Header Ads
Breaking News

ಅರಣ್ಯಾಧಿಕಾರಿಗಳಿಂದ ದೌರ್ಜನ್ಯ ಆರೋಪ : ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಹಲವು ಸಂಘಟನೆಗಳು

ಮಧ್ಯರಾತ್ರಿ ದಾಳಿಯ ನೆಪದಲ್ಲಿ ಅರಣ್ಯಾಧಿಕಾರಿಗಳು ಮನೆಗೆ ನುಗ್ಗಿ ದೌರ್ಜನ್ಯ ಎಸಗಿದ್ದಾರೆಂಬ ಆರೋಪದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗೆ ದಲಿತ್ ಸೇವಾ ಸಮಿತಿ, ಅಂಬೇಡ್ಕರ್ ರಕ್ಷಣಾ ವೇದಿಕೆ, ಮಲೆನಾಡು ಜನಹಿತ ರಕ್ಷಣಾ ವೇದಿಕೆ ಬೆಂಬಲ ವ್ಯಕ್ತಪಡಿಸಿದ್ದಾರೆ, ಈ ಮಧ್ಯೆ ಇಲಾಖೇತರ ವ್ಯಕ್ತಿ ಅಬ್ಬಾಸ್ ಎಂಬವರು ಮನೆಗೆ ನುಗ್ಗಿದ್ದು ಇವರನ್ನು ಇಂದು ರಾತ್ರಿಯೊಳಗೆ ಬಂಧಿಸದಿದ್ದರೆ ನಾಳೆ ಕಡಬ ಠಾಣೆಯ ಮುಂದೆ ಧರಣಿ ಸತ್ಯಾಗ್ರಹ ಹೂಡುವುದಾಗಿ ದಲಿತ್ ಸೇವಾ ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಣ್ಣು ಎಳ್ತಿಮಾರ್ ಅಂಬೇಡ್ಕರ್ ರಕ್ಷಣಾ ವೇದಿಕೆ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆ ಅಲ್ಲದೆ ದಲಿತ ಸೇವಾ ಸಮಿತಿಯ ಕಡಬ ತಾಲೂಕು ಅಧ್ಯಕ್ಷ ದಿನೇಶ್ ಎ. ಅಗತ್ತಾಡಿ, ಪ್ರಮುಖರಾದ ರಾಘವ ಕಳಾರ, ಯೋಗೀಶ್ ಕಡಿರಡ್ಕ, ರಕ್ಷಣಾ ವೇದಿಕೆಯ ಸುಳ್ಯ ತಾಲೂಕು ಉಪಾಧ್ಯಕ್ಷ ಮಂಜುನಾಥ ಶಾಂತಿಮೂಲೆ ಐವರ್ನಾಡು, ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಅವರುಗಳು ಎಚ್ಚರಿಸಿದ್ದಾರೆ.

ಇಲಾಖೆಯವರು ದ್ವೇಷ ಸಾಧನೆಗಾಗಿ ಎಲ್ಲಾ ದಾಖಲೆಗಳನ್ನು ಪೂರ್ವಯೋಜಿತವಾಗಿ ಮಾಡಿಕೊಂಡು ಬಂದಿದ್ದಾರೆ, ಆದರೆ ಅಬ್ಬಾಸ್ ಎನ್ನುವ ಇಲಾಖೇತರ ವ್ಯಕ್ತಿ ಮನೆಯೊಳಗಡೆ ನುಗ್ಗಿ ದಾಂಧಲೆ ನಡೆಸಲು ಯಾರಿಂದ ಅನುಮತಿ ಪಡೆದುಕೊಂಡು ಅಧಿಕಾರಿಗಳು ಬಂದಿದ್ದಾರೆ ಎಂದು ಪ್ರಶ್ನಿಸಿರುವ ಅವರು ಮಾ.17ರ ರಾತ್ರಿಯೊಳಗೆ ಅಬ್ಬಾಸ್ ಅವರನ್ನು ಬಂಧಿಸದಿದ್ದರೆ ನಾಳೆ ಕಡಬ ಪೊಲೀಸ್ ಠಾಣೆಯ ಎದುರು ಧರಣಿ ಸತ್ಯಾಗ್ರಹ ಮಾಡುವುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದು ಇದೀಗ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಪುತ್ತೂರು ಮಹಿಳಾ ಪೊಲೀಸ್ ಠಾಣೆಯಿಂದ ದೂರಿಗೆ ಹಿಂಬರಹ-ಸ್ವೀಕರಿಸಲು ನಕಾರಈ ಮದ್ಯೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಗಳು ಈ ಹಿಂದೆ ಮಹಿಳಾ ಠಾಣೆಗೆ ನೀಡಿದ ದೂರಿಗೆ ಹಿಂಬರಹ ನೀಡಿದ್ದು ಈ ಹಿಂಬರದ ಪ್ರತಿಯನ್ನು ಸ್ವೀಕರಿಸಲು ಪ್ರತಿಭಟನಾಕಾರರು ನಿರಾಕರಿಸಿದ್ದಾರೆ.

Related posts

Leave a Reply

Your email address will not be published. Required fields are marked *