Header Ads
Header Ads
Breaking News

ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಕ್ಕೆ ಖಂಡನೆ : ಮಂಜೇಶ್ವರದಲ್ಲಿ ಯೂತ್ ಲೀಗ್‌ನಿಂದ ಪ್ರತಿಭಟನಾ ಜಾಥಾ

ಮಂಜೇಶ್ವರ: ಪೊಲೀಸರ ಸಂಘಪರಿವಾರದ ನಿಲುವು ಹಾಗೂ ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಮುಸ್ಲಿಂ ಯೂತ್ ಲೀಗ್ ಮಂಜೇಶ್ವರ ವಲಯದ ಮುಂದಾಳತ್ವದಲ್ಲಿ ಮಂಜೇಶ್ವರ ಹಾಗೂ ಕುಂಬಳೆ ಪೊಲೀಸ್ ಠಾಣೆಗಳಿಗೆ ಪ್ರತಿಭಟನಾ ಜಾಥಾ ನಡೆಸಿದರು.ಜನವರಿ 3ರಂದು ಕೇರಳದಲ್ಲಿ ಬಿಜೆಪಿ ಹರತಾಳದ ಮಧ್ಯೆ ಮಂಜೇಶ್ವರದ ಕೆಲವೊಂದು ಪ್ರದೇಶದಲ್ಲಿ ಸಂಘಪರಿವಾರದ ಕೆಲವರು ಘರ್ಷಣೆಗೆ ಇಳಿದು ಅವರ ಸೊತ್ತು ನಾಶಗೊಳಿಸಿದಲ್ಲದೆ ಜನರ ಮೇಲೆ ಹಲ್ಲೆ ಮಾಡಿದ್ದಾರೆ. ಆದರೆ ಕೆಲವರು ರಾಜಾರೋಷವಾಗಿ ಬೀದಿ ಬೀದಿಗಳಲ್ಲಿ ಅಲೆದಾಡುತಿದ್ದರೂ ಪೊಲೀಸರು ಅವರನ್ನು ಬಂಧಿಸದೇ ಇರುವುದನ್ನು ಪ್ರತಿಭಟಿಸಿ ಯೂತ್ ಲೀಗ್ ಪೊಲೀಸ್ ಠಾಣೆಗೆ ಪ್ರತಿಭಟನಾ ಜಾಥಾ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.ಈ ಸಂದರ್ಭ ಪ್ರತಿಭಟನೆಯಲ್ಲಿ ಸತ್ತಾರ್ ಹಾಜಿ, ಅಬ್ದುಲ್ ಅಝೀಝ್ ಹಾಜಿ, ಶುಕೂರ್ ಹಾಜಿ, ಅಬ್ದುಲ್ ರಹ್ಮಾನ್ ಯು ಎಚ್, ಝಡ್ ಎ ಕಯ್ಯಾರ್ ಮೊದಲಾದವರು ಪ್ರತಿಭಟನೆಗೆ ಸಾಥ್ ನೀಡಿದರು.

Related posts

Leave a Reply