಮಾನವೀಯತೆ ಮೆರೆದಿರುವುದು ಸಮಾಜಕ್ಕೆ ಮಾದರಿ ಎಂದರು.
ಬಳಿಕ ಮಾತನಾಡಿದ ಅಮ್ಮ ಪಟಾಕಿ ಮೆಲದ ಸಂಚಾಲಕ ಶಶಿರಾಜ್ ಪೂಜಾರಿ, ಈ ಬಾರಿ ವ್ಯಾಪಾರ ಕಡಿಮೆಯಿತ್ತು. ಮುಂದಿನ ವರ್ಷ ವ್ಯಾಪಾರದ ಲಾಭದಲ್ಲಿ ಬೆಳಕು ನೋಡದ ಅಂಧ ಮಕ್ಕಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು, ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಬಳಿಕ ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿರುವ ತ್ರಾಸಿಯ ಕೋದಂಡರಾಮ ಮತ್ತು ಶೋಭಾ ದಂಪತಿಗಳ ಪುತ್ರಿ ಎಂಟು ವರ್ಷ ಪ್ರಾಯದ ಸೋನಿ ಅವರ ಆರೋಗ್ಯ ನಿರ್ವಹಣೆಗೆ ಹಾಗೂ ಅಪಧಮನಿ ಸಮಸ್ಯೆಯಿಂದ ಬಳಲುತ್ತಿರುವ ಹಲ್ತೂರು ಗೋಪಾಲ ಮತ್ತು ಆಶಾ ದಂಪತಿಯ ಮೂರೂವರೆ ವರ್ಷದ ಮಗು ಸಾನ್ವಿಕಾಳ ಆರೋಗ್ಯ ನಿರ್ವಹಣೆಗಾಗಿ ತಲಾ ಹತ್ತು ಸಾವಿರ ರೂಪಾಯಿಗಳನ್ನು ನೀಡಲಾಯಿತು. ಈ ಸಂದರ್ಭ ಪುರಸಭಾ ಸದಸ್ಯ ಶ್ರೀಧರ ಶೇರೆಗಾರ್, ಚಿತ್ರ ನಟ ರಥಿಕ್ ಮುರ್ಡೇಶ್ವರ, ಅಮ್ಮ ಪಟಾಕಿ ಮೇಳದ ಸಂಚಾಲಕರಾದ ವಿಶ್ವರಾಜ್ ಪೂಜಾರಿ, ಶಶಿರಾಜ್ ಪೂಜಾರಿ ಹಾಗೂ ವಿಜಯ್ ಎ.ವಿ, ಪ್ರಶಾಂತ್ ಕೋಟೇಶ್ವರ, ನಾಗೇಶ್, ನಟೇಶ್ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *