Header Ads
Header Ads
Breaking News

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ವಿಚಾರ: ವಿಟ್ಲದಲ್ಲಿ ಅ.12ರಂದು ಶಾಂತಿಯುತ ಮೆರವಣಿಗೆ

ವಿಟ್ಲ: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಸುಮಾರು 46 ವರ್ಷಗಳಿಂದ ನಿರಂತರವಾಗಿ ಯಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಆಚಾರ ವಿಚಾರಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ, ಮಹಿಳೆಯರು ತೆರಳಬಹುದು ಎಂದು ಭಕ್ತರ ಭಾವನಾತ್ಮಕ ವಿಚಾರಕ್ಕೆ ಧಕ್ಕೆಯನ್ನು ಉಂಟು ಮಾಡಿದೆ. ಅ.12ರಂದು ವಿಟ್ಲದಲ್ಲಿ ಅಯ್ಯಪ್ಪ ಭಕ್ತಾದಿಗಳು ಸೇರಿ ಶಾಂತಿಯುತ ಮೆರವಣಿಗೆ ನಡೆಸಲಿದ್ದಾರೆ ಎಂದು ವಿಟ್ಲ ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನದ ನಾರಾಯಣ ಯಾನೆ ಬಟ್ಟುಸ್ವಾಮಿ ಹೇಳಿದರು.

ಅವರು ಬುಧವಾರ ವಿಟ್ಲದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶಬರಿಮಲೆ ಪಾವಿತ್ರ್ಯತೆ ಉಳಿಸಿ ವಿಟ್ಲ ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಪಟ್ಲ ಮಾತನಾಡಿ ಶುಕ್ರವಾರ ಬೆಳಗ್ಗೆ 9ಗಂಟೆಗೆ ಜೈನ ಬಸದಿಯ ಬಳಿ ವಿಟ್ಲ ಸೀಮೆಯ ಮಹಿಳಾ ಅಯ್ಯಪ್ಪ ಭಕ್ತರು ಸಹಿತ ಪರ ಊರಿನ ಅಯ್ಯಪ್ಪ ಭಕ್ತಾದಿಗಳು ಸೇರಿ ಶಾಂತಿಯುತ ಮೆರವಣಿಗೆ ಮೂಲಕ ವಿಟ್ಲ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಸೇರಿ, ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಸಭೆ ನಡೆಸಲಾಗುವುದು. ಮೆರವಣಿಗೆಯಲ್ಲಿ ಶಬರಿಮಲೆ ಯಾತ್ರೆ ಮಾಡುತ್ತಿರುವ ಅನೇಕ ಗುರುಸ್ವಾಮಿಗಳು ಹಾಗೂ ಶಿಷ್ಯವೃಂದ ಭಾಗವಹಿಸಲಿದೆ.

ಭಕ್ತಾಧಿಗಳ ಕೋರಿಕೆಯನ್ನು ಸರ್ಕಾರಕ್ಕೆ ಹಾಗೂ ರಾಜ್ಯಪಾಲರಿಗೆ ಅಧಿಕಾರಿಗಳ ಮೂಲಕ ಕಳುಹಿಸಿ ಕೊಡಲಾಗುವುದು ಎಂದರು. ವಿಟ್ಲ ಶ್ರೀ ಭಗವತಿ ಭಕ್ತವೃಂದದ ಮೋನಪ್ಪ ಗುರುಸ್ವಾಮಿ, ಶಬರಿಮಲಾ ಪಾವಿತ್ರ್ಯತೆ ಉಳಿಸಿ ವಿಟ್ಲ ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಪಟ್ಲ, ಪ್ರಧಾನ ಸಂಚಾಲಕರಾದ ಅರುಣ ಎಂ. ವಿಟ್ಲ, ರಮಾನಾಥ ವಿಟ್ಲ, ಕಾರ್ಯಾಧ್ಯಕ್ಷ ಬಿಕೆ ರವಿ ದಲ್ಕಾಜೆ, ಪ್ರಧಾನ ಕಾರ್ಯದರ್ಶಿ ಶಿವಾನಂದ ರೈ ಕೊಲ್ಯ, ಕಾರ್ಯದರ್ಶಿ ಪ್ರವೀಣ್ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.

 

 

Related posts

Leave a Reply