Header Ads
Header Ads
Breaking News

ಅಸಹಾಯಕ ದಂಪತಿಗಳ ಸಹಾಯಕ್ಕೆ ಬಂದ ಉಡುಪಿಯ ವಿಶು ಶೆಟ್ಟಿ

ಬೆಂಗಳೂರು ಮೂಲದ ವಿಕಲ ಚೇತನ ದಂಪತಿ ಕುಂದಾಪುರದ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಆಯ ತಪ್ಪಿ ಬಿದ್ದು ಕಾಲಿನ ಸ್ವಾಧೀನ ಕಳೆದುಕೊಂಡ ಘಟನೆ ನಡೆದಿದೆ. ಸಮಾಜ ಸೇವಕ ವಿಶು ಶೆಟ್ಟಿ ಅವರು ದಂಪತಿಗಳಿಗೆ ಸಹಾಯಕ್ಕೆ ಬಂದು ಮಾನವೀಯತೆ ಮೆರೆದಿದ್ದಾರೆ. ಮಹಿಳೆಗೆ ಹುಟ್ಟಿನಿಂದ ಕಾಲು ಸ್ವಾಧಿನ ಇಲ್ಲದ ಕಾರಣದಿಂದ ಆಯತಪ್ಪಿ ಎಡವಿ ಬಿದ್ದಿದ್ದಾಳೆ. ನಡೆಯಲಾಗದ ಪರಿಸ್ಥಿತಿಯಲ್ಲಿದ್ದ ಆಕೆಯನ್ನು ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು ಪಡಿಸಿದ ಘಟನೆ ನಡೆದಿದೆ. ವೈದ್ಯರು ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಮಹಿಳೆಯ ಪೋಲಿಯೋ ಪೀಡಿತ ಎಡ ಕಾಲಿನ ತೊಡೆಯ ಮೂಳೆ ಮುರಿದಿರುವುದು ಕಂಡು ಬಂದಿದೆ. ಕಾರ್ಯಕ್ರಮವೊಂದಕ್ಕೆ ದಂಪತಿಗಳು ಕುಂದಾಪುರಕ್ಕೆ ಬಂದವರೆಂದು ತಿಳಿದು ಬಂದಿದೆ.ಆಸ್ಪತ್ರೆಯಲ್ಲಿ ಗಾಯದ ಗಂಭೀರತೆ ಕಂಡು, ಮೂಳೆ ಜೋಡಣೆ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಹೋಗುವಂತೆ ವೈದ್ಯರು ದಂಪತಿಗಳಿಗೆ ಸಲಹೆ ನೀಡಿದ್ದಾರೆ. ಬಡ ದಂಪತಿಗಳು ಬೆಂಗಳೂರು ಮೂಲದವರಾದರಿಂದ ಅಸಹಾಯಕರಾಗಿದ್ದಾರೆ. ಅವರಲ್ಲಿ ಹಣವು ಇಲ್ಲದೆ ಪರದಾಡ ಬೇಕಾದ ಪರಿಸ್ಥಿತಿಯು ಎದುರಾಯಿತು. ಕೊನೆಗೆ ತಮ್ಮೂರಿಗೆ ಹೋಗಿ ಸಂಬಂಧಿಕರಲ್ಲಾದಾರೂ ನೆರವು ಯಾಚಿಸಿ ಪತ್ನಿಗೆ ಚಿಕಿತ್ಸೆ ಕೊಡಿಸಲು ಪತಿ ರವಿ ಶಂಕರ್ ನಿರ್ಧರಿಸಿದ್ದಾನೆ. ಆದರೆ ಗಾಯಾಳು ಪತ್ನಿಯನ್ನು ಬೆಂಗಳೂರಿಗೆ ಸಾಗಿಸಲು ಅಂಬುಲೇನ್ಸ್ ವ್ಯವಸ್ಥೆಗಾಗಿ ಉಚಿತ ಸರಕಾರಿ ಅಂಬುಲೇನ್ಸ್ ಸೇವಾ ಕೇಂದ್ರವನ್ನು ಸಂಪರ್ಕಿಸಿದ್ದಾನೆ. ಅಷ್ಟೊಂದು ದೂರದ ಸಂಚಾರಕ್ಕೆ ಉಚಿತ ವ್ಯವಸ್ಥೆಯ ಸರಕಾರಿ ಅಂಬುಲೇನ್ಸ್ ಸೇವೆ ಇಲ್ಲವೆಂಬ ಮಾಹಿತಿ ಪಡೆದಿದ್ದಾನೆ. ಖಾಸಗಿ ಅಂಬುಲೇನ್ಸ್ ಅವರಲ್ಲಿ ವಿಚಾರಿಸಿದಾಗ 12 ಸಾವಿರ ಬಾಡಿಗೆ ಆಗುತ್ತದೆ ಎಂದು ಹೇಳಿದ್ದಾರೆ. ವಿಕಲಚೇತನ ಆಗಿರುವ ರವಿ ಶಂಕರ್ ಅಷ್ಟೊಂದು ಹಣ ಇಲ್ಲದೆ ಅತಂತ್ರ ಪರಿಸ್ಥಿತಿಯಲ್ಲಿ ಸಿಲುಕಿದ್ದಾನೆ.
ಅಸಹಾಯಕ ಪರಿಸ್ಥಿತಿಯಲ್ಲಿ ನೆರವಿಗೆ ಬರುವ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರನ್ನು ಸಂಪರ್ಕಿಸುವಂತೆ ಯಾರೋ ರವಿ ಶಂಕರ್ ಅವರಿಗೆ ಮಾಹಿತಿ ನೀಡಿದ್ದಾರೆ. ಸಲಯಂತೆ ರವಿ ಶಂಕರ್ ಅವರು ವಿಶು ಶೆಟ್ಟಿ ಅವರನ್ನು ಸಂಪರ್ಕಿಸಿ ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ. ನಿಜ ಸ್ಥಿತಿ ಅರಿತ ವಿಶು ಶೆಟ್ಟಿ ಅವರು ದಿವ್ಯಾಂಗ ದಂಪತಿಗಳ ಅಳಲಿಗೆ ಸ್ಪಂದಿಸಿ, ಖಾಸಗಿ ಅಂಬುಲೇನ್ಸ್ ಗೊತ್ತು ಪಡಿಸಿದ್ದಾರೆ. ಬಾಡಿಗೆಗೆಂದು ೬ ಸಾವಿರ ಹಣವನ್ನು ನೀಡಿ ಮಾನಯವಿತೆ ಮರೆದಿದ್ದಾರೆ. ಅಂಬುಲೇನ್ಸ್ ಮೂಲಕ ಗಾಯಾಳನ್ನು ಸಾಗಿಸುವರೆಗೂ ನೆರವಾಗಿದ್ದಾರೆ. ಉಳಿದ ಹಣವನ್ನು ಅವರು ಪ್ರಯಾಣಕ್ಕೆ ಮಿಸಲಾಗಿಟ್ಟ ಹಣವನ್ನು ಜೋಡಿಸಿ ಕೊಂಡಿದ್ದಾರೆ. ಅಸಾಹಯಕರ ಪಾಲಿಗೆ ವಿಶು ಶೆಟ್ಟಿ ಮತ್ತೊಮ್ಮೆ ಬೆಳಕಾಗಿ ಮೂಡಿದ್ದರೆ.

Related posts

Leave a Reply