Header Ads
Breaking News

ಅಸಹಾಯಕ ಸ್ಥಿತಿಯಲ್ಲಿ ಅಪರಿಚಿತ ಯುವತಿ ಪತ್ತೆ : ನಿಟ್ಟೂರು ರಾಜ್ಯ ಮಹಿಳಾ ನಿಲಯದಲ್ಲಿ ಯುವತಿಗೆ ಆಶ್ರಯ

ಉಡುಪಿ: ಇಂದ್ರಾಣಿ ರೈಲು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಅಪರಿಚಿತ ಯುವತಿಯೊರ್ವಳು ಕಂಡುಬಂದಿದ್ದು, ಗಮನಿಸಿದ ರೈಲ್ವೆ ಅಧಿಕಾರಿಗಳು ಸಂಬಂಧಪಟ್ಟವರಿಗೆ ವಿ?ಯ ಮಟ್ಟಿಸಿದ್ದರು. ತಕ್ಷಣ ಯುವತಿಯನ್ನು ರಕ್ಷಿಸಿ, ನಿಟ್ಟೂರು ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಕಲ್ಪಿಸಲಾಗಿದೆ.

ಕಾರ್ಯಚರಣೆಯಲ್ಲಿ ನಗರ ಮಹಿಳಾ ಠಾಣೆ ಸಿಬ್ಬಂದಿ ಜ್ಯೋತಿ, ಮಹಿಳಾ ಸಹಾಯವಾಣಿ ಸಿಬ್ಬಂದಿ ಪೂರ್ಣಿಮಾ, ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಪಾಲ್ಗೊಂಡಿದ್ದರು. ಕಾರ್ಯಚರಣೆಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಉಚಿತ ವಾಹನ ಸೇವೆ ಒದಗಿಸಿತು/ ಮಾನಸಿಕ ಖಿನ್ನತೆಗೆ ಒಳಪಟ್ಟವರಂತೆ ಕಂಡು ಬಂದಿದ್ದಾರೆ. ತನ್ನ ಹೆಸರು ಕಿರಣ( 19ವ) ಗಂಡ ಲೇಬೋ, ತನಗೊಂದು ಮಗುವಿದೆ. ಊರು ಅಲಂ ಬಜಾರ್, ಪಶ್ಚಿಮಬಂಗಾಳ ಎಂದು ಅಸ್ವ?ವಾಗಿ ಹೇಳಿಕೊಂಡಿದ್ದಾಳೆ. ಸಂಬಂಧಿಕರು ಉಡುಪಿ ಮಹಿಳಾ ಠಾಣೆ, ಅಥವಾ ಮಹಿಳಾ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.

Related posts

Leave a Reply

Your email address will not be published. Required fields are marked *