Header Ads
Header Ads
Header Ads
Breaking News

ಅಸ್ವಸ್ಥ ಮಂಗ ಚಿಕಿತ್ಸೆ ಫಲಕಾರಿಯಾಗದೆ ಸಾವು ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಿದ ಸಾಮಾಜಿಕ ಕಾರ್ಯಕರ್ತರು

ಉಡುಪಿಯ ನಗರದ ಒಳಕಾಡು ವಾರ್ಡಿನಲ್ಲಿ ಅಸ್ವಸ್ಥಗೊಂಡ ಮಂಗವೊಂದು ಪುರುಷೋತ್ತಮ ಶೆಣೈ ಅವರ ಮನೆಯಲ್ಲಿ ಪತ್ತೆಯಾದ ಘಟನೆ ಸೋಮವಾರ ನಡೆದಿದೆ. ಮಾಹಿತಿ ತಿಳಿದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ಶಿರೂರು ತಾರಾನಾಥ್ ಮೇಸ್ತ ಸ್ಥಳಕ್ಕೆ ಭೇಟಿ ನೀಡಿ, ವಸ್ತುಸ್ಥಿತಿ ಅರಿತು ಚಿಂತಾಜನಕ ಪರಿಸ್ಥಿತಿಯಲ್ಲಿರುವ ಮಂಗದ ಜೀವ ರಕ್ಷಣೆಗೆ ಮುಂದಾಗಿದ್ದಾರೆ. ತಕ್ಷಣ ವಿಚಾರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ರವಾನಿಸಿದ್ದಾರೆ.

ಸ್ಥಳಕ್ಕೆ ಧಾವಿಸಿ ಬಂದ ಪಾರೆಸ್ಟರ್ ದಯಾನಂದ್, ಮತ್ತು ಸಿಬ್ಭಂದಿಗಳು ಮಂಗವನ್ನು ಸೆರೆ ಹಿಡಿದು, ಸಾಮಾಜಿಕ ಕಾರ್ಯಕರ್ತರ ಸಹಕಾರದೊಂದಿಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಅಂಬುಲೇನ್ಸ್ ನಲ್ಲಿ ಪಶು ಚಿಕಿತ್ಸಾಲಯಕ್ಕೆ ಸಾಗಿಸಿದರು. ಪಶುವೈದ್ಯಾಧಿಕಾರಿ ಡಾ. ರಾಜಶೇಖರ ಚಿಕಿತ್ಸೆ ನೀಡಿದರೂ, ಮಂಗದ ಆರೋಗ್ಯದ ಸ್ಥಿತಿ ಗಂಭೀರವಾದರಿಂದ ಚಿಕಿತ್ಸೆ ಫಲಕಾರಿಯಾಗದೆ ಮಂಗ ಮೃತ ಪಟ್ಟಿದೆ. ಹರ್ನಿ ತೊಂದರೆಯಿಂದ ಬಳಲುತ್ತಿದ್ದ ಗಂಡು ಮಂಗದ ಆರೋಗ್ಯದ ಸ್ಥಿತಿ ಅಪಾಯದ ಮಟ್ಟದಲ್ಲಿದ್ದ ಕಾರಣ ಮಂಗವು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.

ಕಾನೂನು ಪ್ರಕ್ರಿಯೆ ನಡೆದ ನಂತರ ಮಂಗದ ಕಳೇಬರವನ್ನು ಆದಿ ಉಡುಪಿ ಅರಣ್ಯ ಇಲಾಖೆಯ ವಠಾರದಲ್ಲಿರುವ ಪ್ರಾಣಿ ದಹನ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಶವಸಂಸ್ಕಾರ ಸಂದರ್ಭ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತರು ಉಪಸ್ಥಿತರಿದ್ದು ಮಂಗದ ಕಳೇಬರಕ್ಕೆ ಹೂ ಹಾರ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು. ಅರಣ್ಯ ಇಲಾಖೆಯ ಸಿಬ್ಭಂದಿಗಳಾದ ದೇವರಾಜ್ ಪಾಣ, ಮಹೇಶ್ ಉಪಸ್ಥಿತರಿದ್ದರು.

Related posts

Leave a Reply