Header Ads
Header Ads
Header Ads
Breaking News

ಅರಣ್ಯ ಅತಿಕ್ರಮಣದಾರರ ಸಮಸ್ಯೆ ಪರಿಹಾರಕ್ಕೆ ಒತ್ತಾಯ ಭಟ್ಕಳ ರೈತ ಸಂಘ ಘಟಕದಿಂದ ಮಹಾದಹರಣಿ ಸಹಾಯಕ ಆಯುಕ್ತರ ಕಚೇರಿಯಲ್ಲಿ ಬೃಹತ್ ಪ್ರತಿಭಟನೆ

ಅರಣ್ಯ ಅತಿಕ್ರಮಣದಾರರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಭಟ್ಕಳ ಘಟಕದಿಂದ ಹಾಗೂ ಅರಣ್ಯ ಅತಿಕ್ರಮಣದಾರದಿಂದ 36 ಗಂಟೆಗಳ ಮಹಾಧರಣಿಯೂ ಸಹಾಯಕ ಆಯುಕ್ತರ ಕಚೇರಿಯಲ್ಲಿ ಬೃಹತ್ ಪ್ರತಿಭಟನೆಯ ಜೊತೆಗೆ ಮನವಿಯನ್ನು ಸಲ್ಲಿಸಲಾಯಿತು.

ಕಳೆದ ಹತ್ತು-ಹಲವು ವರ್ಷಗಳಿಂದ ಅರಣ್ಯ ಅತಿಕ್ರಮಣದಾರರ ಮತ್ತು ಬಡ ರೈತಾಪಿ ಜನತೆಯ ಪ್ರಶ್ನೆಯಲ್ಲಿ ಅನೇಕ ಬಾರಿ ಮನವಿ ಪತ್ರವನ್ನು ಸರ್ಕಾರಕ್ಕೆ ನೀಡುತ್ತಾ ಬಂದಿದ್ದು, ಇನ್ನು ತನಕ ಬರೀ ಆಶ್ವಾಸನೆ ಬಿಟ್ಟರೆ ಯಾವುದೇ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಆಡಳಿತ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ. ನಗರವಾಸಿಗಳ ಅರ್ಜಿಗಳನ್ನು ಮಂಜೂರಿಗೆ ಪರಿಗಣಿಸಬೇಕು. ಕಟಗಾರಕೊಪ್ಪದಲ್ಲಿ ಅರಣ್ಯ ಇಲಾಖೆಯವರು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರ ಮರ ಕಡಿದು ತೀವ್ರ ಅನ್ಯಾಯವೆಸಗಿದ್ದಾರೆ ಇದು ಕೊನೆಯದಾಗಬೇಕು ಇಲ್ಲವಾದಲ್ಲಿ ತಾಲೂಕಿನಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಈ ಸಂಧರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲುಕಾ ಘಟಕದ ಅಧ್ಯಕ್ಷ ಶ್ರೀಧರ ಶೆಟ್ಟಿ, ಕಾರ್ಯದರ್ಶಿ ಶ್ರೀಧರ ನಾಯ್ಕ, ಖಜಾಂಜಿ ನವೀನ್ ಜೈನ್, ಹಾಗೂ ಇನ್ನುಳಿದ ಸಂಘಟನೆಯ ಪ್ರಮುಖ ಸುಭಾಶ ಕೊಪ್ಪಿಕರ್, ಸುಲೇಮನ್ ಜಾಲಿ ಸೇರಿದಂತೆ ಮುಂತಾದವರು ಇದ್ದರು.

ವರದಿ:ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply