Header Ads
Header Ads
Breaking News

ಅಷ್ಟಮಠದ ಸ್ವಾಮೀಜಿ ಪಾಲಿಟಿಕ್ಸ್‌ ಗೆ ಎಂಟ್ರಿ

ಉತ್ತರದಲ್ಲಿ ಯೋಗಿ ಸ್ಟೈಲಲ್ಲೇ ಕರ್ನಾಟಕದಲ್ಲೂ ಮುಂಬರುವ ವಿಧಾನಸಭಾ ಚುನಾವಣೆಗೆ ಧುಮುಕಲು ಸ್ವಾಮೀಜಿಯೋರ್ವರು ರೆಡಿಯಾಗಿದ್ದಾರೆ. ಇವರು ಅಷ್ಟಮಠದ ನಾಡು, ಕೃಷ್ಣನ ನೆಲೆವಿಡು ಉಡುಪಿಯ ಪ್ರಭಾವಿ ಸ್ವಾಮೀಜಿ.. ಅವರು ತನ್ನ ಚುನಾವಣೆಯ ಸ್ಪರ್ಧೆಯ ಬಗ್ಗೆ ಘೋಷಣೆ ಮಾಡಿದ್ದಾರೆ..

ತನ್ನ ಕಾರ್ಯ ವೈಖರಿ ಮೂಲಕನೇ ಜನರಿಗೆ ಚಿರಪರಿಚಿತರಾಗಿರುವ ಉಡುಪಿ ಅಷ್ಟಮಠಾದೀಶರಲ್ಲಿ ಒಬ್ಬರಾದ ಶಿರೂರು ಶ್ರೀಗಳು ಮುಂಬರುವ ವಿಧಾನ ಸಭಾ ಚುನಾವಣೆಗೆ ಸ್ಪರ್ದಿಸುವುದು ಖಚಿತವಾಗಿದೆ. ಉಡುಪಿ ವಿಧಾನ ಸಭಾ ಕ್ಷೇತ್ರದಿಂದಲೇ ಸ್ಪರ್ದಿಸುವುದಾಗಿ ಹಿರಿಯಡ್ಕದ ಶಿರೂರು ಮೂಲ ಮಠದಲ್ಲಿ ಘೋಷಣೆ ಮಾಡಿದ್ದಾರೆ. ಪಕ್ಷೇತರನಾಗಿ ಸ್ಪರ್ದೆ ಮಾಡುವುದಾಗಿ ತಿಳಿಸಿರುವ ಶಿರೂರು ಲಕ್ಷ್ಮೀವರ ತೀರ್ಥ ಶ್ರೀಪಾದರು ಒಂದು ವೇಳೆ ಬಿಜೆಪಿ ಟಿಕೆಟ್ ನೀಡಿದರೆ ಬಿಜೆಪಿಯಿಂದಲೇ ಸ್ಪರ್ದಿಸುವುದಾಗಿ ತಮ್ಮ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಕೇಂದ್ರ, ರಾಜ್ಯ ಬಿಜೆಪಿಯ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಅಂತ ಹೇಳಿರುವ ಸ್ವಾಮೀಜಿ ಉಡುಪಿಯ ಬಿಜೆಪಿ ನಾಯಕರ ಬಗ್ಗೆ ಅಸಮಾಧಾನ ಇದೆ ಅಂತ ಹೇಳಿದ್ದು ತಾನು ಬಿಜೆಪಿಯಿಂದ ಸ್ಪರ್ದೆ ಮಾಡಿದರೆ ಉಡುಪಿ ಬಿಜೆಪಿಯಲ್ಲಿರುವ ಅವ್ಯವಸ್ಥೆಗಳನ್ನು ಸರಿಪಡಿಸುತ್ತೇನೆ ಎಂದಿದ್ದಾರೆ.


ಶಿರೂರು ಶ್ರೀಗಳ ರಾಜಕೀಯ ಎಂಟ್ರಿ ಇದೀದ ಸಾರ್ವಜನಿಕವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಷ್ಟ ಮಠದೀಶರು ಅದರಲ್ಲೂ ಕೃಷ್ಣನ ಪೂಜೆ ಮಾಡುವ ಶ್ರೀಗಳು ರಾಜಕೀಯಕ್ಕೆ ಸೇರಬಾರದಿತ್ತು ಎಂಬುದು ಹಲವರ ಅಭಿಪ್ರಾಯವಾಗಿದೆ. ಅದರಲ್ಲೂ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರನಾಗಿ ಸ್ಪರ್ದಿಸಿದರೆ ಅದು ಕಾಂಗ್ರೆಸ್ ಗೆ ವರದಾನವಾಗಲಿದೆ. ಈಗಾಗಲೇ ಈ ಕ್ಷೇತರದಲ್ಲಿ ಪ್ರಮೋದ್ ಮದ್ವರಾಜ್ ತಮ್ಮ ಛಾಪನ್ನು ಮೂಡಿಸಿದ್ದು ಮಾಜಿ ಶಾಸಕ ರಘುಪತಿಭಟ್ ಹಾಗೂ ರಾಜ್ಯ ಕಾರ್ಯಕಾರಣಿ ಸದಸ್ಯ ಉದಯ್ ಕುಮಾರ್ ಶೆಟ್ಟಿ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಶಿರೂರು ಶ್ರೀಗಳನ್ನು ಚುನಾವಣೆಗೆ ನಿಲ್ಲಿಸಿ ಬಿಜೆಪಿಯನ್ನು ಮುಗಿಸಲು ಸಚಿವ ಪ್ರಮೋದ್ ಮದ್ವರಾಜ್ ಅವರೇ ಗೇಮ್ ಪ್ಲ್ಯಾನ್ ಮಾಡಿದ್ದಾರೆ ಅಂತ ಬಿಜೆಪಿ ಆರೋಪಿಸಿದೆ. ಶಿರೂರು ಶ್ರೀಗಳ ರಾಜಕೀಯ ಪ್ರವೇಶದಿಂದ ಬಿಜೆಪಿ ಕಂಗಾಲಾಗಿದ್ದು ಸ್ವಾಮೀಜಿ ಬಳಿ ಮಾತುಕತೆ ನಡೆಸಿ, ಮನವೊಲಿಸಲು ಪ್ರಯತ್ನಕ್ಕೆ ಮುಂದಾಗಿದೆ.

ಒಟ್ಟಿನಲ್ಲಿ ಶಿರೂರು ಶ್ರೀಗಳ ರಾಜಕೀಯ ಎಂಟ್ರಿ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬ್ರಾಹ್ಮಣ ಮತಗಳನ್ನು ಹಾಗೂ ಹಿಂದೂಗಳ ಮತಗಳ ವಿಭಜನೆಗೆ ಮಾಡಿರುವ ಹೊಸ ಪ್ಲ್ಯಾನ್ ಹೇಗೆ ವರ್ಕೌಟ್ ಆಗುತ್ತೆ ಎಂಬುದನ್ನ ಮಾತ್ರ ಕಾದು ನೋಡಬೆಕಾಗಿದೆ.
ವರದಿ: ಪಲ್ಲವಿ ಸಂತೋಷ್ ಉಡುಪಿ

Related posts

Leave a Reply