Breaking News

ಅರಣ್ಯ ಇಲಾಖೆ ಮತ್ತು ಲಯನ್ಸ್ ಶಾಲೆಯ ಜಂಟಿ ಆಶ್ರಯ, ಕಜೆ ಮಾರಿಗುಡಿ ಮೀಸಲು ಅರಣ್ಯದಲ್ಲಿ ಬೀಜದ ಉಂಡೆ ಬಿತ್ತನೆ

ಕರ್ನಾಟಕ ಸರಕಾರ ಅರಣ್ಯ ಇಲಾಖೆ ಮೂಡಬಿದ್ರೆ ಉಪವಲಯ ಹಾಗು ಸಚ್ಚೆರಿಪೇಟೆ ಲಯನ್ಸ್ ಶಾಲೆಯ ಜಂಟಿ ಅಶ್ರಯದಲ್ಲಿ ಪರಿಸರ ದಿನದ ಅಂಗವಾಗಿ ಗಿಡ ನೆಡುವ ಮತ್ತು ಬೀಜದ ಉಂಡೆಗಳನ್ನು ಬಿತ್ತುವ ಕಾರ್‍ಯಕ್ರಮ ಕಜೆ ಮಾರಿಗುಡಿಯ ಮೀಸಲು ಅರಣ್ಯದಲ್ಲಿ ನಡೆಯಿತು.
ಈ ಮೊದಲು ಶಾಲಾ ಮಕ್ಕಳಿಂದ ನೀರಿಗಾಗಿ ಅರಣ್ಯ ಮತ್ತು ಕೋಟಿ ಬೀಜಗಳ ಉಂಡೆ ಬಿತ್ತುವ ಅಭಿಯಾನ ಜಾಥ ನಡೆಯಿತು. ಮೂಡಬಿದ್ರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಚ್. ಅರ್. ಸುಬ್ರಹ್ಮಣ್ಯ ರವರು ಬೀಜದ ಉಂಡೆ ತಯಾರಿ, ನಾಟಿ ಮಾಡುವ ಬಗ್ಗೆ ಮಾಹಿತಿ ನೀಡಿದರು. ಈ ಸಂಧರ್ಭದಲ್ಲಿ ಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶುಭಾ ಪಿ. ಶೆಟ್ಟಿ, ಲಯನ್ಸ್ ಶಾಲಾ ಸಂಚಾಲಕ ಸತ್ಯಶಂಕರ್ ಶೆಟ್ಟಿ, ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ, ಲಯನ್ಸ್ ಶಾಲಾ ಮುಖ್ಯ ಶಿಕ್ಷಕ ಜಿನ್ನಪ್ಪ, ಕಿನ್ನಿಗೋಳಿ ಉಪವಲಯ ಅರಣ್ಯಾಧಿಕಾರಿ ಕೆ. ಸಿ. ಮ್ಯಾಥ್ಯು, ಶಾಲಾ ಅಡಳಿತಾಧಿಕಾರಿ ಮಂಜುನಾಥ ಹೆಗ್ಡೆ, ಮುಂಡ್ಕೂರು ಕಡಂದಲೆ ಲಯನ್ಸ್ ಕ್ಲಬಿನ ಅಧ್ಯಕ್ಷ ಆನಂದ ಅಚಾರ್ಯ, ಪಂಚಾಯತ್ ಉಪಾದ್ಯಕ್ಷ ರವೀಂದ್ರ ಶೆಟ್ಟಿ, ಪಂಚಾಯತ್ ಸದಸ್ಯ ಶ್ರೀಧರ್ ಸನಿಲ್, ಪಂಚಾಯತ್ ಪಿಡಿಒ ರಮೇಶ್, ಅರಣ್ಯ ರಕ್ಷಕ ಶಂಕರ್, ಸೇಸಪ್ಪ, ಶಾಲಾ ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply