Header Ads
Header Ads
Breaking News

ಅಳಿವಿನ ಅಂಚಿನಲ್ಲಿರುವ ವನ್ಯ ಪ್ರಾಣಿ ಬೇಟೆಯಾಡಿದ್ದ ಇಬ್ಬರ ಬಂಧನ

ಹೆಬ್ರಿ ಸಮೀಪದ ಅಭಯಾರಣ್ಯದಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಆರೋಪದಲ್ಲಿ ವಿಟ್ಲ ಮೂಲದ ಇಬ್ಬರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಕೇರಳದ ಪಾತೂರು ನಿವಾಸಿ ಅಝೀಜ್, ವಿಟ್ಲ ಪಡ್ನೂರು ಗ್ರಾಮದ ಕುಕ್ಕಿಲ ನಿವಾಸಿ ಶಾಹುಲ್ ಹಮೀದ್ ಸಿಕ್ಕಿಬಿದ್ದವರು. ಇವರನ್ನು ಬಂದೂಕು ಸಹಿತ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮೂವರು ಪರಾರಿಯಾಗಿದ್ದಾರೆ. ಆರೋಪಿಗಳು ಕಬ್ಬಿನಾಲೆ ಅಭಯಾರಣ್ಯದಲ್ಲಿ ಅಳಿವಿನ ಅಂಚಿನಲ್ಲಿರುವ ಬರಿಂಕವನ್ನು ಬೇಟೆಯಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಅರಣ್ಯಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ತಂಡದಲ್ಲಿದ್ದ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯ ನಿವಾಸಿ ಹಮೀದ್ ಯಾನೆ ತಲ್ವಾರ್ ಹಮೀದ್ ಮತ್ತು ಇನ್ನಿಬ್ಬರು ಪರಾರಿಯಾಗಿದ್ದಾರೆ.ಆರೋಪಿಗಳಿಂದ ಬೇಟೆಯಾಡಿದ ವನ್ಯ ಪ್ರಾಣಿ ಹಾಗೂ ಅದಕ್ಕೆ ಬಳಸಿದ ಬಂದೂಕು, ಚೂರಿ ಹಾಗೂ ಕಾರೊಂದನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಹೆಬ್ರಿ ಸಮೀಪದ ಅಭಯಾರಣ್ಯದಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಆರೋಪದಲ್ಲಿ ವಿಟ್ಲ ಮೂಲದ ಇಬ್ಬರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕೇರಳದ ಪಾತೂರು ನಿವಾಸಿ ಅಝೀಜ್, ವಿಟ್ಲ ಪಡ್ನೂರು ಗ್ರಾಮದ ಕುಕ್ಕಿಲ ನಿವಾಸಿ ಶಾಹುಲ್ ಹಮೀದ್ ಸಿಕ್ಕಿಬಿದ್ದವರು. ಇವರನ್ನು ಬಂದೂಕು ಸಹಿತ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮೂವರು ಪರಾರಿಯಾಗಿದ್ದಾರೆ. ಆರೋಪಿಗಳು ಕಬ್ಬಿನಾಲೆ ಅಭಯಾರಣ್ಯದಲ್ಲಿ ಅಳಿವಿನ ಅಂಚಿನಲ್ಲಿರುವ ಬರಿಂಕವನ್ನು ಬೇಟೆಯಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಅರಣ್ಯಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ತಂಡದಲ್ಲಿದ್ದ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯ ನಿವಾಸಿ ಹಮೀದ್ ಯಾನೆ ತಲ್ವಾರ್ ಹಮೀದ್ ಮತ್ತು ಇನ್ನಿಬ್ಬರು ಪರಾರಿಯಾಗಿದ್ದಾರೆ.ಆರೋಪಿಗಳಿಂದ ಬೇಟೆಯಾಡಿದ ವನ್ಯ ಪ್ರಾಣಿ ಹಾಗೂ ಅದಕ್ಕೆ ಬಳಸಿದ ಬಂದೂಕು, ಚೂರಿ ಹಾಗೂ ಕಾರೊಂದನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Related posts

Leave a Reply