Header Ads
Header Ads
Breaking News

ಅಸೈಗೋಳಿ : ಬಿಜೆಪಿ ಮಹಾಶಕ್ತಿ ಕೇಂದ್ರ ಕಾರ್ಯಾಲಯ ಉದ್ಘಾಟನೆ

ಮಂಗಳೂರು ಕ್ಷೇತ್ರ ಬಿಜೆಪಿ ಕೊಣಾಜೆ ಮಹಾಶಕ್ತಿ ಕೇಂದ್ರದ ಕಚೇರಿ ಉದ್ಘಾಟನೆ ಹಾಗೂ ಜನಬೆಂಬಲ ಯಾತ್ರೆಯ ಅಸೈಗೋಳಿಯಲ್ಲಿ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮ ನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು
ಕೇಂದ್ರ ಸರ್ಕಾರ ಮಂಗಳೂರಿಗೆ ಐಟಿ ಪಾರ್ಕ್ ಮಂಜೂರುಗೊಳಿಸಿದ್ದು ಸರ್ಕಾರ ಜಮೀನು ಕೊಟ್ಟರೆ ಕೊಣಾಜೆಯಲ್ಲಿ ನಿರ್ಮಾಣವಾಗಲಿದೆ.

ಖಾದರ್ ಆರೋಗ್ಯ ಸಚಿವರಾಗಿದ್ದ ಸಂದರ್ಭ ಘೋಷಿಸಿದ್ದ ಬಡವರಿಗೆ ಹಲ್ಲು ಮತ್ತು ಕನ್ನಡಕ ಇದುವರೆಗೂ ಬಂದಿಲ್ಲ. ಆದರೆ ಅವರ ಮನೆಯಲ್ಲಿ ಚಿನ್ನದ ಹಲ್ಲು ಹಾಗೂ ಕನ್ನಡಕ ಬಂದಿದೆ. ಆಹಾರ ಸಚಿವರಾಗಿದ್ದ ಸಂದರ್ಭ ಘೋಷಿಸಿದ್ದ ಅನಿಲ ಯೋಜನೆ ಕೇಂದ್ರ ಸರ್ಕಾರ ನೀಡಿದೆಯೇ ಹೊರತು ರಾಜ್ಯದಿಂದ ಬಂದಿಲ್ಲ ಎಂದು ಟೀಕಿಸಿದರು.

Related posts

Leave a Reply

Your email address will not be published. Required fields are marked *