Header Ads
Header Ads
Breaking News

ಅರಂತೋಡು ನೆಹರು ಸ್ಮಾರಕ ಕಾಲೇಜಿನಲ್ಲಿ ಮಕ್ಕಳ ಸಂತೆ : ಲಾಭ ಗಳಿಸಿ ಕೇಕೆ ಹಾಕಿದ ವಿದ್ಯಾರ್ಥಿಗಳು

ವಿನೂತನ ಕಲ್ಪನೆಯನ್ನು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು, ಆಡಳಿತ, ಪಾಪ್ಯುಲರ್ ಎಜ್ಯುಕೇಶನ್ ಸೊಸೈಟಿ (ರಿ) ಅರಂತೋಡು, ದ.ಕ ಜಿಲ್ಲಾ ಗ್ರಾಹಕ ಸಂಘಗಳ ಒಕ್ಕೂಟ (ರಿ) ಮಂಗಳೂರು, ಜಾಗೃತಿ ವಿದ್ಯಾರ್ಥಿ ಕ್ಲಬ್ ಇವುಗಳ ಸಹಯೋಗದಲ್ಲಿ ವಿದ್ಯಾರ್ಥಿ ಗ್ರಾಹಕ ಸಂತೆಯನ್ನು ಅರಂತೋಡು ನೆಹರು ಸ್ಮಾರಕ ಕಾಲೇಜಿನಲ್ಲಿ ಹಮ್ಮಿಕೊಂಡಿತು. ಈ ಸಂತೆಯಲ್ಲಿ ಅನೇಕ ವಿದ್ಯಾರ್ಥಿಗಳು ವ್ಯಾಪಾರ ನಡೆಸಿ ವ್ಯಾಪಾರ, ವ್ಯವಹಾರ, ಗಣಿತ ಜ್ಞಾನವನ್ನು ಹೆಚ್ಚಿಸಿಕೊಂಡರು. 

ಮಕ್ಕಳ ಸಂತೆಯಲ್ಲಿ ಹೈಸ್ಕೂಲ್ ವಿಭಾಗದ 308 ವಿದ್ಯಾರ್ಥಿಗಳಲ್ಲಿ ಸುಮಾರು 72 ವಿದ್ಯಾರ್ಥಿಗಳನ್ನು6 ಜನರ ಗುಂಪನ್ನು ರಚಿಸಿ ವಿವಿಧ ವ್ಯಾಪಾರಗಳನ್ನು ನಡೆಸಲು ಸೂಚಿಲಾಯಿತು.ಹಾಗೆಯೇ ವಿವಿಧ ತರಕಾರಿಗಳು,ಬಗೆ ಬಗೆಯ ತಿಂಡಿಗಳು, ಬಟ್ಟೆಗಳು, ಅಲಂಕಾರಿಕ ವಸ್ತುಗಳು, ಬೆತ್ತದ ಕುಡುಪು, ಬುಟ್ಟಿ, ಹಸಿರು ಸೊಪ್ಪುಗಳು, ವೀಳ್ಯದೆಲೆ, ಐಸ್‌ಕ್ರೀಮ್ ಸಂತೆಯಲ್ಲಿ ಮಾರಾಟಕ್ಕೆ ಇದ್ದವು.

Related posts

Leave a Reply