Breaking News

ಅಸಾಹಯಕ ಪಾರ್ಶ್ವವಾಯು ಪೀಡಿತ ಮಹಿಳೆ ಮತ್ತು ಬುದ್ಧಿ ಮಾಂದ್ಯ ಬಾಲಕಿಯ ಚಿಂತಾಜನಕ ಬದುಕು…! ತಡವಾಗಿ ಬೆಳಕಿಗೆ ಬಂದಿದೆ. ತಕ್ಷಣ ಜಿಲ್ಲಾಡಳಿತ ಸ್ಪಂದಿಸ ಬೇಕಾಗಿದೆ.

ಉಡುಪಿ, ನಗರದ ಬಲಾಯಿಪಾದೆಯ ರಾಷ್ಟ್ರೀಯ ಹೆದ್ದಾರಿ 66ರ ಸನಿಹ ಪಾರ್ಶವಾಯು ಪೀಡಿತ (55ವ) ಮಹಿಳೆ ಮತ್ತು ಆಕೆಯ ಬುದ್ಧಿಮಾಂದ್ಯ 16 ವರ್ಷದ ಸಾಕು ಮಗಳು ನಾಗರಿಕ ಸಮಾಜದಲ್ಲಿ ದುಸ್ಥಿತಿ ಪರಿಸ್ಥಿತಿಯಲ್ಲಿರುವ ಘಟನೆ ಬೆಳಕಿಗೆ ಬಂದಿದೆ.ಲೀಲಾ ಸೆಬಾಸ್ಟನ್ (55 ವ) ಮಹಿಳೆ ಮತ್ತು ಥೆರೆಸಾ (16) ನಾಗರಿಕ ಸಮಾಜದಲ್ಲಿ ಅನಾಗರಿಕ ಬದುಕು ಸಾಗಿಸುತ್ತಿರುವ ದುರ್ದೈವಿಗಳು. ಲೀಲಾರ ಸಹೋದರಿ ಬೇಬಿ ಸೆಬಾಸ್ಟನ್ ಹಲವು ವರ್ಷಗಳ ಹಿಂದೆ ಮರಣ ಹೊಂದಿದ್ದಾರೆ. ಸಾಯುವ ಮೊದಲು ಬೇಬಿ ತನ್ನ ಅಕ್ಕನಲ್ಲಿ ತನ್ನ ಮಗುವನ್ನು ಚೆನ್ನಾಗಿ ನೋಡು ಕೊಳ್ಳುವಂತೆ ವಿನಂತಿಸಿಕೊಂಡಿದ್ದಾಳೆ.ಲೀಲಾ ಸೆಬಾಸ್ಟನ್ ಹಲವು ವರ್ಷಗಳಿಂದ ಪಾರ್ಶವಾಯು ಪೀಡಿತಳಾಗಿ ಸರಕಾರದ ಅಂಗವಿಕಲ ವೇತನದಲ್ಲಿ ಬದುಕು ಸಾಗಿಸುತ್ತಿದ್ದಾಳೆ. ಜೋತೆಯಲ್ಲಿ ಸಹೋದರಿಯ ಮಗಳ ಪಾಲನೆ ಮಾಡ ಬೇಕು. ಮಹಿಳೆಗೆ ನಡೆಯಲಾಗದ ಸ್ಥಿತಿ ಇದೆ. ಆಕೆಯ ದಿನಚರಿಯ ನಡಿಗೆಗೆ ಸಾಕು ಮಗಳೆ ಊರುಗೋಲು. ಮಗಳು ಹೆದ್ದಾರಿಯಲ್ಲಿ ಮನ ಬಂದಂತೆ ತಿರುಗಾತ್ತಾಳೆ. ವಾಹನ ಅಪಘಾತಕ್ಕೂ ಕಾರಣವಾಗಿದೆ. ಮೊದಲೇ ಬಲಾಯಿಪಾದೆ ಅಪಘಾತ ವಲಯ.ಮಹಿಳೆಗೆ ತನ್ನವರು ಯಾರು ಇಲ್ಲವೆಂದು ಹೇಳಿ ಕೊಳ್ಳುತ್ತಾಳೆ. ಮಹಿಳೆಗೆ ತುರ್ತಾಗಿ ಆಶ್ರಮದ ವ್ಯವಸ್ಥೆ ಬೇಕಾಗಿದೆ. ಮಗುವಿಗೆ ಬುದ್ಧಿ ಮಾಂದ್ಯ ಮಕ್ಕಳ ವಸತಿ ಕೇಂದ್ರದ ಆಶ್ರಯ ಸಿಕ್ಕರೆ ಸ್ವಲ್ಪ ನೆಮ್ಮದಿಯ ಬದುಕು ಅಸಾಹಯಕ ಕುಟುಂಬಕ್ಕೆ ಸಿಗಬಹುದು.ಅಲೆವೂರು ಪಂಚಾಯತ್ ಸದಸ್ಯೆ ಶ್ರೀಮತಿ ಪ್ರೇಮ ಈ ಬಗ್ಗೆ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಕೂಡಲೇ ವಿಶು ಶೆಟ್ಟಿ ಅವರು ಸಂತ್ರಸ್ಥರ ಮನೆಗೆ ಭೇಟಿ ಕೊಟ್ಟಿದ್ದಾರೆ. ಪರಿಸ್ಥಿತಿ ತಿಳಿದು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದಾರೆ. ಘಟಕದ ಅಧ್ಯಕ್ಷರಾದ ಬಿ ಕೆ ನಾರಾಯಣ್ ಸರಕಾರದ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಬಾಲಕಿಯನ್ನು ವಿಶು ಶೆಟ್ಟಿ ಅವರು ಬುದ್ದಿ ಮಾಂದ್ಯ ಮಕ್ಕಳ ವಸತಿ ಶಾಲೆಗೆ ಸೇರಿಸಲು ಸಾಕಷ್ಟು ಕಡೆ ವಿಚಾರಿಸಿದ್ದಾರೆ. ಏಲ್ಲಿಯೂ ವ್ಯವಸ್ಥೆ ಆಗಲಿಲ್ಲ.ಮಿಷನರಿ ಸಮಾಜಕ್ಕೆ(ಪೋಟಸ್ಟೆಂಟ್) ಸಮಾಜಕ್ಕೆ ಈ ಕುಟುಂಬ ಸೇರಿದೆ. ಸಮಾಜದ ಸಂಘ-ಸಂಸ್ಥೆಗಳು ಮತ್ತು ಸರಕಾರದ ಸಂಬಂಧ ಪಟ್ಟ ಇಲಾಖೆಗಳು ಜಿಲ್ಲಾಡಳಿತ ಗಂಭೀರವಾದ ಗಮನಹರಿಸಿ ಅಸಾಹಯಕರನ್ನು ಸಮಾಜದ ಮುಖ್ಯವಾಹಿನಿಗೆ.ತರಬೇಕಾಗಿದೆ. ಅಸಾಹಯಕ ಕುಟುಂಬಕ್ಕೆ ಮಾನವಿತೆಯ ನೆಲೆಯಲ್ಲಿ ತನ್ನ ವತಿಯಿಂದ 10 ಸಾವಿರ ರೂ ನೆರವು ನೀಡುವುದಾಗಿ ವಿಶು ಶೆಟ್ಟಿ ಅವರು ಹೇಳಿದ್ದಾರೆ. ಸಮಸ್ಯೆಯ ವಿಚಾರವಾಗಿ ಜವಬ್ಧಾರಿ ಹೊತ್ತ ಸರಕಾರದ ಇಲಾಖೆಗಳು ಸಮಸ್ಯೆಯತ್ತ ಗಮನಹರಿಸ ಬೇಕು. ನಾಗರಿಕ ಸಮಾಜದಲ್ಲಿ ಅವರು ನಾಗರಿಕರಾಗಿ ಬದುಕಲು ಅವಕಾಶ ಮಾಡಿ ಕೋಡಬೇಕೆಂದು ಸಮಾಜಸೇವಕ ವಿಶು ಶೆಟ್ಟಿ ಅವರು ಆಗ್ರಹಪಡಿಸಿದ್ದಾರೆ.

Related posts

Leave a Reply