Breaking News

ಅವಿವಾಹಿತ ಆತ್ಮಹತ್ಯೆ

ಮೂಡುಬಿದಿರೆ : ಅಪಘಾತದಿಂದ ಗಾಯಗೊಂಡು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ತೋಡಾರಿನ ಉಳಾಯಿ ಅಂಗಡಿ ಎಂಬಲ್ಲಿ ನಡೆದಿದೆ.
ಇಲ್ಲಿನ ಹೇಮಚಂದ್ರ (30) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ವಾಹನಗಳ ಪೈಂಟಿಂಗ್ ಕೆಲಸ ನಿರ್ವಹಿಸುತ್ತಿದ್ದ ಇವರು ಅವಿವಾಹಿತರಾಗಿದ್ದರು. ಇತ್ತೀಚಿಗೆ ಸಂಭವಿಸಿದ ಅಪಘಾತದಿಂದ ಗಾಯಗೊಂಡ ಬಳಿಕ ಮಾನಸಿಕವಾಗಿ ಖಿನ್ನರಾಗಿದ್ದು, ತಮ್ಮದೇ ಮನೆಯ ಬಾವಿಯ ರಾಟೆಗೆ ಹಗ್ಗಕಟ್ಟಿ ನೇಣು ಬಿಗಿದುಕೊಂಡಿದ್ದಾರೆ.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply