Header Ads
Breaking News

ಅರಣ್ಯ ಅಧಿಕಾರಿಗಳ ಕಾರ್ಯಾಚರಣೆ ಯಶಸ್ವಿ.ಬೋನಿಗೆ ಬಿದ್ದ ಚಿರತೆ

 

ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯೊಂದನ್ನು ಬೋನಿಗೆ ಕೆಡವುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.ಉಡುಪಿಯ ಬೆಳ್ಳೆ ಗ್ರಾಮದ ಪಾಂಬೂರಿನಲ್ಲಿ ಚಿರತೆಯೊಂದು ಆಗಾಗ ಗ್ರಾಮದಲ್ಲಿ ಕಾಣಿಸಿಕೊಂಡು ಸ್ಥಳೀಯರಲ್ಲಿ ಭೀತಿ ಹುಟ್ಟಿಸುತ್ತಿತ್ತು. ಹೀಗಾಗಿ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳ ಮೊರೆ ಹೋದ್ರು. ನಿನ್ನೆ ಸಂಜೆ ಮೋನಿಕಾ ಮಥಾಯಿಸ್ ಎಂಬುವರ ತೋಟದಲ್ಲಿ ಅಧಿಕಾರಿಗಳು ಬೋನನ್ನು ಇಟ್ಟು ಅದರೊಳಗೆ ನಾಯಿ ಮರಿಯೊಂದನ್ನು ಇರಿಸಿದ್ದರು. ರಾತ್ರಿ ಎಂದಿನಂತೆ ಬಂದ ಚಿರತೆ ,ಬೋನಿನೊಳಗೆ ಬಂಧಿಯಾಯಿತು.ಇದರೊಂದಿಗೆ ಗ್ರಾಮಸ್ಥರ ಆತಂಕವೂ ದೂರವಾಗಿದೆ.ಇವತ್ತು ಬೆಳಿಗ್ಗೆ ಭಯ ಹುಟ್ಟಿಸಿದ್ದ ಚಿರತೆಯನ್ನು ನೋಡಲು ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಜಮಾಯಿದ್ದರು.ಕೊನೆಗೆ ಅರಣ್ಯ ಅಧಿಕಾರಿಗಳು ಬೋನಿಗೆ ಬಿದ್ದ ಚಿರತೆಯನ್ನು ಉಪಾಯದಿಂದ ಅಭಯಾರಣ್ಯಕ್ಕೆ ಬಿಟ್ಟು ಬಂದರು.ಹೀಗಾಗಿ ಕೆಲ ದಿನಗಳಿಂದ ಭಯದಿಂದಿದ್ದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

Related posts

Leave a Reply