Header Ads
Header Ads
Breaking News

ಅಲ್ಟ್ರಾಸ್ಪೈಸ್ ಸೈಕಲ್ ರೇಸ್‌ನಲ್ಲಿ ಸಾಧನೆ ಮಾಡಿದ ಮಂಗಳೂರಿನ ಯುವಕ

 ವಿ.ಆರ್ ಸೈಕ್ಲಿಂಗ್‌ನ ಮಂಗಳೂರು ತಂಡದ ಧನರಾಜ್ ಕರ್ಕೇರ ೧೭೫೦ ಕಿಮೀ ಅಲ್ಟ್ರಾ ಸ್ಪೈಸ್ ಸೈಕಲ್ ರೇಸ್‌ನಲ್ಲಿ ಭಾಗವಹಿಸಿ, ಅದನ್ನು ಪೂರ್ಣಗೊಳಿಸಿದ ಮೊತ್ತ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ವಿ ಆರ್ ಸೈಕ್ಲಿಂಗ್ ಅವರು ಮಂಗಳೂರಲ್ಲಿ ಧನರಾಜ್ ಅವರನ್ನು ಅಭಿನಂದಿಸಲಾಯ್ತು.


ಅಲ್ಟ್ರಾ ಸ್ಪೈಸ್ ಎನ್ನುವುದು ಇನ್ಸ್ಪಿಯರ್ ಇಂಡಿಯಾ ನಡೆಸುವ ಭಾರತದ ಅತ್ಯಂತ ಕಠಿಣ ಮತ್ತು ಬಹು ದೂರದ,  ಸೈಕಲ್ ರೇಸ್ ಆಗಿದೆ. ಇದರ 3ನೇಯ ಆವೃತ್ತಿಯಲ್ಲಿ, ಭಾರತದಾದ್ಯಂತದಿಂದ ಬಂದ 11 ಸೈಕ್ಲಿಸ್ಟ್ಸ್‌ಗಳು ಭಾಗವಹಿಸಿದ್ದರು. ವಿಶೇಷವೆಂದರೆ, 1750 ಕಿಲೋಮೀಟರ್‌ನಲ್ಲಿ ಓರ್ವ ಮಹಿಳೆ ರೈಡರ್ ’ಇಳ ಪಾಟೀಲ್’ ಕೂಡ ಭಾಗವಹಿಸಿದ್ದರು. ಇದೀಗ ವಿ.ಆರ್ ಸೈಕ್ಲಿಂಗ್‌ನ ಮಂಗಳೂರು ತಂಡದ ಧನರಾಜ್ ಕರ್ಕೇರ 1750 ಕಿಮೀ ಅಲ್ಟ್ರಾ ಸ್ಪೈಸ್ ಸೈಕಲ್ ರೇಸ್‌ನಲ್ಲಿ ಭಾಗವಹಿಸಿ, ಅದನ್ನು ಪೂರ್ಣಗೊಳಿಸಿದ ಮೊತ್ತ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ,

ಗೋವಾದ ಕಡಲತೀರದಿಂದ ಪ್ರಾರಂಭವಾಗುವ ಈ ಸೈಕ್ಲಿಂಗ್ ಸ್ಪರ್ಧೆ, ಕರಾವಳಿಯ ರಸ್ತೆಗಳಲ್ಲಿ ಹಾದುಹೋಗಿ ಹೊನ್ನಾವರದಲ್ಲಿ ಒಳನಾಡಿಗೆ ತಿರುಗುತ್ತದೆ. ಪಶ್ಚಿಮ ಘಟ್ಟದ ಸಿರಿಮೆ, ಜೋಗದ ಜಲಪಾತದ ಮೂಲಕ ಹಾದುಹೋಗಿ ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ವಿರಾಜಪೇಟೆ, ವಾಯ್ನಾಡ್, ಗುಡಲೂರು ಮೂಲಕ ಊಟಿ ತಲುಪುತ್ತದೆ. ಅದೇ ಮಾರ್ಗದಲ್ಲಿ ಹಿಂತಿರುಗಿ, ಗೋವಾದಲ್ಲಿ ಪೂರ್ಣಗೊಳಿಸಲಾಗುತ್ತೆ,
ಸುಧೀರ್ ಅಲ್ಬುಕರ್ಕ್ ನೇತೃತ್ವದಲ್ಲಿದ್ದ  ತಂಡ, ಧನರಾಜನ್ನು ಮುಕ್ತಾಯದ ಅಂಚಿನವರೆಗೆ ತೆಗೆದುಕೊಂಡೊಯ್ದ, ವಿಜಯಿಯಾದುದಕ್ಕೆ ’ಅತ್ಯುತ್ತಮ ಸಿಬ್ಬಂದಿ’ ಎಂಬ ಪ್ರಶಸ್ತಿಗೆ ಪಾತ್ರರಾದರು. ಈ ನಡುವೆ ಮಂಗಳೂರಲ್ಲಿ ವಿ ಆರ್ ಸೈಕ್ಲಿಂಗ್, ಧನರಾಜ್ ಮತ್ತು ಅವರ  ತಂಡವನ್ನು ಅಭಿನಂದಿಸಲಾಯ್ತು, ಭವಿಷ್ಯದಲ್ಲಿ ಇಂತಹ ಸ್ಪರ್ಧೆಗಳಲ್ಲಿ ಭಾಗವಸಲು ನಮ್ಮ ರಾಜ್ಯದ ಮತ್ತು ಕರಾವಳಿಯ ಹೆಚ್ಚು ಸವಾರರನ್ನು ಪ್ರೇರೇಪಿಸಬೇಕೆಂದು ಎಂದು ವಿಆರ್ ಸೈಕ್ಲಿಂಗ್‌ನ ಧನರಾಜ್ ಹೇಳಿದರು. ಈ ವೇಳೆ ವಿ ಆರ್ ಸೈಕ್ಲಿಂಗ್‌ನ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply