Header Ads
Breaking News

ಅಸಲ್ ಕೈಕುಲು ತುಳು ಹಾಸ್ಯ ಧಾರವಾಹಿಯ ಫ್ರೋಮೋ ಬಿಡುಗಡೆ

ಮಂಗಳೂರು: ಸ್ಮಾರ್ಟ್ ಎಂಟರ್ ಪ್ರೈಸ್ಸ್ ಹಾಗೂ ಮಹೇಶ್ ಶೆಟ್ಟಿ ಮಜಲ್ ತೋಟ ನಿರ್ದೇಶನದ ಅಸಲ್ ಕೈಕುಲು ತುಳು ಹಾಸ್ಯ ಧಾರವಾಹಿಯ ಫ್ರೋಮೋ ಬಿಡುಗಡೆ ಸಮಾರಂಭ ಮಂಗಳೂರಿನ ಅಶೋಕನಗರದ ಸಮೀಪದಲ್ಲಿರುವ ಬಿಲ್ಲವ ಸಂಘದ ಸಭಾಂಗಣದಲ್ಲಿ ನಡೆಯಿತು. ಇನ್ನೂ ಅಸಲ್ ಕೈಕುಲು ಧಾರವಾಹಿ ಫ್ರೋಮೋವನ್ನು ರೇಖೀ ಗುರೂಜಿ ಲೋಕಾರ್ಪಣೆ ಗೊಳಿಸಿದ್ರು. ಈ ಸಂದರ್ಭದಲ್ಲಿ ರಂಗ ನಟ ನವೀನ್ ಶೆಟ್ಟಿ ಮಾತನಾಡಿ, ಕಲಾವಿದರಿಗೆ ತ್ಮಾಳೆ ಹಾಗೂ ಸಹನೇ ಅತೀ ಮುಖವಾಗಿರುತ್ತದೆ. ಅದನ್ನು ಮೈಗೂಡಿಸಿಕೊಂಡಾಗ ಉತ್ತಮ ಕಲಾವಿದರಾಗುತ್ತಾರೆ ಅಂತಾ ಹೇಳಿದ್ರು.ಈ ವೇಳೆ ನಿರ್ಮಾಪಕ ಸಚಿನ್ ಎ. ಉಪ್ಪಿನಂಗಡಿ, ಶ್ರೀ ಭಗವತೀ ಕ್ಷೇತ್ರದ ಕುದ್ರೋಳಿಯ ಆಡಳಿತ ಮುಕ್ತೇಸರಾದ ಮಾಧವ ಜಪ್ಪಟ್ಣ, ನಿರ್ಮಾಪಕ ಜ್ಯೋತಿ ಜೈನ್, ಸಹ ನಿರ್ಮಾಪಕ ಬಾಲಕೃಷ್ಣ ಶೆಟ್ಟಿ, ನಿರ್ದೇಶಕ ಮಹೇಶ್ ಶೆಟ್ಟಿ, ಛಾಯಾಗ್ರಹಣ ಮಯೂರ್ ಆರ್ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು. ಇದೇ ರಂಗಭೂಮಿ ಕಲಾವಿದರನ್ನು ಸನ್ಮಾನಿಸಲಾಯಿತು. ತುಳು ಹಾಸ್ಯ ಮಯ ಧಾರಾವಾಹಿಯು ನಿಮ್ಮ ನೆಚ್ಚಿನ ವಿ೪ ನ್ಯೂಸ್ ನಲ್ಲಿ ಪ್ರಸಾರವಾಗಲಿದೆ.