Header Ads
Breaking News

ಅಸ್ಸಾಂನ ಗುಹಾಟಿಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ : ಖೇಲೋ ಇಂಡಿಯಾ ಆಳ್ವಾಸ್‌ಗೆ ಅವಳಿ ಪ್ರಶಸ್ತಿಯ ಗರಿ

ಮೂಡುಬಿದಿರೆ : ಅಸ್ಸಾಂನ ಗುಹಾಟಿಯಲ್ಲಿ ಜರಗುತ್ತಿರುವ ಖೇಲೋ ಇಂಡಿಯಾ ರಾಷ್ಟ್ರೀಯ ಯೂತ್ ಗೇಮ್ಸ್‌ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ಉಷಾ ಎಸ್.ಆರ್. ರಾಷ್ಟ್ರೀಯ ನೂತನ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಹಾಗೂ ಕುಶಾಲ್ ಗೌಡ ಅವರು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. 

ಮಹಿಳಾ ವಿಭಾಗದ 87 ಕೆ.ಜಿ ದೇಹತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದ ಉಷಾ.ಎಸ್.ಆರ್ ನೂತನ ಯೂತ್ ಗೇಮ್ಸ್ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕ ಪಡೆದರು. ಪುರುಷರ ವಿಭಾಗದ 109 ಕೆ.ಜಿ ಮೇಲ್ಪಟ್ಟ ವಿಭಾಗದಲ್ಲಿ ಸ್ಪರ್ಧಿಸಿದ್ದ ಕುಶಾಲ್ ಗೌಡ ೧೩೦ ಕೆ.ಜಿ ಸ್ನಾಚ್ 165 ಕೆ.ಜಿ ಕ್ಲೀನ್ ಮತ್ತು ಜರ್ಕ್ ಒಟ್ಟು 295 ಕೆ.ಜಿ ಭಾರವನ್ನೆತ್ತಿ ಕಂಚಿನ ಪದಕ ಪಡೆದರು. ಕುಶಾಲ್ ಗೌಡ ಅವರು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ತೃತೀಯ ಬಿ.ಎ. ವಿದ್ಯಾರ್ಥಿಯಾಗಿದ್ದು, ಉಷಾ ಎಸ್.ಆರ್ ದ್ವಿತೀಯ ಬಿ.ಎ. ವಿದ್ಯಾರ್ಥಿನಿಯಾಗಿದ್ದಾರೆ. ಇವರುಗಳ ಸಾಧನೆಗೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.

 

Related posts

Leave a Reply

Your email address will not be published. Required fields are marked *