Header Ads
Header Ads
Breaking News

ಅ.15ರಂದು ಸುಳ್ಯದಲ್ಲಿ ಅಯ್ಯಪ್ಪ ಭಕ್ತರ ಪ್ರತಿಭಟನೆ

ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತ ತೀರ್ಪಿನಿಂದ ಕೋಟ್ಯಂತರ ಅಯ್ಯಪ್ಪ ಭಕ್ತರ ಭಾವನೆಗಳಿಗೆ ಘಾಸಿಯಾಗಿದ್ದು, ಇದಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಸುಳ್ಯ ತಾಲೂಕಿನ ಸಮಸ್ತ ಅಯ್ಯಪ್ಪ ಸ್ವಾಮಿ ಭಕ್ತರ ನೇತೃತ್ವದಲ್ಲಿ ಅ. 15ರಂದು ಸುಳ್ಯದಲ್ಲಿ ಬೃಹತ್ ಹಕ್ಕೊತ್ತಾಯ ಮೆರವಣಿಗೆ ಮತ್ತು ಪ್ರತಿಭಟನಾ ಸಭೆ ನಡೆಯಲಿದೆ ಎಂದು ಸುಳ್ಯ ತಾಲೂಕು ಅಯ್ಯಪ್ಪ ಭಕ್ತ ಮಹಾ ಸಭಾ ಅಧ್ಯಕ್ಷ ಪಿ.ಬಿ. ಸುಧಾಕರ್ ರೈ ಹೇಳಿದರು.

ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಶಬರಿಮಲೆಯ ಪರಂಪರಾಗತ ಆಚಾರ ವಿಚಾರವನ್ನು ರಕ್ಷಿಸಲು, ತೀರ್ಪಿನ ಮರುಪರಿಶೀಲನೆಗೆ ರಾಜ್ಯ ಮತ್ತು ಕೇಂದ್ರ ಸರಕಾರ ಮರುಪರಿಶೀಲನಾ ಅರ್ಜಿ ಅಲ್ಲಿಸಬೇಕು ಮತ್ತು ಸುಗ್ರೀವಾಜ್ಞೆ ಮೂಲಕ ಭಕ್ತರ ಭಾವನೆಗಳ ರಕ್ಷಣೆಗೆ ಕೇಂದ್ರ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು. 15 ರಂದು ಬೆಳಿಗ್ಗೆ ಸುಳ್ಯದ ಜ್ಯೋತಿ ವೃತ್ತದಿಂದತಾಲೂಕು ಕಚೇರಿಯವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ. ತಾಲೂಕು ಕಚೇರಿ ಬಳಿ ಹಕ್ಕೋತ್ತಾಯ ನಡೆಸಿ ತಹಶೀಲ್ದಾರ್ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಕಾರ್ಯಕ್ರಮದಲ್ಲಿ ಸುಮಾರು 5000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ತಾ.ಪಂ ಅಧ್ಯಕ್ಷ ಚನಿಯ ಕಲ್ತಡ್ಕ, ಭಕ್ತ ಮಹಾ ಸಭಾ ಪ್ರದಾನ ಕಾರ್ಯದರ್ಶಿ ಮಹೇಶ್ ಕುಮಾರ್ ಮೇನಾಲ, ಸಂಚಾಲಕ ಸುರೇಶ್ ಕಣೆಮರಡ್ಕ, ಕಾನೂನು ಸಲಹೆಗಾರ ರಾಮಕೃಷ್ಣ ಅಮೈ, ಕೆಂಚಪ್ಪ ಗುರುಸ್ವಾಮಿ, ಪದ್ಮನಾಭ ಗುರುಸ್ವಾಮಿ, ಸಂತೋಷ್ ಗುರುಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.
ವರದಿ: ಪದ್ಮನಾಭ ಸುಳ್ಯ

Related posts

Leave a Reply