Header Ads
Breaking News

ಅವೈಜ್ಞಾನಿಕ ಹಂಪ್‍ನಿಂದಾಗಿ ಮಹಿಳೆ ಬಲಿ

ಕಡಬದ ಹೊಸ್ಮಠ ಸೇತುವೆಯ ಬಳಿ ಅವೈಜ್ಞಾನಿಕವಾಗಿ ಅಳವಡಿಸಲಾಗಿರುವ ಹಂಪ್ ನಿಂದಾಗಿ ಮಹಿಳೆಯೋರ್ವರು ಬಲಿಯಾಗಿರುವ ಘಟನೆ ನಡೆದಿದೆ.

ಮೃತ ಮಹಿಳೆಯನ್ನು ವೇಣೂರಿನ ಬಜಾಲು ಸಮೀಪದ ವಿರಂದಲೆ ನಿವಾಸಿ ವೆಂಕಪ್ಪ ಸಾಲ್ಯಾನ್ ಎಂಬವರ ಪತ್ನಿ ಸುಂದರಿ (65 ವ) ಎಂದು ಗುರುತಿಸಲಾಗಿದೆ. ಮೃತ ಮಹಿಳೆಯು ತನ್ನ ಮೊಮ್ಮಗನೊಂದಿಗೆ ಬೆಳಗಿನ ಜಾವ ವೇಣೂರಿನಿಂದ ಕಡಬಕ್ಕೆಂದು ಹೊರಟಿದ್ದು, ಬೆಳಿಗ್ಗೆ 6.30ರ ಸುಮಾರಿಗೆ ಮಂಜು ಆವರಿಸಿದ್ದರಿಂದ ಹಂಪ್ ಗೋಚರಿಸದೆ ಬೈಕ್ ಸ್ಕಿಡ್ ಆಗಿದ್ದು, ರಸ್ತೆಗೆಸೆಯಲ್ಪಟ್ಟ ಸುಂದರಿಯವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Related posts

Leave a Reply

Your email address will not be published. Required fields are marked *