Header Ads
Header Ads
Breaking News

ಅಲ್-ಮದೀನಾ ವಿದ್ಯಾ ಸಂಸ್ಥೆಯ ಬೆಳ್ಳಿ ಹಬ್ಬದ ಸಂಭ್ರಮ

ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಮಂಜನಾಡಿಯ ಅಲ್-ಮದೀನಾ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ ೧ರಿಂದ ೩ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಾಜಿ ಮುಮ್ತಾಜ್ ಆಲಿ ತಿಳಿಸಿದರು

 

.

ಈ ಬಗ್ಗೆ ಮಂಗಳೂರಿನಲ್ಲಿ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಬೆಳ್ಳಿ ಹಬ್ಬದ ಕಾರ್ಯಕ್ರಮದಲ್ಲಿ ಅಖಿಲ ಭಾರತ ಸುನ್ನೀನೇತಾರ ಸುಲ್ತಾನುಲ್ ಉಲಮಾ ಎ.ಪಿ. ಅಬುಬಕ್ಕೆ ಮುಸ್ಲಿಯಾರ್ ಕಾಂತಪುರಂರವರ ದುವಾ ಅರ್ಶೀವಾದದೊಂದಿಗೆ ಪ್ರಾರಂಭವಾಗಲಿರುವ ಬೆಳ್ಳಿ ಹಬ್ಬ ಕಾರ್ಯಕ್ರಮವನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇ ಗೌಡ ಉದ್ಘಾಟಿಸಲಿರುವರು. ಸಚಿವ ಯು.ಟಿ. ಖಾದರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು ಎಂದು ಮಾಹಿತಿ ನೀಡಿದರು. ಇನ್ನು ಫೆಬ್ರವರಿ ೨ರಂದು ೨೫ ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಈ ಸಂದರ್ಭ ಪಿ.ಎಂ. ಅಬ್ಬಾಸ್ ಮುಸ್ಲಿಯಾಋ, ಡಾ. ಅಬ್ದುಲ್ ರಶೀದ್ ಜೈನಿ, ಅಬ್ದುಲ್ ಖಾದರ್ ಸಖಾಫಿ, ಕೆ.ಎಂ.ಕೆ ಮಂಜನಾಡಿ ಉಪಸ್ಥಿತಿರದ್ದರು.

Related posts

Leave a Reply