Header Ads
Header Ads
Breaking News

ಅಸಕ್ತರ ನೆರವಿಗಾಗಿ ಪಡುಬಿದ್ರಿಯಲ್ಲಿ ಬಾಂಧವ್ಯ ಟ್ರೋಪಿ.. ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಉದ್ಘಾಟನೆ..

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ನೆರವಿಗಾಗಿ ಬೀಡು ಹಾಗೂ ನವಚೇತನ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ, ನಾಲ್ಕು ದಿನಗಳ ಕಾಲ ನಡೆಯುವ ಭಾಂದವ್ಯ ಟ್ರೋಪಿ-2018 ಪಿಪಿಎಲ್ ಕ್ರಿಕೆಟ್ ಪಂದ್ಯಾಕೂಟವನ್ನು ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಮುಖ್ಯ ಅಥಿತಿಯಾಗಿ ಭಾಗವಹಿಸಿದ ಕುಂದಾಪುರ ಮೂಲದ ಕ್ರಿಕೆಟ್ ಪಟು ಗೌತಮ್ ಶೆಟ್ಟಿ ಮಾತನಾಡಿ, ಉತ್ತಮ ಉದ್ಧೇಶ ಇಟ್ಟುಕೊಂಡು ನಡೆಸುತ್ತಿರುವ ಈ ಕ್ರಿಕೆಟ್ ಪಂದ್ಯಾಕೂಟ ಬಹಳ ಯಶಸ್ವಿಯಾಗಿ ನಡೆಯುವುದರಲ್ಲಿ ಎರಡು ಮಾತಿಲ್ಲ. ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆ, ಅನಾರೋಗ್ಯ ಪೀಡಿತರ ವೈಧ್ಯಕೀಯ ವೆಚ್ಚ, ತೀರ ಬಡ ಕುಟುಂಬಗಳಿಗೆ ಸಹಾಯ ಹೀಗೆ ಹತ್ತಾರು ಕುಟುಂಬಗಳಿಗೆ ದಾರಿದೀಪವಾಗಿ ನಡೆಯುತ್ತಿರುವ ಈ ಕ್ರಿಕೆಟ್ ಪಂದ್ಯಾಕೂಟ ಹೊಸ ದಾರಿಯಲ್ಲಿ ಸಾಗುತ್ತಿರುವುದು ಬಹಳ ಸಂತಸ ತಂದಿದ್ದು, ಈ ಅವಳಿ ಸಂಸ್ಥೆಗಳ ಈ ಸಮಜೋಮುಖಿ ಕಾರ್ಯ ಇತರೇ ಸಂಘ-ಸಂಸ್ಥೆಗಳಿಗೆ ಮಾದರಿ ಎಣಿಸಿದೆ ಎಂದರು.
ಇದೇ ವೇಳೆ ಕರಾಟೆ ಪಟು ಸತೀಶ್ ಬೆಳ್ಮಣ್ ಹಾಗೂ ಕ್ರಿಕೆಟ್ ಪಟು ಗೌತಮ್ ಶೆಟ್ಟಿ ಇವರನ್ನು ಗೌರವಿಸಲಾಯಿತು. ಮುಖ್ಯ ಅಥಿತಿಗಳಾಗಿ ಕೇಶವ ಕೆ. ಅಮೀನ್, ಶಶಿಕಾಂತ್ ಪಡುಬಿದ್ರಿ, ನೀತಾ ಗುರುರಾಜ್, ಪ್ರಕಾಶ್ ಶೆಟ್ಟಿ, ಶರತ್ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಸಂಘಟಕರಾದ ಪ್ರಸಾದ್ ಬೀಡು ಹಾಗೂ ಸುಬ್ರಹ್ಮಣ್ಯ ಉಪಸ್ಥಿತರಿದ್ದರು

ವರದಿ-ಸುರೇಶ್ ಎರ್ಮಾಳ್