Header Ads
Header Ads
Header Ads
Breaking News

ಅಯೋಧ್ಯೆ ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆ : ಮಹತ್ವದ ಸಭೆಯಲ್ಲಿ ಕರ್ನಾಟಕದ ಮೂವರು ಸಂತರು ಭಾಗಿ

ಅಯೋಧ್ಯೆ ಬಗ್ಗೆ ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ತೀರ್ಪು ಬಂದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮಹತ್ವದ ಸಭೆಯೊಂದನ್ನು ಆಯೋಜಿಸಲಾಗಿತ್ತು. ಕರ್ನಾಟಕದ ಮೂವರು ಸಂತರು ಪಾಲ್ಗೊಂಡಿದ್ದಾರೆ ಎಂದು ಉಡುಪಿಯ ಪೇಜಾವರ ಶ್ರೀ ಹೇಳಿದರು. ಸಭೆಯಲ್ಲಿ ಉಡುಪಿ ಪೇಜಾವರ ಮಠಾಧೀಶರು, ಸುತ್ತೂರು ಶ್ರೀಗಳು, ಆದಿಚುಂಚನಗಿರಿ ಸ್ವಾಮೀಜಿ ಭಾಗಿಯಾಗಿದ್ದಾರೆ. ಸಭೆಯಲ್ಲಿ ನಲ್ವತ್ತರಿಂದ ಐವತ್ತು ಹಿಂದೂ ಮುಸ್ಲಿಂ ಸಂತರು ಭಾಗವಹಿಸಿದ್ದರು. ಎಲ್ಲರೂ ಸೌಹಾರ್ದದಿಂದ ತೀರ್ಪುನ್ನು ಸ್ವಾಗತಿಸಿದರು. ದೇಶದ ಏಕತೆ, ಪ್ರಗತಿಗೆ ಸೌಹಾರ್ದದಿಂದ ಕಾರ್ಯ ಮಾಡಲು ತೀರ್ಮಾನ ಮಾಡಿದ್ದಾರೆ. ತಾತ್ವಿಕ ಭಿನ್ನತೆ ಇದ್ದರೂ ಎಲ್ಲರೂ ಏಕಕಂಠದಿಂದ ಒಪ್ಪಿದ್ದಾರೆ. ದೇಶದ ಎಲ್ಲಾ ಭಾಗಗಳಿಂದ ಸಂತರು, ಮೌಲ್ವಿಗಳು ಬಂದಿದ್ದರು. ಸೌಹಾರ್ದ ವಾತಾವರಣದಲ್ಲಿ ಚರ್ಚೆ ನಡೆಯಿತು, ಯಾರಿಗೂ ತೀರ್ಪಿನ ಬಗ್ಗೆ ಅಸಮಾಧಾನ ಇರಲಿಲ್ಲ. ದೇಶದ ಧಾರ್ಮಿಕ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಘಟ್ಟ. ಯಾವುದೇ ಅಸಮಾಧಾನ, ಘರ್ಷಣೆ ವಿರೋಧ ಇಲ್ಲದೆ ಸೌಹಾರ್ಧ ದಿಂದ ಒಟ್ಡಾಗಿ ಕೆಲಸ ಮಾಡುವ ತೀರ್ಮಾನ ಮಾಡಲಾಯಿತು. ರಾಷ್ಟ್ರದ ಹಿತ ದೃಷ್ಟಿಯಿಂದ ಇದೊಂದು ಉತ್ತಮ ಬೆಳವಣಿಗೆ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.

Related posts

Leave a Reply

Your email address will not be published. Required fields are marked *