Header Ads
Header Ads
Header Ads
Breaking News

ಅಸಮರ್ಪಕ ಮರಳು ನೀತಿಯ ವಿರುದ್ಧ ಪ್ರತಿಭಟನೆ ವಿಟ್ಲ ನಗರ ಬಿಜೆಪಿಯಿಂದ ಉಪವಾಸ ಸತ್ಯಾಗ್ರಹ

 

ವಿಟ್ಲ: ದ.ಕ ಜಿಲ್ಲೆಯಲ್ಲಿ ತಲೆದೋರಿರುವ ಮರಳಿನ ಅಭಾವ, ಅಕ್ರಮ ಮರಳು ಸಾಗಾಟ, ಅಸರ್ಮಕ ಮರಳು ನೀತಿಯ ವಿರುದ್ಧ ವಿಟ್ಲ ನಗರ ಬಿಜೆಪಿ ವತಿಯಿಂದ ವಿಟ್ಲದ ನಾಡಕಚೇರಿ ಸಮೀಪ ಉಪವಾಸ ಸತ್ಯಗ್ರಹ ನಡೆಸಿದರು.

ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅವರು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವರು ದಿನಕ್ಕೊಂದು ಬೇಜಾಬ್ದಾರಿತನದ ಹೇಳಿಕೆಗಳನ್ನು ನೀಡುತ್ತಾ ರಾಜ್ಯದ ಜನರಿಗೆ ವಂಚನೆ ಮಾಡುತ್ತಿದ್ದಾರೆ. ಇದು ತುಘಲಕ್ ಸರ್ಕಾರವಾಗಿದ್ದು, ವಿವಿಧ ಭಾಗ್ಯಗಳ ಹೆಸರಿನಲ್ಲಿ ಹಗಲು ದರೋಡೆ ಮಾಡುತ್ತಿದ್ದಾರೆ. ಈ ಸರ್ಕಾರ ಭ್ರಷ್ಟಚಾರದಿಂದ ಕೂಡಿ ಜನರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಮುಖಂಡ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ ಇಲ್ಲಿರುವ ಮರಳು ಸಮಸ್ಯೆಗೆ ಜಿಲ್ಲಾ ಉಸ್ತುವಾರಿ ಸಚಿವರು ನೇರ ಹೊಣೆಯಾಗಿದ್ದಾರೆ. ಸಚಿವರ ಚೇಲಾಗಳು ಮರಳು ದಂಧೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ರಾಜೇಶ್ ನಾಕ್ ಉಳಿಪಾಡಿಗುತ್ತು, ಪದ್ಮನಾಭ ಕೊಟ್ಟಾರಿ, ಅರುಣ್ ಕುಮಾರ್ ಪುತ್ತಿಲ, ದೇವದಾಸ್ ಶೆಟ್ಟಿ, ಚನ್ನಪ್ಪ ಕೊಟ್ಯಾನ್, ಪುರುಷೋತ್ತಮ, ದಿನೇಶ್ ಅಮ್ಟೂರು, ಕೋಲ್ಪೆ ರಾಜಾರಾಮ್ ಶೆಟ್ಟಿ, ನಿತ್ಯಾನಂದ ನಾಯಕ್ ವಿಟ್ಲ ಮೊದಲಾದವರು ಭಾಗವಹಿಸಿದ್ದರು.

Related posts

Leave a Reply