Header Ads
Header Ads
Header Ads
Breaking News

ಅರಬೀ ಸಮುದ್ರದಲ್ಲಿ ಈಜು ಸ್ಪರ್ಧೆ ಡಿ.29ರಿಂದ 31ರ ತನಕ ಉಡುಪಿ ಪರ್ಬ ಉಡುಪಿ ರಸ್ತೆಯಲ್ಲಿ ಸೈಕಲ್ ರೇಸ್ ಸುದ್ದಿಗೋಷ್ಟಿಯಲ್ಲಿ ಡಿಸಿ ಪ್ರಿಯಾಂಕ ಮಾಹಿತಿ

ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಮಲ್ಪೆ ಬೀಚ್ ಅಭಿವೃದ್ದಿ ಸಮಿತಿಗಳ ಸಹಯೋಗದಲ್ಲಿ ಡಿಸೆಂಬರ್ 29ರಿಂದ 31ರ ತನಕ ಜಿಲ್ಲೆಯ ನಾನಾ ಭಾಗದಲ್ಲಿ ಉಡುಪಿ ಪರ್ಬ ನಡೆಯಲಿದ್ದು ಇದರ ಅಂಗವಾಗಿ ಸೈಕಲ್ ಸ್ಪರ್ದೆ ಹಾಗೂ ದೇಶದಲ್ಲೇ ಮೊದಲ ಬಾರಿಗೆ ಮಲ್ಪೆಯ ಅರಬೀ ಸಮುದ್ರದಲ್ಲಿ ಓಪನ್ ಈಜು ಸ್ಪರ್ಧೆ ನಡೆಯಲಿದೆ ಎಂದು ಡಿಸಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ತಿಳಿಸಿದ್ದಾರೆ.

ಉಡುಪಿ ಪರ್ಬದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು ಡಿಸೆಂಬರ್ 29ರಂದು ರಾಜ್ಯ ಪ್ರವಾಸೋದ್ಯಮ ಸಚಿವೆ ಪ್ರಿಯಾಂಕ ಖರ್ಗೆ ಉಡುಪಿ ಪರ್ಬವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮ ಮಲ್ಪೆ ಬೀಚ್‌ನಲ್ಲಿ ನಡೆಯಲಿದ್ದು ಡಿಸೆಂಬರ್ 31ರಂದು ಉಡುಪಿ ಸೈಕಲ್ ಸ್ಪರ್ದೆ ಆಯೋಜಿಸಲಾಗಿದೆ. ಮಲ್ಪೆ ಬೀಚ್‌ನಲ್ಲಿ ಆರಂಭಗೊಳ್ಳುವ ಈ ಸ್ಪರ್ದೆ ಉಡುಪಿ, ಮಣಿಪಾಲ, ಹಿರಿಯಡಕ, ಪೆರ್ಡೂರು ಭಾಗವಾಗಿ ಹೆಬ್ರಿ ಮಾರ್ಗವಾಗಿ ಸೋಮೇಶ್ವರದವರೆಗೆ ಹೋಗಿ ಅಲ್ಲಿಂದ ಗೋಳಿಯಂಗಡಿ, ಸಾಯಿಬ್ರಕಟ್ಟೆ ಬಾರಕೂರು, ಬ್ರಹ್ಮಾವರ, ಸಂತೆಕಟ್ಟೆ, ತೆಂಕನಿಡಿಯೂರು ಮಾರ್ಗವಾಗಿ ಮತ್ತೆ ಮಲ್ಪೆ ಬೀಚ್ ತಲುಪಲಿದ್ದು ಸುಮಾರು 125 ಕಿಲೋ ಮೀಟರ್ ಉದ್ದದ ಸ್ಪರ್ಧೆಯಾಗಿದೆ ಎಂದರು.
ವರದಿ: ಪಲ್ಲವಿ ಸಂತೋಷ್

Related posts

Leave a Reply