Header Ads
Header Ads
Breaking News

ಅರಬ್ ಒಕ್ಕೂಟ ವ್ಯಾಪ್ತಿಯ ಸಮುದ್ರ, ನೂರು ಭಾರತೀಯರು ಸಂಕಷ್ಟದಲ್ಲಿ

ಭಾರತದ ೧೦೦ಕ್ಕೂ ಅಧಿಕ ನಾವಿಕರು ಅರಬ್ ಒಕ್ಕೂಟ ವ್ಯಾಪ್ತಿಯ ಸಮುದ್ರದಲ್ಲಿರುವ ೨೨ ಹಡಗುಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೂಕ್ತ ನೆರವು ನೀಡುವಂತೆ, ದುಬೈನ ಭಾರತೀಯ ದೂತಾವಾಸ ಕಚೇರಿಯ ನೆರವು ಯಾಚಿಸಿದ್ದಾರೆ ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.
ಸದ್ಯ ೨೨ ಹಡಗುಗಳಲ್ಲಿರುವ ೯೭ ಭಾರತೀಯರು ಸಂಕಷ್ಟಕ್ಕೆ ಸಿಲುಕಿ ನೆರವು ಯಾಚಿಸಿದ್ದಾರೆ. ಇತರೆ ದೇಶಗಳ ನಾಗರಿಕರ ಸಂಖ್ಯೆಯ ಖಚಿತ ಮಾಹಿತಿ ಲಭ್ಯವಾಗಿಲ್ಲ. ಶ್ರೀಲಂಕಾ, ಫಿಲಿಪ್ಪೀನ್ಸ್, ಮ್ಯಾನ್ಮಾರ್ ಹಾಗೂ ಪಾಕಿಸ್ತಾನದವರು ಈ ಹಡಗುಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ದುಬೈನ ಭಾರತದ ಕಾನ್ಸುಲ್ ಜನರಲ್ ವಿಪುಲ್ ತಿಳಿಸಿದರು. ಗುತ್ತಿಗೆ ಅವಧಿ ಮುಗಿದ ಬಳಿಕವೂ ಹಡಗಿನಲ್ಲಿ ಸಿಲುಕಿದ್ದು, ಹಲವು ತಿಂಗಳಿಂದ ವೇತನ ಪಾವತಿಯಾಗಿಲ್ಲ ಎಂದು ದೂರಿದ್ದಾರೆ.
ಅಲ್ಲದೇ ಒಳ್ಳೆಯ ಆಹಾರ, ಶುದ್ಧ ಕುಡಿಯುವ ನೀರು, ಹಾಗೂ ಇಂಧನ ಕೊರತೆಯಿಂದ ಸಂಕಷ್ಟದಲ್ಲಿದ್ದಾರೆ. ವೇತನ ಸಿಕ್ಕ ಬಳಿಕವೇ ಸ್ವದೇಶಕ್ಕೆ ಮರಳುವುದಾಗಿ ಅವರೆಲ್ಲರೂ ತಿಳಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Related posts

Leave a Reply