Header Ads
Breaking News

ಅಸುರಕ್ಷಿತವಾಗಿದೆ ತುಂಬೆಯಿಂದ ಮಂಗಳೂರಿಗೆ ಪೂರೈಕೆಯಾಗುವ ನೀರಿನ ಮುಖ್ಯ ಪೈಪ್‌ಲೈನ್

ಬಂಟ್ವಾಳ: ತುಂಬೆಯಿಂದ ಮಂಗಳೂರಿಗೆ ಪೂರೈಕೆಯಾಗುವ ಕುಡಿಯುವ ನೀರಿನ ಮುಖ್ಯ ಪೈಪ್‌ಲೈನ್ ಅಸುರಕ್ಷಿತ ಸ್ಥಿತಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿಯ ಬದಿಯ ವಿವಿಧ ಕಡೆಗಳಲ್ಲಿ ಹಾದುಹೋಗುವ ಪೈಪ್‌ಲೈನ್ ಮೇಲೆ ಮತ್ತೆ ಮಣ್ಣಿನ ರಾಶಿ ಸುರಿದಿದ್ದಲ್ಲದೆ, ಪೈಪ್‌ಲೈನ್‌ನ ಪಕ್ಕದಲ್ಲೇ ಕಾಮಗಾರಿಯ ಬೃಹತ್ ಕಾಂಕ್ರಿಟ್ ಪಿಲ್ಲರನ್ನು ಹಾಕಲಾಗಿದೆ. ಇದರಿಂದ ಮಳೆಗಾಲದಲ್ಲಿ ಮಣ್ಣಿನ ಭಾರ ಹೆಚ್ಚಾಗಿ ಮತ್ತೆ ನೀರಿನ ಪೈಪ್ ಒಡೆಯುವ ಸಾಧ್ಯತೆಯಿದೆ.
ರಾಷ್ಟ್ರೀಯ ಹೆದ್ದಾರಿಯ ತುಂಬೆ ಸಮೀಪದ ರಾಮಲ್‌ಕಟ್ಟೆ ತಿರುವಿನಲ್ಲಿ ತುಂಬೆಯಿಂದ ನೀರು ಪೂರೈಕೆ ಮಾಡುವ ಪೈಪ್ ಹಾದುಹೋಗಿದೆ. ಈ ಪೈಪ್‌ಲೈನ್‌ನ ಮೇಲೆಯೇ ಖಾಸಗಿ ಕೆಂಪನಿವೊಂದು ಮಣ್ಣು ಹಾಕಿದ್ದಲ್ಲದೆ, ಜಮೀನಿಗೆ ಹೋಗಲು ರಸ್ತೆಯನ್ನು ಮಾಡಿದೆ. ಅದಲ್ಲದೆ, ಪೈಪ್‌ಲೈನ್‌ಗೆ ತಾಗಿಕೊಂಡೇ ಕಾಮಗಾರಿಯ ಬೃಹತ್ ಕಾಂಕ್ರಿಟ್ ಪಿಲ್ಲರನ್ನು ಹಾಕಿದೆ. ತುಂಬೆಯ ಸಮೀಪ ರಾಮಲ್‌ಕಟ್ಟೆಯಲ್ಲಿ ಹಾದುಹೋಗಿರುವ ಪೈಪ್ ನೆಲದಿಂದ ಮುಕ್ಕಾಲು ಭಾಗ ಮೇಲಿದೆ. ಇದಕ್ಕೆ ಸಿಮೆಂಟ್‌ನಿಂದ ಕವಚ ಮಾಡಲಾಗಿದ್ದು, ಈ ಪೈಪ್‌ನ ಎರಡೂ ಕಡೆಯಲ್ಲೂ ಮಣ್ಣು ಹಾಗೂ ಪಿಲ್ಲರನ್ನು ಹಾಕಲಾಗಿದೆ. ಇವರಿಗೆ ಎನ್‌ಒಸಿ ನೀಡಿದವರಾರು ಎಂಬುವುದು ಗೊತ್ತಿಲ್ಲ?. ಭಾರಿ ಅನಾಹುತ ಸಂಭವಿಸುವ ಮೊದಲು ಮನಪಾ ಅಧಿಕಾರಿಗಳು ಎಚ್ಚೆತ್ತುಕೊಳ್ಳುವ ಮೂಲಕ ಮುಖ್ಯ ಕೊಳವೆ ನಿರ್ವಹಣೆ ಮಾಡಬೇಕಾಗಿದೆ.

Related posts

Leave a Reply

Your email address will not be published. Required fields are marked *