Header Ads
Breaking News

ಅರ್ಧ ಶತಕದತ್ತ `ಪೆನ್ಸಿಲ್ ಬಾಕ್ಸ್’; ಜ.17ರಂದು ಪುತ್ತೂರಿನ ಅರುಣಾ ಚಿತ್ರಮಂದಿರದಲ್ಲಿ 50ನೇ ಸಂಭ್ರಮ

ಪುತ್ತೂರು ಮೂಲದ ಚಲನಚಿತ್ರ ನಿರ್ಮಾಪಕರ, ನಿರ್ದೇಶಕರ ಅಚ್ಚುಕಟ್ಟಿನ ನಿರ್ವಹಣೆಯೊಂದಿಗೆ ಮೂಡಿ ಬಂದಿರುವ ಉತ್ತಮ ಸಾಂಸಾರಿಕ ಚಲನಚಿತ್ರ `ಪೆನ್ಸಿಲ್ ಬಾಕ್ಸ್’ ನಗರದ ಅರುಣಾ ಚಿತ್ರ ಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಜ.17 ರಂದು ಚಿತ್ರದ ಅರ್ಧ ಶತಕ ಪ್ರದರ್ಶನದ ಸಮಾರಂಭ ನಡೆಯಲಿದೆ ಎಂದು ಚಲನಚಿತ್ರದ ನಿರ್ಮಾಪಕ ದಯಾನಂದ ರೈ ತಿಳಿಸಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿ, ಜ.17 ರಂದು ಬೆಳಗ್ಗೆ 10.15ಕ್ಕೆ ಅರುಣಾ ಚಿತ್ರಮಂದಿರದಲ್ಲಿ ನಡೆಯಲಿರುವ 50ನೇ ಪ್ರದರ್ಶನದ ಸಮಾರಂಭದಲ್ಲಿ ಚಿತ್ರ ನಟ ಭೋಜರಾಜ ವಾಮಂಜೂರು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದು, ಕೇಕ್ ಕಟ್ ಮಾಡುವ ಮೂಲಕ ಸಂಭ್ರಮಿಸಲಾಗುವುದು ಎಂದು ಹೇಳಿದರು.

ಆ ನಂತರ ಹಂಚಿಕೆದಾರ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಪೆನ್ಸಿಲ್ ಬಾಕ್ಸ್ ಚಿತ್ರದ ಕುರಿತು ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಶಾಲಾ ಮಕ್ಕಳು, ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಶಾಲಾ ಮಕ್ಕಳಿಗೆ ಅರ್ಧ ದರದಲ್ಲಿ ಟಿಕೇಟ್ ನೀಡಿ ಚಿತ್ರದ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಪ್ರಬುದ್ಧ ಕಲಾವಿದರ ಮತ್ತು ಮಕ್ಕಳ ಅಭಿನಯ ಸಹಜವಾಗಿ ಮೂಡಿ ಬಂದಿರುವುದು ಚಿತ್ರದ ಯಶಸ್ಸಿಗೆ ಕಾರಣವಾಗಿದೆ. ಆದರೆ, ಅನೇಕ ಮಂದಿ ಈ ಚಿತ್ರವನ್ನು ಮಕ್ಕಳ ಚಲನಚಿತ್ರ ಎಂದು ತಪ್ಪಾಗಿ ತಿಳಿದುಕೊಂಡಿರುವುದರಿಂದ ಒಂದಿಷ್ಟು ತೊಂದರೆಯಾಗಿದೆ. ಜತೆಗೆ, ಸೂಕ್ತ ಸಮಯದಲ್ಲಿ ಥಿಯೇಟರ್ ಸಿಗದೆ ಚಿತ್ರ ಪ್ರದರ್ಶನ ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಕರಾವಳಿಯ ಸುಮಾರು 16 ಚಿತ್ರಮಂದಿರಗಳಲ್ಲಿ ಪೆನ್ಸಿಲ್ ಬಾಕ್ಸ್ ಪ್ರದರ್ಶನ ಕಂಡಿದೆ. 2ನೇ ಹಂತದಲ್ಲಿ ಮಡಿಕೇರಿ, ಚಿಕ್ಕಮಗಳೂರು, ಬೆಂಗಳೂರಿನಲ್ಲಿ ಪ್ರದರ್ಶನ ಮಾಡುವ ಉದ್ದೇಶವಿದೆ. ನಾನು ಹಂಚಿಕೆದಾರನಾಗಿರುವ ಪೆನ್ಸಿಲ್ ಬಾಕ್ಸ್ 50 ಪ್ರದರ್ಶನಗಳನ್ನು ಕಂಡ 2ನೇ ಚಲನಚಿತ್ರವಾಗಿದೆ ಎಂದು ಹಂಚಿಕೆದಾರ ಬಾಲಕೃಷ್ಣ ಶೆಟ್ಟಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಚಿತ್ರದ ನಿರ್ದೇಶಕ ರಝಾಕ್ ಪುತ್ತೂರು, ನಟ ರಮೇಶ್ ರೈ ಕುಕ್ಕುವಳ್ಳಿ, ನಟಿ ದೀಕ್ಷಾ ರೈ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *