Header Ads
Header Ads
Header Ads
Breaking News

ಅರ್ಶಿ ಆಯುರ್ವೇದ ಆಯುಷ್ ಸ್ಪೆಶಾಲಿಟಿ ಕ್ಲಿನಿಕ್ ಬಲ್ಮಠ ಬ್ರಿಡ್ಜ್ ರಸ್ತೆಯಲ್ಲಿ ನೂತನವಾಗಿ ಪ್ರಾರಂಭ ಶಾಸಕ ಜೆ.ಆರ್. ಲೋಬೋರಿಂದ ಉದ್ಘಾಟನೆ

ಆಯುರ್ವೇದ ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಳ ಅರ್ಶಿ ಆಯುರ್ವೇದ ಆಯುಷ್ ಸ್ಪೆಶಾಲಿಟಿ ಕ್ಲಿನಿಕ್ ಮಂಗಳೂರಿನ ಹೃದಯ ಭಾಗವಾದ ಬಲ್ಮಠ ಬ್ರಿಡ್ಜ್ ರಸ್ತೆಯಲ್ಲಿ ನೂತನವಾಗಿ ಪ್ರಾರಂಭಗೊಂಡಿತು.

ನೂತನವಾಗಿ ಆರಂಭಗೊಂಡ ಅರ್ಶಿ ಆಯುರ್ವೇದ ಆಯುಷ್ ಸ್ಪೆಶಾಲಿಟಿ ಕ್ಲಿನಿಕನ್ನು ಶಾಸಕ ಜೆ.ಆರ್. ಲೋಬೋ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಭಾರತೀಯ ವೈದ್ಯಕೀಯ ಪದ್ದತಿಯಲ್ಲಿ ಹೆಚ್ಚಿನ ಭಾಗ ಬರುವಂತಹ ರೋಗಗಳನ್ನು ತಡೆಗಟ್ಟುವಂತಹ ವಿಧಾನ ಆಯುರ್ವೇದದಲ್ಲಿ ಇದೆ ಎಂದ ಅವರು, ಅರ್ಶಿ ಆಯುರ್ವೇದ ಆಯುಷ್ ಸ್ಪೆಶಾಲಿಟಿ ಕ್ಲಿನಿಕ್‌ಗೆ ಶುಭ ಹಾರೈಸಿದರು.

ಅನಂತರ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, ಸರ್ವಕಾಲಕ್ಕೂ ಸೂಕ್ತವಾದ ಆಯುರ್ವೇದ ಪದ್ದತಿಯನ್ನು ಪ್ರತಿಯೊಬ್ಬರು ಸದುಪಯೋಗ ಮಾಡಿಕೊಳ್ಳಬೇಕಾಗಿದೆ ಎಂದರು.

ಈ ಸಂದರ್ಭ ಕಾರ್ಯಕ್ರಮದಲ್ಲಿ ಹಿರಿಯ ಆಯುರ್ವೇದ ತಜ್ಞರಾದ ಡಾ. ದೇವದಾಸ್ ಕೆ. ಪುತ್ರನ್, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞರಾದ ಡಾ. ಫಾತಿಮಾ ಆಸೀಫ್, ಡಾ. ಸಂತೋಷ್ ಕುಮಾರ್ ಮತ್ತಿತ್ತರರು ಉಪಸ್ಥಿತರಿದ್ದರು.

ಆಯುರ್ವೇದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಗಳು ಸಹಸ್ರಾರು ವರ್ಷಗಳಿಂದ ಭಾರತೀಯರ ಆರೋಗ್ಯ ರಕ್ಷಣೆಯಲ್ಲಿ ಅಮೂಲ್ಯ ಕೊಡುಗೆ ನೀಡುತ್ತಿದೆ. ಆರೋಗ್ಯವಂತರ ಆರೋಗ್ಯ ರಕ್ಷಣೆ ಹಾಗೂ ರೋಗಿಗಳ ರೋಗ ನಿವಾರಣೆ ಈ ಎರಡೂ ವಿಧಾನಗಳ ಮೂಲಕ ಆರೋಗ್ಯ ಸೇವೆ ನೀಡುವುದು ಇದರ ವಿಶೇಷತೆ.

ಮಂಗಳೂರಿನಲ್ಲಿ ಪ್ರಥಮ ಬಾರಿಗೆ ನೋವು ನಿವಾರಣೆಯ ಯಶಸ್ವೀ ನಿರ್ವಹಣೆಗಾಗಿ ಸಂಯುಕ್ತ ಆಯುಷ್ ಶಮನ ಚಿಕಿತ್ಸೆಯನ್ನು ಅರ್ಶಿ ಆಯುರ್ವೇದ ಆಯುಷ್ ಸ್ಪೆಶಾಲಿಟಿ ಕ್ಲಿನಿಕ್‌ನಲ್ಲಿ ಲಭ್ಯವಿರುವುದು. ಮಾತ್ರವಲ್ಲದೆ ಪಂಚಕರ್ಮ, ಪಂಚತಂತ್ರ, ಜಲ ಚಿಕಿತ್ಸೆ, ಮಣ್ಣಿನ ಚಿಕಿತ್ಸೆ, ಅಕ್ಯುಪಂಕ್ಚರ್, ಯೋಗ, ಅಭ್ಯಂಗ, ಕಪ್ಪಿಂಗ್, ಫಿಜಿಯೋತೆರಪಿ, ಕ್ಷಾರ ಸೂತ್ರ ವಿಶೇಷ ಚಿಕಿತ್ಸಾ ಸೌಲಭ್ಯಗಳು ಲಭ್ಯವಿದೆ.

ವರದಿ: ನಾಗರಾಜ್ ಮಂಗಳೂರು

Related posts

Leave a Reply