
ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಕಚೇರಿಯಲ್ಲಿ ದಲಿತ ವಚನಕಾರರ ಜಯಂತಿಯನ್ನು ತಹಸೀಲ್ದಾರ್ ಹಾಗೂ ಅಧ್ಯಕ್ಷರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಿಸಲಾಯಿತು .ಈ ಕಾರ್ಯಕ್ರಮದಲ್ಲಿ ತಾಸಿಲ್ದಾರ್ ಸಂತೋμï ಕುಮಾರ್ ಮಾತನಾಡಿ ವೃತ್ತಿ ಮತ್ತು ಕಸುಬುಗಳ ಆಧಾರದ ಮೇಲೆ ಜಾತಿ ವ್ಯವಸ್ಥೆ ರೂಪುಗೊಂಡಿದೆ ಎಂದ್ರು.
ನಂತರ ಮಾತನಾಡಿದ ಶಾಸಕ ಶಿವಲಿಂಗೇಗೌಡರು ದಲಿತ ವಚನಕಾರರು 12ನೇ ಶತಮಾನದಲ್ಲಿ ಶಿವಶರಣ ಬಸವಣ್ಣನವರ ಸಮಕಾಲೀನವರು ಎಂಬುದನ್ನು ತಿಳಿಸುತ್ತಾ ಹರಳಯ್ಯ ಮತ್ತು ಅವರ ಪತ್ನಿ ತನ್ನ ತೊಡೆಯ ಚರ್ಮದಿಂದ ಬಸವಣ್ಣರಿಗೆ ಪಾದರಕ್ಷೆಗಳನ್ನು ಮಾಡಿಕೊಟ್ಟಿದ್ದರು ಎಂಬುದನ್ನ ಸ್ಮರಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾದ ಪಟೇಲ್ ಶಿವಪ್ಪ, ಸಮಾಜಕಲ್ಯಾಣ ಅಧಿಕಾರಿಗಳಾದ ಗೋಪಾಲಯ್ಯ, ದಲಿತ ಮುಖಂಡರುಗಳಾದ ಗುತ್ತಿನಕೆರೆ ಶಿವಮೂರ್ತಿ, ಶೇಖರಪ್ಪ ನವರು, ಎಪಿ ಚಂದ್ರಪ್ಪ, ವೆಂಕಟೇಶ್ ಬಾಣಾವರ ಮಹೇಶ್, ಜಾಜುರು ರಂಗನಾಥ್, ಗೋವಿಂದರಾಜು ದೇಶಾನೇ ಗಿರೀಶ್, ಮಂಜುನಾಥ್, ಮಧು, ಜಯರಾಮ್ ಕರಗುಂದ ಧನಂಜಯ್ ಮುಂತಾದವರು ಹಾಜರಿದ್ದರು.