Header Ads
Breaking News

ಅವ್ಯವಸ್ಥೆಯ ಆಗರದಲ್ಲಿ ಕಾರ್ಕಳದ ಬಂಡಿಮಠ ಬಸ್ ನಿಲ್ದಾಣ

ಕಾರ್ಕಳ: ಕಾರ್ಕಳದ ಬಂಡಿಮಠ ಬಸ್ ನಿಲ್ದಾಣ ಸಂಪೂರ್ಣ ಅವ್ಯವಸ್ಥೆಯಿಂದ ತುಂಬಿ ಹೋಗಿದೆ. ಉರಿಯದ ದೀಪ, ಕುಡುಕರ ಹಾವಳಿ, ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ. ಇಷ್ಟೇಲ್ಲಾ ಸಮಸ್ಯೆಗಳಿದ್ದರೂ ಪುರಸಭೆಯ ಅಧಿಕಾರಿಗಳ ಗಮನಕ್ಕೆ ಬಾರದೆ ಇರುವುದು ವಿಪರ್ಯಾಸ. ಈ ಬಗ್ಗೆ ಒಂದು ವರದಿ ಇಲ್ಲಿದೆ..

ಕಾರ್ಕಳದ ಬಂಡೀಮಠ ಬಸ್ ನಿಲ್ದಾಣದಲ್ಲಿ ಸಂಜೆ ಪಶ್ಚಿಮ ದಿಕ್ಕಿನಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಕಾರ್ಕಳ ಬಂಡೀಮಠ ಬಸ್ ನಿಲ್ದಾಣ ಕತ್ತಲಲ್ಲಿ ಮುಳುಗುತ್ತದೆ. ಹಲವು ಸಮಯಗಳಿಂದ ಬಂಡೀಮಠ ಬಸ್ ನಿಲ್ದಾಣದ ಬೀದಿ ದೀಪಗಳು ಉರಿಯುತ್ತಿಲ್ಲ, ದೀಪಗಳಿಲ್ಲದೆ ಮಹಿಳೆಯರು, ಮಕ್ಕಳು ವೃದ್ಧರು ಬಸ್ ನಿಲ್ದಾಣದಲ್ಲಿ ಬಸ್ಸಿಗೆ ಕಾಯಲು ಭಯ ಪಡುವಂತಪರಿಸ್ಥಿತಿ ಉಂಟಾಗಿದೆ. ರಾಜ್ಯದ ಹಲವು ಜಿಲ್ಲೆಗಳಿಗೆ ಸಂಪರ್ಕಿಸುವ ಕೆ.ಎಸ್.ಆರ್.ಟಿ. ಸಿ. ಬಸ್ ನಿಲುಗಡೆ ತಾಣವಿದು. ನಿಲ್ದಾಣವು ಪುರಸಭೆಯ 5ನೇ ವಾರ್ಡಿನಲ್ಲಿ ಇದ್ದು 2011-12ರಲ್ಲಿ 2-18 ಎಕರೆ ಜಾಗವನ್ನು ಬಸ್ ನಿಲ್ದಾಣಕ್ಕೆ ಕಾಯ್ದಿರಿಸಲಾಗಿತ್ತು. 1-78ಎಕರೆ ವಿಸ್ತೀರ್ಣದಲ್ಲಿ ಸುಮಾರು2.5 ಕೋಟಿ ರು. ವೆಚ್ಚದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸಿ ಬಸ್ ನಿಲ್ದಾಣ ಅಭಿವೃದ್ಧಿಪಡಿಸಲಾಗಿತ್ತು.
ಬಸ್ಸು ನಿಲ್ದಾಣ ವ್ಯಾಪ್ತಿಯಲ್ಲಿ ಬೆಳಕಿನ ವ್ಯವಸ್ಥೆಗಾಗಿ ಹೈಮಾಸ್ಕ ದೀಪವನ್ನು ಅಳವಡಿಸಲಾಗಿತ್ತು. ಅದರಲ್ಲಿರುವ ಲೈಟ್‍ಗಳೆಲ್ಲ ಕೆಟ್ಟು ಹೋಗಿದ್ದು, ಹೈಮಾಸ್ಕ ದೀಪದ ಪ್ಯಾನೆಲ್ ದುರಸ್ತಿಗೆ ಎಂದು ಕೆಳಗೆ ಇಳಿಸಿ ವರ್ಷ ಕಳೆದರೂ ಪುರಸಭೆ ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ. ದಿನಕ್ಕೆ ಸರಿ ಸುಮಾರು 200ಕ್ಕೂ ಅಧಿಕ ಬಸ್ಸುಗಳು ನಿಲ್ದಾಣಕ್ಕೆ ಬಂದು ಹೋಗುತ್ತವೆ. ತಾಲೂಕು ಕೇಂದ್ರದಿಂದ ಮೂರು ಕಿಲೋಮೀಟರ್ ದೂರದಿಂದ ಈ ಬಸ್ ನಿಲ್ದಾಣವಿದೆ. ಆದರೆ ಇಲ್ಲಿನ ಪರಿಸರ ಮಾತ್ರ ಪೆÇೀಲಿ, ಪುಂಡರ ತಾಣವಾಗಿದ್ದು ಬೆಳಕಿಲ್ಲದೆ ಇರುವ ಕಾರಣದಿಂದ ಕತ್ತಲಲ್ಲಿ ನಿಂತು ಬಸ್ಸು ಕಾಯುವ ಪರಿಸ್ಥಿತಿ ಇದೆ.
ಹೆಣ್ಣು ಮಕ್ಕಳ ಸುರಕ್ಷತೆಗೆ ಭೀತಿ ಎದುರಾಗಿದೆ. ರಾತ್ರಿ ಮದ್ಯ ಸೇವನೆ ಮಾಡಿ ಸುತ್ತಾಡುವುದು, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿ ಬಿಸಾಡಿದ ಬಾಟಲಿಗಳು ಸಾಕ್ಷಿಯಾಗಿದೆ. ಇನ್ನು ಕೆಲವರು ದೂರದಿಂದ ಬಂದವರು ಬಸ್ ನಿಲ್ದಾಣದ ಒಳಗೆ ನಿದ್ರಿಸುವುದು ಸಾಮಾನ್ಯವಾಗಿದೆ. ನಿಲ್ದಾಣದ ಪರಿಸರದಲ್ಲಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತದೆ. ಪರಿಸರದಲ್ಲಿ ಅಲ್ಲಲ್ಲಿ ರಾಶಿ ಬಿದ್ದಿರೋ ಮದ್ಯದ ಬಾಟಲಿಗಳು ಸಾಕ್ಷಿಯಾಗಿದೆ ತುಂಬಿ ತುಳುಕುವ ಕಸದ ರಾಶಿ ಬಿದ್ದಿರೋದು ಪುರಸಭೆಯ ಗಮನಕ್ಕೆ ಬರದೇ ಇರುವುದು ಆಶ್ಚರ್ಯದ ಸಂಗತಿಯಾಗಿದೆ. ಈ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದ್ವಿಚಕ್ರ ವಾಹನ ನಿಲುಗಡೆ ಹಾಗೂ ಖಾಸಗಿ ವಾಹನ ಕಂಪೆನಿಗಳ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ ಎಂದು ಪತ್ರಕರ್ತ ಕೃಷ್ಣ ನಾಯಕ್ ಮಾಧ್ಯಮಕ್ಕೆ ತಿಳಿಸಿದರು.

ಒಟ್ಟಿನಲ್ಲಿ ಕಾರ್ಕಳದ ಬಂಡೀಮಠ ಬಸ್ ನಿಲ್ದಾಣ ಅವ್ಯವಸ್ಥೆಯ ತಾಣವಾಗಿದೆ. ಇಷ್ಟೇಲ್ಲಾ ಸಮಸ್ಯೆಗಳಿದ್ದರೂ ಕಾರ್ಕಳ ಪುರಸಭೆಯ ಅಧಿಕಾರಿಗಳು ಮೌನ ವಹಿಸಿದ್ದು, ಕೂಡಲೇ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *