Header Ads
Header Ads
Breaking News

ಅವಸಾನದ ಅಂಚಿಗೆ ತಲುಪಿದ ಬೆಂದ್ರ್ ತೀರ್ಥ:ಇತಿಹಾಸದ ಪುಟ ಸೇರಿದ ಆರಾಧನೆಯ ಕೇಂದ್ರ

ಶತಮಾನಗಳಿಂದ ಜನತೆಯ ನಂಬಿಕೆಯ, ಆರಾಧನೆಯ ಕೇಂದ್ರವೊಂದು ಇದೀಗ ಇತಿಹಾಸದ ಗರ್ಭ ಸೇರಿಕೊಂಡಿದೆ. ಪ್ರಕೃತಿಯ ಸಮತೋಲನದ ಮೇಲಿನ ಮನುಷ್ಯನ ಅತಿಯಾದ ಹಸ್ತಕ್ಷೇಪ ಈ ವಿಸ್ಮಯದ ಕೇಂದ್ರವನ್ನು ನಶಿಸುವಂತೆ ಮಾಡಿದೆ. ಯಾವುದೀ ವಿಸ್ಮಯ ಕೇಂದ್ರ, ಇದರ ನಾಶಕ್ಕೆ ಕಾರಣ ಏನು ಅನ್ನೋದನ್ನ ಹೇಳ್ತೀವಿ ಈ ಸ್ಟೋರಿ ನೋಡಿ.

ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಇರ್ದೆ ಗ್ರಾಮದಲ್ಲಿರುವ ಬೆಂದ್ರತೀರ್ಥ ಎನ್ನುವ ಪ್ರವಾಸಿ ತಾಣ. ಬೆಂದ್ರ್ ಎಂದರೆ ಸ್ಥಳೀಯ ಭಾಷೆಯಾದ ತುಳುವಿನಲ್ಲಿ ಬಿಸಿಯಾದ ಎನ್ನುವ ಅರ್ಥವನ್ನೂ ನೀಡುತ್ತದೆ. ಹೌದು ಇಲ್ಲಿರುವ ಈ ಕೆರೆ ದಿನದ ಇಪ್ಪತ್ತನಾಲ್ಕು ಗಂಟೆಯೂ, ವರ್ಷದ 365 ದಿನವೂ ಬಿಸಿಯಾಗಿಯೇ ಇದ್ದ ಕಾರಣ ಇದಕ್ಕೆ ಬಿಸಿ ನೀರಿನ ಚಿಲುಮೆ ಎನ್ನುವ ಹೆಸರು ಬಂದಿದೆ. ಈ ಕೆರೆಯ ಅಡಿ ಭಾಗದಿಂದ ನಿರಂತರವಾಗಿ ಬಿಸಿ ನೀರಿನ ಬುಗ್ಗೆಗಳು ಏಳುತ್ತಿದ್ದ ಸಂದರ್ಭದಲ್ಲಿ ಈ ಕ್ಷೇತ್ರಕ್ಕೆ ಜನ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಇಲ್ಲಿನ ತೀರ್ಥ ಸ್ನಾನಗಳನ್ನು ಮಾಡುತ್ತಿದ್ದರು.ಈ ಪರಿಸರದಲ್ಲಿ ಅಗತ್ಯಕ್ಕೂ ಮಿಕ್ಕಿದ ಕೊಳವೆ ಬಾವಿಗಳ ಕೊರೆತದಿಂದಾಗಿ ಅಂತರ್ಜಲ ಸಂಪೂರ್ಣ ಕುಸಿದ ಪರಿಣಾಮ ಬೆಂದ್ರತೀರ್ಥವೂ ಬತ್ತಿಹೋಗಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ದಶಕಗಳ ಹಿಂದೆಯಷ್ಟೇ ಆಸ್ತಿಕರ ಶ್ರದ್ಧಾಕೇಂದ್ರವಾಗಿದ್ದ ಬೆಂದ್ರೆತೀರ್ಥ ಇಂದು ಅವಸಾನದ ಅಂಚಿಗೆ ತಲುಪಿರುವುದು ಆಸ್ತಿಕರ ನಿರಾಶೆಗೂ ಕಾರಣವಾಗಿದೆ. ಆಸ್ತಿಕರ ಶ್ರದ್ಧಾಕೇಂದ್ರವನ್ನು ಉಳಿಸಿಕೊಳ್ಳಲಾಗದ ಸ್ಥಳೀಯರ ವೈಫಲವೂ ಇಲ್ಲಿ ಎದ್ದು ಕಾಣಿಸಲಾರಂಭಿಸಿದ್ದು, ಪ್ರಕೃತಿಯ ಮೇಲಿನ ಅತಿಯಾದ ಶೋಷಣೆಯೇ ಈ ತೀರ್ಥ ಕೇಂದ್ರ ನಾಶವಾಗಲು ಕಾರಣ ಎನ್ನುವ ಆರೋಪವೂ ವ್ಯಕ್ತವಾಗುತ್ತಿದೆ.ಬೆಂದ್ರ್ ತೀರ್ಥ ಇರುವಂತಹ ಸ್ಥಳದ ಪಕ್ಕದಲ್ಲೇ ಸೀರೆಹೊಳೆ ಹರಿಯುತ್ತಿದ್ದು, ಇದರ ನೀರಿನ ಮಟ್ಟವೂ ಕುಸಿಯಲಾರಂಭಿಸಿದೆ. ಈ ಕಾರಣಕ್ಕಾಗಿ ಈ ಹೊಳೆಗೆ ಅಲ್ಲಲ್ಲಿ ಕಟ್ಟೆಗಳನ್ನು ಕಟ್ಟಿ ನೀರಿಂಗಿಸುವ ಕಾರ್ಯ ನಡೆಸಿದಲ್ಲಿ ಬೆಂದ್ರ್ ತೀರ್ಥದಲ್ಲಿ ನೀರು ನಿಲ್ಲುವ ಸಾಧ್ಯತೆಯೂ ಇದೆ. ಅಲ್ಲದೆ ಈಗಿರುವ ಕೆರೆಯನ್ನು ಕೊಂಚ ಕೊರೆದಲ್ಲೂ ನೀರು ಸಿಗುವ ಸಾಧ್ಯತೆಯೂ ಇದೆ ಎನ್ನುವುದು ಸ್ಥಳೀಯ ಅಭಿಪ್ರಾಯವಾಗಿದೆ.

ಪ್ರವಾಸೋಧ್ಯಮ ಇಲಾಖೆಯ ಅಡಿಯಲ್ಲಿ ಬರುವುದಂತ ಬೆಂದ್ರೆತೀರ್ಥದಲ್ಲಿ ತೀರ್ಥಸ್ನಾನ ಮಾಡಲು ಬರುವವರಿಗಾಗಿ ಶೌಚಗೃಹ ಹಾಗೂ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ. ಆದರೆ ಇವೆಲ್ಲವೂ ಇದೀಗ ಪಾಳು ಬೀಳುವ ಸ್ಥಿತಿಗೆ ತಲುಪಿದೆ. ಪ್ರವಾಸೋಧ್ಯಮ ಇಲಾಖೆ ಮತ್ತೆ ಈ ವಿಸ್ಮಯಕಾರಿ ಕೆರೆಯಲ್ಲಿ ಮತ್ತೆ ಬಿಸಿ ನೀರು ಚಿಮ್ಮುವಂತೆ ಮಾಡಲು ಕ್ರಮ ಕೈಗೊಳ್ಳಬೇಕೆನ್ನುವ ಕೂಗೂ ಕೇಳಿ ಬರಲಾರಂಭಿಸಿದೆ.

Related posts

Leave a Reply