Header Ads
Header Ads
Header Ads
Breaking News

ಅಳಿವಿನಂಚಿನಲ್ಲಿ ಇರುವ ಬಿಳಿ ಗೂಬೆಯ ರಕ್ಷಣೆ

ಮಾರತಿ ವೀಥಿಕಾ ಬಳಿ ಅಸಹಾಯಕ ಸ್ಥಿತಿಯಲ್ಲಿ ಕಂಡು ಬಂದಿರುವ, ಬಲು ಅಪರೂಪದ ಬಿಳಿ ಗೂಬೆಯ ರಕ್ಷಣಾ ಕಾರ್ಯಚರಣೆಯು ಉಡುಪಿಯಲ್ಲಿ ನಡೆದಿದೆ.ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ಸುಧಾಕರ್ ದೇವಾಡಿಗ, ತಾರಾನಾಥ್ ಮೇಸ್ತ ಶಿರೂರು ಅವರು ಗೂಬೆಯನ್ನು ರಕ್ಷಿಸಿ ಅರಣ್ಯ ರಕ್ಷಕ ದೇವರಾಜ್ ಪಾಣ ಅವರ ವಶಕ್ಕೆ ನೀಡಿದ್ದಾರೆ. ಸೂಕ್ತ ಚಿಕಿತ್ಸೆ ನೀಡಿ ಗುಣಮುಖವಾದ ಬಳಿಕ ಬಿಳಿ ಗೂಬೆಯನ್ನು ಪರಿಸರಕ್ಕೆ ಬಿಡುವುದಾಗಿ ಅರಣ್ಯರಕ್ಷಕರು ಹೇಳಿದ್ದಾರೆ. ರೆಕ್ಕೆಗೆ ಗಾಯಗೊಂಡು ಹಾರಲಾಗದ ಸ್ಥಿತಿಯಲ್ಲಿದ್ದ ಗೂಬೆಯು, ಬೆಕ್ಕು- ಬೀದಿ ನಾಯಿಗಳಿಂದ ರಕ್ಷಿಸಿಕೊಳ್ಳಲು ಅಂಗಡಿಯೊಂದರ ಬಾಗಿಲ ಬಳಿ ಮುದಡಿ ಕುಳಿತಿರುವುದನ್ನು, ಅಂಗಡಿ ಮಾಲಿಕ ಸುಧಾಕರ ದೇವಾಡಿಗ ಅವರು ಗಮನಿಸಿದ್ದಾರೆ. ನಂತರ ಅವರ ಸಮಯ ಪ್ರಜ್ಞೆಯಿಂದ ಗೂಬೆಯ ರಕ್ಷಣಾ ಕಾರ್ಯಚರಣೆ ನಡೆದಿದೆ. ಬಲು ಅಪರೂಪವಾಗಿ ಕಾಣಲು ಸಿಗುವ ಬಿಳಿ ಗೂಬೆಯ ಕಂಡು ನೋಡುಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪರಿಸರದಲ್ಲಿ ಹೆಚ್ಚಾಗಿ ಕಂದು ಬಣ್ಣದ ಗೂಬೆಗಳು ಕಂಡು ಬರುತ್ತವೆ. ಬಿಳಿ ಬಣ್ಣದ ಗೂಬೆಗಳು ಅವನತಿ ಅಂಚಿನಲ್ಲಿವೆ. ಕಂದು ಗೂಬೆ ಅಪಶಕುನ, ಬಿಳಿ ಗೂಬೆ ಶುಭಫಲ ಎಂಬ ನಂಬಿಕೆ ಕೂಡ ಇದೆ. ಮನೆಯಲ್ಲಿ ಒಳಿತಾಗುವ ನಂಬಿಕೆಯಿಂದ ಬಿಳಿ ಗೂಬೆಯನ್ನು ಸಾಕುವವರು ಇದ್ದಾರೆ. ಕಂದು ಬಣ್ಣದ ಗೂಬೆ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಬಿಳಿ ಗೂಬೆಯು ಗಾತ್ರದಲ್ಲಿ ಸಣ್ಢದಾಗಿರುತ್ತದೆ. ಗೂಬೆ ಶ್ರೀಮಹಾಲಕ್ಷ್ಮೀ ದೇವಿಯ ವಾಹನವಾಗಿದೆ. ಹಾಗಾಗಿ ಗೂಬೆಯನ್ನು ಪೂಜ್ಯ ಭಾವನೆಯಿಂದ ಕಾಣಲಾಗುತ್ತದೆ.

Related posts

Leave a Reply

Your email address will not be published. Required fields are marked *