Header Ads
Header Ads
Breaking News

ಅಯ್ಯೋ ಭುಜಂಗಾ…..! ವಿ4 ನ್ಯುಸ್ ರಿಯಾಲಿಟಿ ಚೆಕ್. ಬೆತ್ತಲೆಯಾಯ್ತು ನಗರಸಭೆ.

ರಾಜನಿಗೆ ಕಿರೀಟವೇ ಸೊಬಗು…ಪಾರ್ಕ್ ಗೆ ವಿದ್ಯುತ್ ದೀಪಗಳೇ ಸೊಬಗು..ಮುಕುಟ ಪ್ರಾಯವಾಗಬೇಕಿರುವ ಪಾರ್ಕ್‌ಗೆ ವಿದ್ಯುತ್ ಸಂಪರ್ಕನೇ ಇಲ್ಲ…ಉಡುಪಿಯ ಹೃದಯ ಭಾಗದ ಪಾರ್ಕ್ ನ ಅವ್ಯವಸ್ಥೆ ನೋಡಿದ್ರೆ ಉಡುಪಿ ನಗರಸಭೆ ಬೆತ್ತಲಾಗುತ್ತೆ… ಇದು ವಿ4 ನ್ಯುಸ್ ನ ರಿಯಾಲಿಟಿ ಚೆಕ್ .. ಭುಜಂಗಾ ಪಾರ್ಕ್ ನ ಅವ್ಯವಸ್ಥೆ ನೋಡಿ. ಕೋಟ್ಯಾಂತರ ರೂಪಾಯಿ ಖರ್ಚು., ವಾಕಿಂಗ್ ಟ್ರ್ಯಾಕ್, ಪ್ರಾಕೃತಿಕ ಸೌಂದರ್ಯ ಸವಿಯಲು ಪಾರ್ಕ್ ಅಭಿವೃದ್ದಿ, ಅಲ್ಲಲಿ ಬೆಂಚು ನಿರ್ಮಿಸಿ ಸುಮಾರು ಒಂದುವರೆ ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿರುವ ಉಡುಪಿಯ ಹೃದಯ ಭಾಗದಲ್ಲಿರುವ ಅಜ್ಜರಕಾಡು ಭುಜಂಗ ಪಾರ್ಕ್ ಕತ್ತಲೆ ಆದ್ರೆ ಹೇಗೆ ಇರುತ್ತೆ ಗೊತ್ತಾ? ಇಲ್ಲಿದೆ ನೋಡಿ ವಿ4ನ್ಯುಸ್ ನ ರಿಯಾಲಿಟಿ ಚೆಕ್ … ಯೆಸ್ ಇದು ಉಡುಪಿಯ ಅಜ್ಜರಕಾಡು ಭುಜಂಗ ಪಾರ್ಕೇ …ಆದ್ರೆ ಕತ್ತಲಾದ್ರೆ ಇದು ಈ ರಿತಿ ಇರುತ್ತದೆ..ಇದಕ್ಕೆ ಕಾರಣ ಇಲ್ಲಿ ಇಡೀ ಪಾರ್ಕ್ ಗೆ ಲೈಟ್ ವ್ಯವಸ್ಥೆ ನೇ ಇಲ್ಲದಿರುವುದು. ಕಳೆದ ಹಲವು ದಿನಗಳಿಂದ ಈ ಪಾರ್ಕ್ ನಲ್ಲಿ ಲೈಟ್ ವ್ಯವಸ್ಯ್ಹೆ ಇಲ್ಲದೇ ವಿಹಾರಾರ್ಥಿಗಳು ಕತ್ತಲಾಗುವ ಮುಂಚೆಯೇ ಮನೆ ಸೇರಬೇಕಗಿದೆ. ಮಹಿಳೆಯರ ರಕ್ಷಣೆಗಂತೂ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಗಳು ಕಾವಲು ಕಾಯಬೇಕಿದೆ. ಇದಕ್ಕೆ ಕಾರಣ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ. ಕೋಟ್ಯಾಂತರ ರೂ ಖರ್ಚು ಮಾಡಿರುವ ಭುಜಂಗ ಪಾರ್ಕ್ ಗೆ ವಿದ್ಯುತ್ ಸಂಪರ್ಕ ಸರಿ ಮಾಡಲು ಆಗದ ಅಧಿಕಾರಿಗಳನ್ನ, ಆಡಳಿತವನ್ನ ಏನು ಎನ್ನಬೇಕು? ಈಗಾಗಲೇ ಚುನಾವಣೆ ಘೋಷಣೆ ಆಗಿರುವುದ್ರಿಂದ ಎಲ್ಲರೂ ಗುಪ್ ಚುಪ್ ಆಗಿರೋದು ಸತ್ಯ.. ಆದ್ರೆ ನಿತ್ಯ ಜನರಿಗೆ ತೊಂದರೆ ತಪ್ಪಿದಲ್ಲ. ನಗರಸಭೆ ಈ ರೀತಿ ಅನೈತಿಕ ಚಟುವಟಿಕೆಗೆ ಅವಕಾಶ ಮಾಡುವುದರ ಬದಲು ಅನೈತಿಕ ಚಟುವಟಿಕೆಯವರಿಗೆ ಬೇರೆ ಜಾಗವನ್ನೇ ನಿರ್ಮಿಸಿ ಕೊಡಿ ಅಂತ ಆಕ್ರೋಶವನ್ನು ಸಮಾಜಿಕ ಕಾರ್ಯಕರ್ತರು ಹೊರಹಾಕುತ್ತಿದ್ದಾರೆ. ಭುಜಂಗ ಪಾರ್ಕ್ ನಲ್ಲಿ ಸಾಂಸ್ಕೃತಿಕ ಚಟುವಟಿಕೆಗಾಗಿ ರಂಗ ಮಂದಿರವನ್ನು ಸುಮಾರು ೧ಕೋಟಿ ರೂ ಖರ್ಚಿನಲ್ಲಿ ತಯಾರಿಸಲಾಗಿದೆ. ಆದ್ರೆ ಆ ರಂಗಮಂದಿರದ ಒಳಗೆ ಯಾರು ಯಾರೋ ಮಲಗುತ್ತಾರೆ. ಕುಡಿದು ಮಜಾ ಉಡಾಯಿಸುತ್ತಾರೆ. ಇದಕ್ಕೆ ಇಲ್ಲಿ ಸಿಕ್ಕಿರುವ ಮದ್ಯದ ಬಾಟಲಿಗಲೇ ಸಾಕ್ಶ್ಗಿಯಾಗಿದೆ. ಇನ್ನು ಹೆಚ್ಚು ಹೇಳಬೇಕೆಂದರೆ ಇಲ್ಲಿರುವ ಒಂದು ವಿದ್ಯುತ್ ತನ್ನೂ ಕಳ್ಳಕಾಕರು ಬಿಟ್ಟಿಲ್ಲ ಎಲ್ಲವನ್ನು ಒಯ್ದಿದ್ದಾರೆ. ರಂಗಮಂದಿರದ ಗೇಟು ಮುರಿದಿದ್ದಾರೆ. ರಂಗಮಂದಿಅರದ ಗ್ರೀನ್ ರೂಮ್ ಗಳು ಅನೈತಿಕ ಚಟುವಟಿಕೆಯ ರೂಮ್ ಗಳಾಗಿವೆ. ಗಾಜುಗಳನ್ನು ಒಡೆದು ಹಾಕಲಾಗಿದೆ. ಬಾಗಿಲನ್ನು ಮುರಿದು ಹಾಕಲಾಗಿದ್ದು ಇಲ್ಲಿನ ಅವ್ಯವಸ್ಥೆ ಪಟ್ಟಿ ಮಾಡಿದರೆ ಮುಗಿಯೋದಿಲ್ಲ ದಾರಿ ಹೋಕರಿಗೆ, ಹಾಗೂ ವಿಹಾರಾರ್ಥಿಗಳಿಗೆ ತಕ್ಷಣವಾಗಿ ನಗರಸಭೆ ಸ್ಪಂದಿಸಬೇಕಾಗಿದೆ.ಅಂದ ಹಾಗೆ ಈ ಪಾರ್ಕ್ ಗೆ ಸೆಕ್ಯುರಿಟಿ ಗಾರ್ಡಾಗಲೀ, ಸೂಕ್ತವಾದ ಗೇಟ್ ಅಳವಡಿಸಲು ಸಿಬ್ಬಂದಿಯಾಗಲೀ ಇಲ್ಲ. ಯಾರದ್ದೋ ಪ್ರಾಯೋಜಕತ್ವ ಪಡೆದು ಅಲ್ಲಲ್ಲಿ ಕೆಲವೊಂದು ಕೆಲಸ ಮಾಡಲಾಗುತ್ತಿದೆ.ಆದ್ರೆ ಅಂತಹ ಕಾರ್ಯಗಳನ್ನು ಸಮಾಜಗೆಡುಕರು ಹಾಳುಗೆಡವುತ್ತಿದ್ದಾರೆ. ಈಗ ಎಚ್ಚೆತ್ತು ಕೊಳ್ಳದಿದ್ದರ ಇನ್ಯಾವಾಗ ನಗರಸಭೆ ಎಚ್ಚೆತ್ತುಕೊಳ್ಳುವುದು?

Related posts

Leave a Reply