Header Ads
Header Ads
Header Ads
Breaking News

ಅಳೆತ್ತರದಲ್ಲಿ ಬೆಳೆದ ಭತ್ತದ ಪೈರು ಕಡಿಮೆ ಖರ್ಚಿನಿಂದ ಅದ್ಬುತ ಪಸಲು ಭತ್ತದ ಕೃಷಿಯಿಂದಲೇ ಖುಷಿಪಟ್ಟ ಕಿನ್ನಿಗೋಳಿಯ ಕರುಣಾಕರ ಶೆಟ್ಟಿ

 

 ಅಳೆತ್ತರದಲ್ಲಿ ಬೆಳೆದಿರುವ ಭತ್ತದ ಪೈರು, ಕಡಿಮೆ ಖರ್ಚಿನಿಂದ ಅದ್ಬುತ ಪಸಲು, ಇದು ಕೃಷಿಯಿಂದ ಹಿಮ್ಮುಖವಾಗುತಿರುವ ಇಂದಿನ ಜನಾಂಗಕ್ಕೆ ಮಾದರಿಯಾದ ಗ್ರಾಮೀಣ ಪ್ರದೇಶದ ರೈತರೊಬ್ಬರ ಭತದ ಬೆಳೆ ಎತ್ತ ನೋಡಿದರತ್ತ ಹಚ್ಚ ಹಸುರು, ಗದ್ದೆ ತುಂಬಾ ತೆನೆ ಬಿಟ್ಟು ಇನ್ನೇನು ಕೆಲ ದಿನದಲ್ಲಿ ಕಟಾವಿಗೆ ಸಿದ್ದವಾಗುತಿರುವ ಭತ್ತದ ಪೈರು, ಹೌದು ಇದು ಕಿನ್ನಿಗೋಳಿ ಸಮೀಪದ ಉಳೆಪಾಡಿಯ ರೈತ ಕರುಣಾಕರ ಶೆಟ್ಟಿಯವರ ಭತ್ತದ ಬೆಳೆ, ಉಳೆಪಾಡಿಯ ಮುಗೇರಬೆಟ್ಟು ಎಂಬಲ್ಲಿ ವಾಸವಾಗಿರುವ ಕರುಣಾಕರ ಶೆಟ್ಟಿಯವರು ಕೃಷಿಯನ್ನೇ ನಂಬಿ ಬದುಕಿದವರು ಕೃಷಿಯಲ್ಲಿ ಆಧುನಿಕತೆಯನ್ನು ಬಳಸಿಕೊಂಡು ತಾವು ಬೆಳೆಸಿದ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯುತ್ತಿರುವ ಕರುಣಾಕರ ಶೇಟ್ಟಿಯವರು ಈ ಬಾರಿ ಭತ್ತದ ಕೃಷಿಯಲ್ಲಿ ವಿಶೇಷ ಸಾದನೆ ಮಾಡಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಭತ್ತದ ಮೀಟರ್ ತಳಿಯನ್ನು ಆರಿಸಿ ಸ್ವಲ್ಪ ಜಾಗದಲ್ಲಿ ಬೀಜ ಹಾಕಿ ನೇಜಿ ಮಾಡಿ ಉತ್ತಮ ಇಳುವರಿ ಪಡೆದಿದ್ದರು . ಈ ಬಾರಿ ಸುಮಾರು ೯೦ ಕಿಲೋ ಭತ್ತ ಬೀಜದ ನೇಜಿಯನ್ನು ಬೆಳೆಸಿ ಐದು ಎಕ್ಕಾರೆ ಭತ್ತ ಕೃಷಿಯನ್ನು ಮಾಡಿದ್ದಾರೆ ಆಧುನಿಕ ಮೀಟರ್ ತಳಿ ಉತ್ತಮ ಪಸಲು ನೀಡಿದ್ದು ಕೃಷಿಕ ಕರುಣಾಕರ್ ಖುಷಿಯಾಗಿದ್ದಾರೆ.
 ಈ ತಳಿ ಎಕ್ಕರೆಗೆ 25ರಿಂದ 30 ಕಿಂಟ್ವಾಲ್ ಇಳುವರಿ ಕೊಡುತ್ತಿದು ಕರುಣಾಕರ ಶೆಟ್ಟಿಯವರು 5ಎಕ್ಕರೆಯಲ್ಲಿ 150 ಕಿಂಟ್ವಾಲ್ ಭತ್ತ ನಿರೀಕ್ಷೆಯಲ್ಲಿದ್ದಾರೆ. ಇವರು ಯಾಂತ್ರಿಕೃತ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡಿದ್ದಾರೆ, ಆದರೆ ಕೆಲವು ವರ್ಷದಿಂದ ಯಾವುದೇ ರಸಗೊಬ್ಬರವನ್ನು ಬಳಸುದಿಲ್ಲ ಅದರ ಬದಲಾಗಿ ಹಟ್ಟಿ ಗೊಬ್ಬರ ಹಾಗೂ ಸುಡು ಮಣ್ಣು ಬಳಸುತ್ತಾರೆ, ಕೀಟಬಾದೆ ಮತ್ತಿತರ ರೋಗಗಳಿಗೆ ತನ್ನದೇ ನಾಟಿ ಪದ್ದತಿಯಲ್ಲಿ ಇದರ ಉಪಶಮನ ಮಾಡುತ್ತಾರೆ. ಎರಡು ವರ್ಷದಿಂದ ಅಂದ್ರದ ತಂಡ ನಾಟಿ ಕೆಲಸವನ್ನು ಮಾಡುತ್ತಿದು, ಇದರಿಂದ ಕೂಲಿಯಾಳುಗಳ ಸಮಸ್ಯೆ ನಿವಾರಣೆಯಾಗಿದೆ. ಆಧುನಿಕ ರೀತಿಯಲ್ಲಿ ಕೃಷಿ ಪದ್ದತಿಯನ್ನು ಮಾಡಿದರೆ ಉತ್ತಮ ಲಾಭವಿದೆ ಎನ್ನುತ್ತಾರೆ ಕೃಷಿಕ ಕರುಣಾಕರ ಶೆಟ್ಟಿ, ಕೃಷಿಯಲ್ಲಿ ಉತ್ತಮ ಸಾಧನೆ ಮಾಡುತಿರುವ ಇವರನ್ನು ಮೆಚ್ಚಲೇ ಬೇಕು.

ನಿಶಾಂತ್ ಶೆಟ್ಟಿ ಕಿಲೆಂಜೂರು

Related posts

Leave a Reply