
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ದ.ಕ ಜಿಲ್ಲೆ ಇದರ ಮೂಡುಬಿದಿರೆ ತಾಲೂಕು ಸಮಿತಿಯನ್ನು ದ.ಕ ಅ.ಭಾ.ಸಾ.ಪ ದ ಗೌರವಾಧ್ಯಕ್ಷ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ಎಂಸಿಎಸ್ ಬ್ಯಾಂಕಿನ “ಕಲ್ಪವೃಕ್ಷ” ಸಭಾಂಗಣದಲ್ಲಿ ಉದ್ಘಾಟಿಸಿದರು.
ನಂತರ ಮಾತನಾಡಿದ ಡಾ.ಆಳ್ವ ಅವರು ನಮ್ಮದೇ ಆಗಿರುವ ವಿಚಾರಗಳು, ದೇಶೀಯ ಕ್ರೀಡೆಗಳು, ಸಂಸ್ಕøತಿ, ಜಾತಿಗಳು, ಪ್ರಾದೇಶಿಕ ಭಾಷೆಗಳು ಇದ್ದುಕೊಂಡಿರುವ ವೈವಿದ್ಯಮಯವಾದ ದೇಶ ನಮ್ಮದು. ಇವುಗಳನ್ನು ಎತ್ತರಕ್ಕೆ ಬೆಳೆಸುವಂತಹ ಅತೀ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಉದ್ಯಮಿ ಶ್ರೀಪತಿ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅ.ಭಾ.ಸಾ.ಪ. ಕರ್ನಾಟಕದ ಕಾರ್ಯದರ್ಶಿ ಡಾ.ಮಾಧವ ಮೂಡುಕೊಣಾಜೆ, ಮಂಗಳೂರು ವಿಭಾಗದ ಸಂಯೋಜಕ ಶೈಲೆಶ್ ಕುಲಾಲ್ ಗೌರವ ಉಪಸ್ಥಿತರಿದ್ದರು.