Breaking News

ಅವಧಿಗೆ ಮೊದಲು ನಡೆದ ಬ್ರಿಟನ್ ಚುನಾವಣೆ, ಆಳುವ ಪಕ್ಷಕ್ಕೆ ಮತದಾರರಿಂದ ಸರ್ಕಸ್ ಬಹುಮತ

ತಮ್ಮ ಬಹುಮತ ಹೆಚ್ಚಿಸಿಕೊಳ್ಳುವುದಕ್ಕಾಗಿ ಅವಧಿಗೆ ಮೊದಲೇ ಚುನಾವಣೆಗೆ ಹೋದ ಬ್ರಿಟನ್ ಪ್ರಧಾನಿ ತೆರೆಸಾ ಮೇ ಅವರಿಗೆ ಭಾರಿ ಮುಖಭಂಗವಾಗಿದೆ.
ಅವರ ಕನ್ಸರ್ವೇಟಿವ್ ಪಾರ್ಟಿ ಅತಿ ದೊಡ್ಡ ಪಕ್ಷವಾಗಿ ಮೂಡಿ ಬಂದಿದ್ದರೂ ಬಹುಮತ ಕಳೆದುಕೊಂಡಿದೆ. ಆದರೆ ಡೆಮಾಕ್ರಟಿಕ್ ಯೂನಿಯನಿಸ್ಟ್ ಪಾರ್ಟಿ ಬೆಂಬಲದಲ್ಲಿ ಸರ್ಕಾರ ರಚಿಸುವುದಾಗಿ ಮೇ ಅವರು ಹೇಳಿದ್ದಾರೆ. ೬೫೦ ಸದಸ್ಯ ಬಲದ ಬ್ರಿಟನ್ ಕೆಳಮನೆಯಲ್ಲಿ ಸರ್ಕಾರ ರಚಿಸಲು ೩೨೬ ಸ್ಥಾನಗಳು ಬೇಕು. ಕನ್ಸರ್ವೇಟಿವ್ ಪಾರ್ಟಿ ೩೧೮ ಕ್ಷೇತ್ರಗಳಲ್ಲಿ ಗೆದ್ದಿದ್ದರೆ ಲೇಬರ್ ಪಾರ್ಟಿಗೆ ೨೬೧ ಸ್ಥಾನಗಳು ದೊರೆತಿವೆ. ಜೆರೆಮಿ ಕಾರ್ಬಿನ್ ನೇತೃತ್ವದ ಮುಖ್ಯ ವಿರೋಧ ಪಕ್ಷ ಲೇಬರ್ ಪಾರ್ಟಿ ತನ್ನ ಬಲವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ.
ಬ್ರೆಕ್ಸಿಟ್ ಮಾತುಕತೆ ಸಂದರ್ಭದಲ್ಲಿ ತಮಗೆ ಹೆಚ್ಚಿನ ಬಹುಮತ ಬೇಕು ಎಂಬ ಕಾರಣಕ್ಕೆ ಮೇ ಅವರು ಮಧ್ಯಂತರ ಚುನಾವಣೆ ಘೋಷಿಸಿದ್ದರು. ಯಾವ ಪಕ್ಷಕ್ಕೂ ಬಹುಮತ ದಕ್ಕದೆ ಇರುವುದರಿಂದ ಇದೇ ೧೯ರಿಂದ ನಡೆಯಬೇಕಿರುವ ಬ್ರೆಕ್ಸಿಟ್ ಮಾತುಕತೆಯ ಮೇಲೆ ಕರಿಛಾಯೆ ಕವಿದಿದೆ. ಅವಧಿಗೆ ಮುನ್ನವೇ ನಡೆದ ಈ ಚುನಾವಣೆಯನ್ನು ‘ಬ್ರೆಕ್ಸಿಟ್’ ಚುನಾವಣೆ ಎಂದೇ ಬಣ್ಣಿಸಲಾಗಿತ್ತು. ಬ್ರೆಕ್ಸಿಟ್ ಪರವಾಗಿ ಇನ್ನಷ್ಟು ಬಹುಮತ ತಮಗೆ ದೊರೆಯಬಹುದು ಎಂದು ಮೇ ಅವರು ನಂಬಿದ್ದರು. ಆದರೆ, ೨೦೧೬ರ ಜೂನ್ನಲ್ಲಿ ನಡೆದ ಜನಮತಗಣನೆಯಲ್ಲಿ ಬ್ರೆಕ್ಸಿಟ್ ವಿರುದ್ಧ?ಮತ ಚಲಾಯಿಸಿದವರಲ್ಲಿಯೂ ಈ ಚುನಾವಣೆ ಆಶಾಭಾವನೆ ಸೃಷ್ಟಿಸಿತ್ತು. ಈ ಚುನಾವಣೆಯು ೨೦೧೬ರ ಜನಮತಗಣನೆ ಮತ್ತು ಬ್ರೆಕ್ಸಿಟ್ ಪರವಾದ ಮೇ ಅವರ ದೃಢ ನಿಲುವನ್ನು ಜನರು ತಿರಸ್ಕರಿಸಬಹುದು ಎಂದು ಅವರು ಭಾವಿಸಿದ್ದರು.
ಇತ್ತೀಚಿನ ದಿನಗಳಲ್ಲಿ ಬ್ರಿಟನ್ ಮೇಲೆ ಉಗ್ರರ ಹಲವು ದಾಳಿಗಳು ನಡೆದಿವೆ. ಜತೆಗೆ ಬ್ರೆಕ್ಸಿಟ್ ಮಾತುಕತೆ ನಡೆಯಬೇಕಿರುವ ಈ?ದಿನಗಳು ಬ್ರಿಟನ್ಗೆ ನಿರ್ಣಾಯಕ. ಅಂತಹ ಸಂದರ್ಭದಲ್ಲಿಯೇ ಚುನಾವಣಾ ಫಲಿತಾಂಶ ದೇಶದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದೆ. ಮೇ ಅವರು ತಮ್ಮ ಜನಪ್ರಿಯತೆಯನ್ನೇ ಮುಂದಿಟ್ಟುಕೊಂಡು ಚುನಾವಣೆಗೆ ಹೋಗಿದ್ದರು. ಪಕ್ಷದ ಹೆಸರಿಗಿಂತ ತಮಗೇ?ಹೆಚ್ಚಿನ ಮಹತ್ವ ನೀಡಿದ್ದರು. ಹಾಗಾಗಿ ಫಲಿತಾಂಶವನ್ನು ಮೇ ಅವರಿಗೆ ಹೀನಾಯ ಸೋಲು ಎಂದೇ?ಬ್ರಿಟನ್ ಮಾಧ್ಯಮಗಳು ಬಣ್ಣಿಸಿವೆ. ಮಧ್ಯಂತರ ಚುನಾವಣೆಯ ಜೂಜಿನಲ್ಲಿ ಮೇ ಅವರು ಸೋತಿದ್ದಾರೆ. ಹಾಗಾಗಿ ಮೇ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಕಾರ್ಬಿನ್ ಒತ್ತಾಯಿಸಿದ್ದಾರೆ. ಅಲ್ಪಮತದ ಸರ್ಕಾರ ರಚಿಸಲು ತಮ್ಮ ಪಕ್ಷ ಸಿದ್ಧವಿದೆ ಎಂದೂ ಅವರು ತಿಳಿಸಿದ್ದಾರೆ.

Related posts

Leave a Reply