Header Ads
Header Ads
Breaking News

ಸುಳ್ಯ : ಅಶಕ್ತ ಕುಟುಂಬಕ್ಕೆ ದಾನಿಗಳ ಸಹಕಾರದಿಂದ ‘ಮನೆ ಭಾಗ್ಯ’ :ತಹಶೀಲ್ದಾರ್ ನೇತೃತ್ವದಲ್ಲಿ ವಿಶಿಷ್ಠವಾಗಿ ನಡೆದ ಬೆಳಕು ಗೃಹ ಪ್ರವೇಶ

ಹಲವು ವರ್ಷದಿಂದ ರಸ್ತೆ ಬದಿಯ ಗುಡಿಸಲಿನಲ್ಲಿ ವಾಸವಿದ್ದ ಕುಟುಂಬವೊಂದಕ್ಕೆ ಈ ಬಾರಿ ಮನೆಭಾಗ್ಯ ಒದಗಿ ಬಂದಿದೆ. ಸೂರಿಲ್ಲದ ಕುಟುಂಬಕ್ಕೆ ಆಸರೆಯಾಗಿ ಬಂದ ಸುಳ್ಯ ತಹಶೀಲ್ದಾರ್ ಮನೆ ನಿರ್ಮಾಣದ ನೇತೃತ್ವವನ್ನು ವಹಿಸಿಕೊಂಡು ಹಲವು ಸಹೃದಯಿ ದಾನಿಗಳು ಸಹಕಾರದಲ್ಲಿ ಸುಳ್ಯದ ಯುವ ಬ್ರಿಗೇಡ್ ಸದಸ್ಯರು, ಎಸ್.ಕೆ.ಎಸ್.ಎಸ್.ಎಫ್. ವಿಖಾಯ ತಂಡ ಹಾಗೂ ಎಸ್.ಎಸ್.ಎಫ್ ನ ಎಸ್,ವೈ,ಎಸ್. ತಂಡದ ಶ್ರಮದಾನದಿಂದ ಪೂರ್ಣಗೊಂಡ ಬೆಳಕು ಎಂಬ ನೂತನ ಮನೆಯ ಗೃಹ ಪ್ರವೇಶ ವಿಶಿಷ್ಠವಾಗಿ ನಡೆಯಿತು.

ಅಜ್ಜಾವರ ಗ್ರಾಮದ ಅಡ್ಪಂಗಾಯದ ರಸ್ತೆಯ ಬದಿಯಲ್ಲಿ ರಾಮಣ್ಣ -ಲಲಿತಾ ದಂಪತಿಗಳು ಹಲವು ವರ್ಷದಿಂದ ಸಣ್ಣ ಗುಡಿಸಲೊಂದನ್ನು ಕಟ್ಟಿಕೊಂಡು ವಾಸವಾಗಿದ್ದರು. ದಂಪತಿಗೆ ಬೆಳೆದು ನಿಂತ ಮಗಳಿದ್ದಾಳೆ. ಗುಡಿಸಿಲಿನಲ್ಲಿ ಇವರೆಲ್ಲರ ಬದುಕು ಯಾತನಾಮಯವಾಗಿತ್ತು. ಅವರಿಗೆ ಸ್ವಂತ ಜಾಗವಾಗಲೀ, ರೇಶನ್ ಕಾರ್ಡ್ ಆಗಲೀ, ಯಾವುದೇ ಸವಲತ್ತುಗಳಾಗಲೀ ಇರಲಿಲ್ಲ. ಇತ್ತೀಚೆಗೆ ಭಾರೀ ಮಳೆ ಸುರಿಯುತ್ತಿದ್ದ ಸಂದರ್ಭ ಆ ರಸ್ತೆಯಲ್ಲಿ ಕ್ಷೇತ್ರ ಕಾರ್‍ಯ ನಡೆಸುತ್ತಿದ್ದ ಅಜ್ಜಾವರ ಗ್ರಾಮಕರಣಿಕ ಶರತ್ ಹಾಗೂ ಉಗ್ರಾಣಿ ಶಿವಣ್ಣರು ಈ ಮನೆಗೆ ಭೇಟಿ ನೀಡಿದ್ದರು. ಮಳೆ ಬಂದು ಮನೆಯ ಒಳಗಡೆ ನೀರು ಹರಿಯುತ್ತಿದ್ದುದನ್ನು ಗಮನಿಸಿದ ಇವರು ತಕ್ಷಣ ಪಕ್ಕದಲ್ಲೇ ಇರುವ ಅಡ್ಪಂಗಾಯ ಶಾಲೆಗೆ ಹೋಗಿ ಅಲ್ಲಿಯ ಎಸ್‌ಡಿ.ಎಂ.ಸಿ. ಹಾಗೂ ಶಿಕ್ಷಕರನ್ನು ವಿನಂತಿಸಿ ಶಾಲೆಯ ರಂಗ ಮಂದಿರದಲ್ಲಿ ವಾಸವಿರಲು ಅವಕಾಶ ಮಾಡಿಸಿಕೊಟ್ಟರು. ಬಳಿಕ ಆ ಕುಟುಂಬವನ್ನು ಅಲ್ಲಿಂದ ಶಾಲೆಗೆ ಸ್ಥಳಾಂತರಿಸಲಾಯಿತು. ತಹಸೀಲ್ದಾರ್ , ಗ್ರಾಮ ಕರಣಿಕರು ಹಾಗೂ ಪತ್ರಕರ್ತ ಶರೀಫ್ ಜಟ್ಟಿಪ್ಪಳ್ಳ ಮನೆಗೆ ದಾನಿಗಳ ನೆರವಿಗಾಗಿ ಸಂಪರ್ಕ ಸಾಧಿಸಿದರು. ಪೂರಕ ಪ್ರತಿಕ್ರಿಯೆ ಬಂತು. ಶ್ಯಾಮ್ ಇಂಜಿನಿಯರ್, ಗುತ್ತಿಗೆದಾರ ಗೋಪಾಲಕೃಷ್ಣ ಕರೋಡಿ, ನವೀನ್ ರೈ ಮೇನಾಲ., ಪಿ.ಆರ್. ಹಮೀದ್, ಹೇಮಂತ್ ಕಾಮತ್, ಜನಪ್ರಿಯ ಪೈಂಟ್ಸ್, ರೆಡ್ಡಿ ಕನ್‌ಸ್ಟ್ರಕ್ಷನ್ಸ್ ನವರು ಮನೆ ಕಟ್ಟುವ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಿ ಉದಾರತೆ ಮೆರೆದರು.

Related posts

Leave a Reply

Your email address will not be published. Required fields are marked *